ಅತಿ ತೂಕದ ಮಹಿಳೆ ನಿಧನ
Team Udayavani, Sep 26, 2017, 7:10 AM IST
ಅಬುಧಾಬಿ: ವಿಶ್ವದ ಅತಿ ತೂಕದ ಮಹಿಳೆ ಈಜಿಪ್ಟ್ನ ಎಮಾನ್ ಅಬ್ದುಲ್ ಅಟ್ಟಿ (37) ನಿಧನರಾಗಿದ್ದಾರೆ. ತೂಕ ಇಳಿಸುವಿಕೆಯ ಚಿಕಿತ್ಸೆಗಾಗಿ ಅವರು ಅಬುಧಾಬಿಯ ಆಸ್ಪತ್ರೆಗೆ ದಾಖಲಾಗಿದ್ದರು. ದೇಹದ ತೂಕ ಸಮಸ್ಯೆ ಜತೆಗೆ ಹೃದಯದ ತೊಂದರೆ, ಮೂತ್ರಪಿಂಡದ ವೈಫಲ್ಯ ಸೇರಿದಂತೆ ಹಲವು ಅನಾರೋಗ್ಯಗಳು ಅವರನ್ನು ಕಾಡುತ್ತಿದ್ದವು. ಹೀಗಾಗಿ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಮುಂಬೈನ ಸೈಫಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅವರ ತೂಕ 500 ಕೆಜಿ ಇತ್ತು. ಅವರಿಗೆ ಜನಪ್ರಿಯ ವೈದ್ಯ ಡಾ.ಮುಫಾಜಲ್ ಲಖಡವಾಲಾ ನೇತೃತ್ವದ 15 ಮಂದಿ ತಜ್ಞರ ತಂಡ ಚಿಕಿತ್ಸೆ ನೀಡುತ್ತಿತ್ತು. ಈ ವೇಳೆ ಅವರು 300 ಕೆಜಿಗಿಂತ ಅಧಿಕ ತೂಕ ಇಳಿಸಿಕೊಂಡಿದ್ದರು. ಒಂದು ಹಂತದಲ್ಲಿ ಎಮಾನ್‌ರ ಸಹೋದರಿ ಆಸ್ಪತ್ರೆ ಆಡಳಿತ ಮಂಡಳಿ ಜತೆಗೆ ತಗಾದೆ ತೆಗೆದು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನಡೆಸಲಾಗುತ್ತಿಲ್ಲವೆಂದು ಆರೋಪಿಸಿದ್ದರು.
ಈ ಬೆಳವಣಿಗೆ ಬಳಿಕ ಎಮಾನ್‌ರನ್ನು ಯುಇಎಯ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ತಿಂಗಳ ಹಿಂದಷ್ಟೇ ಎಮಾನ್ ಹೆಚ್ಚಿನ ಪ್ರಮಾಣದಲ್ಲಿ ತೂಕ ಇಳಿಸಿಕೊಂಡು ಆಸ್ಪತ್ರೆಯ ಬೆಡ್ ಮೇಲೆ ಡ್ಯಾನ್ಸ್ ಮಾಡಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ನಿಧನದ ಬಗ್ಗೆ ಶೋಕಿಸಿರುವ ಮುಂಬೈನ ಸೈಫಿ ಆಸ್ಪತ್ರೆ ವೈದ್ಯ ಡಾ.ಲಖಡವಾಲ ಭಾರತದಲ್ಲಿ ಅವರ ಚಿಕಿತ್ಸೆಗೆ 3 ಕೋಟಿ ರೂ. ವೆಚ್ಚವಾಗಿತ್ತು. ಆಸ್ಪತ್ರೆ ಅವರಿಗೆ ಯಾವುದೇ ರೀತಿಯಲ್ಲಿ ಶುಲ್ಕ ವಿಧಿಸಿರಲಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.