ಸಿಬ್ಬಂದಿ ಮೇಲೆ ದೌರ್ಜನ್ಯ: ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಿಗೆ 4.5 ವರ್ಷ ಜೈಲು ಶಿಕ್ಷೆ
Team Udayavani, Jun 22, 2024, 8:57 AM IST
ಜಿನೀವಾ: ತಮ್ಮ ಮನೆ ಕೆಸದಾಳುವನ್ನು ನಿಂದಿಸಿ, ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತ ಮೂಲದ ಶ್ರೀಮಂತ ಕುಟುಂಬವಾದ ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಿಗೆ ಸ್ವಿಟ್ಜರ್ಲೆಂಡ್‌ನ ನ್ಯಾಯಾಲಯವು ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ನ್ಯಾಯಾಲಯವು ಉದ್ಯಮಿ ಪ್ರಕಾಶ್ ಹಿಂದುಜಾ ಮತ್ತು ಕಮಲ್ ಹಿಂದುಜಾಗೆ ನಾಲ್ಕೂವರೆ ವರ್ಷ ಶಿಕ್ಷೆ ವಿಧಿಸಿದೆ ಮತ್ತು ಮಗ ಅಜಯ್ ಹಾಗೂ ಸೊಸೆ ನಮ್ರತಾ ಹಿಂದುಜಾಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ. ಇದರೊಂದಿಗೆ, ಹಿಂದೂಜಾ ಕುಟುಂಬಕ್ಕೆ 950,000 (ಅಮೆರಿಕಾ ಡಾಲರ್) ಪರಿಹಾರವನ್ನು ಮತ್ತು 300,000(ಅಮೆರಿಕ ಡಾಲರ್) ಪ್ರಕ್ರಿಯೆ ಶುಲ್ಕವನ್ನು ಪಾವತಿಸಲು ನ್ಯಾಯಾಲಯವು ನಿರ್ದೇಶಿಸಿದೆ, ಈ ಪ್ರಕರಣವು ಜಿನೀವಾದಲ್ಲಿರುವ ಹಿಂದೂಜಾ ಕುಟುಂಬದ ಬಂಗಲೆಗೆ ಸಂಬಂಧಿಸಿದ್ದಾಗಿದೆ ಎಂದು ವರದಿ ಮಾಡಿದೆ.
ಸಾಕುನಾಯಿಗೆ ವರ್ಷಕ್ಕೆ ೮ ಲಕ್ಷ ಖರ್ಚು:
ಮನೆಕೆಲಸದ ಮಹಿಳೆಯ ಹೇಳಿಕೆಯಂತೆ ಮಹಿಳೆಗೆ ದಿನಕ್ಕೆ ಹದಿನಾರು ಗಂಟೆ ಕೆಲಸ ಮಾಡಿಸಿ ದಿನಕ್ಕೆ ಕೇವಲ 650 ರೂ. ಸಂಬಳ ನೀಡುತ್ತಿದ್ದರು ಆದರೆ ಅವರ ಮನೆಯ ನಾಯಿಗೆ ವರ್ಷಕ್ಕೆ ಎಂಟು ಲಕ್ಷ ಖರ್ಚು ಮಾಡುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
16 ಗಂಟೆಗೂ ಹೆಚ್ಚು ಕೆಲಸ ಮಾಡಿದ ಆರೋಪ
ಕೋರ್ಟ್ ನೀಡಿದ ತೀರ್ಪಿನಲ್ಲಿ ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಾದ ಪ್ರಕಾಶ್ ಹಿಂದೂಜಾ, ಅವರ ಪತ್ನಿ ಕಮಲ್ ಹಿಂದೂಜಾ, ಅವರ ಮಗ ಅಜಯ್ ಹಿಂದುಜಾ ಮತ್ತು ಅವರ ಸೊಸೆ ನಮ್ರತಾ ಹಿಂದುಜಾ – ಕಾರ್ಮಿಕ ಕಾನೂನು ಉಲ್ಲಂಘನೆ, ಮಾನವ ಕಳ್ಳಸಾಗಣೆ, ಮನೆಗೆಲಸದವರ ಮೇಲೆ ನಿರಂತರ ದೌರ್ಜನ್ಯ ಸೇರಿ ಹಲವು ಪ್ರಕರಣಗಳಲ್ಲಿ ನಾಲ್ವರನ್ನೂ ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.
ಮನೆಕೆಲಸ ಮಾಡುತಿದ್ದ ಮಹಿಳೆಯ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು ದೇಶ ಬಿಟ್ಟು ಹೊರ ಹೋಗದಂತೆ ತಡೆಹಿಡಿದಿದ್ದರು, ಅಲ್ಲದೆ ದಿನಕ್ಕೆ ಸುಮಾರು ಹದಿನಾರು ಗಂಟೆಗೂ ಅಧಿಕ ಕೆಲಸ ಮಾಡುವಂತೆ ಒತ್ತಾಯ ಮಾಡುತ್ತಿದ್ದರು, ಜೊತೆಗೆ ಕೆಲಸದವರಿಗೆ ರಜೆ ಕೂಡ ನೀಡುತ್ತಿರಲಿಲ್ಲ. ಅಲ್ಲದೇ ಕರೆನ್ಸಿಯಲ್ಲಿ ಸಂಬಳ ನೀಡುತ್ತಿದ್ದ ಕಾರಣ ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಖರ್ಚು ಮಾಡಲು ಹಣವಿರುತ್ತಿರಲಿಲ್ಲ ಎಂದು ಆರೋಪಿಸಲಾಗಿದ್ದು ಈಗ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಆದರೆ ಈ ಎಲ್ಲ ಆರೋಪಗಳನ್ನು ಹಿಂದೂಜಾ ಕುಟುಂಬದ ಪರ ವಕೀಲರು ತಳ್ಳಿ ಹಾಕಿದ್ದಾರೆ. ಈ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮ್ಯಾನೇಜರ್ ನಜೀಬ್ ಜಿಯಾಜಿ ಕೂಡ ಆರೋಪಿಯಾಗಿದ್ದು ಕೋರ್ಟ್ ಆತನಿಗೂ ಶಿಕ್ಷೆ ವಿಧಿಸಿದೆ.
ಶಿಕ್ಷೆಯ ವೇಳೆ ಹಿಂದೂಜಾ ಕುಟುಂಬದ ಸದಸ್ಯರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ:
ಶಿಕ್ಷೆಯ ವೇಳೆ ಹಿಂದೂಜಾ ಕುಟುಂಬದ ನಾಲ್ವರು ಜಿನೀವಾ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಆದರೆ, ಅವರ ಕುಟುಂಬದ ಬಿಸಿನೆಸ್ ಮ್ಯಾನೇಜರ್ ನಜೀಬ್ ಜಿಯಾಜಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ಮ್ಯಾನೇಜರ್‌ಗೆ 18 ತಿಂಗಳ ಅಮಾನತು ಶಿಕ್ಷೆಯನ್ನೂ ವಿಧಿಸಿದೆ. ಕಾರ್ಮಿಕರ ಶೋಷಣೆ ಮತ್ತು ಅನಧಿಕೃತ ಉದ್ಯೋಗ ನೀಡಿದ ಆರೋಪದಲ್ಲಿ ಹಿಂದೂಜಾ ಕುಟುಂಬದ ಎಲ್ಲಾ ನಾಲ್ವರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.
14 ಬಿಲಿಯನ್ ಮೌಲ್ಯದ ಆಸ್ತಿ:
ಹಿಂದುಜಾ ಕುಟುಂಬವು ಹಣಕಾಸು, ಮಾಧ್ಯಮ ಮತ್ತು ಇಂಧನ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ ಮತ್ತು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಆರು ಭಾರತೀಯ ಕಂಪನಿಗಳಲ್ಲಿ ಪಾಲನ್ನು ಹೊಂದಿದೆ. ಅವರ ಸಾಮೂಹಿಕ ಸಂಪತ್ತು ಕನಿಷ್ಠ $14 ಬಿಲಿಯನ್ ಆಗಿದ್ದು, ಏಷ್ಯಾದ ಅಗ್ರ 20 ಶ್ರೀಮಂತ ಕುಟುಂಬಗಳಲ್ಲಿ ಅವರನ್ನು ಶ್ರೇಣೀಕರಿಸಿದೆ. ಪ್ರಕಾಶ್ ಹಿಂದುಜಾ ಮತ್ತು ಅವರ ಸಹೋದರರು ಮಾಹಿತಿ ತಂತ್ರಜ್ಞಾನ, ಮಾಧ್ಯಮ, ವಿದ್ಯುತ್, ರಿಯಲ್ ಎಸ್ಟೇಟ್ ಮತ್ತು ಆರೋಗ್ಯ ಕ್ಷೇತ್ರಗಳನ್ನು ವ್ಯಾಪಿಸಿರುವ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಫೋರ್ಬ್ಸ್ ಹಿಂದೂಜಾ ಕುಟುಂಬದ ನಿವ್ವಳ ಮೌಲ್ಯ ಸುಮಾರು $20 ಬಿಲಿಯನ್ ಎಂದು ಅಂದಾಜಿಸಿದೆ.
ಇದನ್ನೂ ಓದಿ: ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.