ಮಲ್ಯ ಮನೇಲಿ ಚಿನ್ನದ ಟಾಯ್ಲೆಟ್
Team Udayavani, Aug 12, 2018, 6:00 AM IST
ಲಂಡನ್: ಭಾರತೀಯ ಬ್ಯಾಂಕುಗಳಿಂದ ತಾವು ಪಡೆದಿದ್ದ 9 ಸಾವಿರ ಕೋಟಿ ರೂ. ಹಿಂದಿರು ಗಿಸದೇ ಲಂಡನ್ಗೆ ಪರಾರಿಯಾಗಿರುವ ಮದ್ಯೋದ್ಯಮಿ ವಿಜಯ್ ಮಲ್ಯ, ಮೇಲ್ನೋಟಕ್ಕೆ ದಿವಾಳಿಯ ಹಣೆಪಟ್ಟಿ ಅಂಟಿಸಿಕೊಂಡಿದ್ದರೂ, ತಮ್ಮ ಐಶಾರಾಮಿ ಜೀವನವನ್ನು ಹಾಗೇ ಕಾಪಾಡಿಕೊಂಡಿದ್ದು, ಅವರ ಮನೆಯ ಟಾಯ್ಲೆಟ್ ಕೂಡ ಬಂಗಾರದಿಂದ ಮಾಡಿಸಲ್ಪಟ್ಟಿದೆ ಎಂದು ವರದಿಯೊಂದು ಹೇಳಿದೆ.
ಸಿಂಗಾಪುರದ ಲೀ ಕುವಾನ್ ಯೀವ್ ಸ್ಕೂಲ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಜೇಮ್ಸ್ ಕ್ರಾಬ್ಟ್ರೀ ಎಂಬುವರು ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಲ್ಯ ಬಂಗಲೆಯ ಟಾಯ್ಲೆಟ್ ವಿಚಾರ ತಿಳಿಸಿದ್ದನ್ನು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ವರದಿಯ ಪ್ರಕಾರ, ಇತ್ತೀಚೆಗೆ, ಜೇಮ್ಸ್ ಅವರು ಲಂಡನ್ನ ರೀಜೆಂಟ್ ಪಾರ್ಕ್ ನಲ್ಲಿರುವ ವಿಜಯ್ ಮಲ್ಯ ಬಂಗಲೆಗೆ ಭೇಟಿ ನೀಡಿದ್ದರು. ಆ ವೇಳೆ ಅವರ ಬಂಗಲೆ ಟಾಯ್ಲೆಟ್ ನೋಡುವ “ಸುವರ್ಣಾವಕಾಶ’ (!) ಲಭ್ಯವಾಗಿತ್ತು. ಒಳ ಹೋದ ಕೂಡಲೇ ಚಿನ್ನದ ಟಾಯ್ಲೆಟ್ ನೋಡಿದ ಜೇಮ್ಸ್ ಹುಬ್ಬೇರಿಸಿದ್ದರಂತೆ.
ಇದನ್ನು ತಮ್ಮ ಮಾತುಗಳಲ್ಲಿ ವರ್ಣಿಸಿರುವ ಜೇಮ್ಸ್, “”ಅಲ್ಲಿನ ಗೋಲ್ಡನ್ ಟಾಯ್ಲೆಟ್ಗೆ ಗೋಲ್ಡನ್ ರಿಂಗ್ ಇತ್ತು. ನೀರಿನ ಪುಟ್ಟ ಟ್ಯಾಂಕು, ಅದರ ಮುಚ್ಚಳ ಎಲ್ಲವೂ ಬಂಗಾರದ್ದೇ ಆಗಿತ್ತು. ಆದರೆ, ವಿಪರ್ಯಾಸ ಎಂದರೆ ಟಾಯ್ಲೆಟ್ನಲ್ಲಿ ಇಡಲಾಗಿದ್ದ ಟಿಶ್ಯೂ ಪೇಪರ್ ಮಾತ್ರ ಕೇವಲ ಪೇಪರ್ನದ್ದಾಗಿತ್ತೇ ಹೊರತು ಬಂಗಾರದ್ದಾಗಿರ ಲಿಲ್ಲ” ಎಂದು ಹಾಸ್ಯಭರಿತವಾಗಿ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.