ಹದ್ದಿಗೆ ಆಟ, ವಿಜ್ಞಾನಿಗಳಿಗೆ ಸಂಕಟ
ಹದ್ದು ನಡೆಸಿದ ವಿದೇಶಿ ಪ್ರವಾಸಕ್ಕೆ ವಿಜ್ಞಾನಿಗಳೇ ದಿವಾಳಿ
Team Udayavani, Oct 27, 2019, 5:56 AM IST
ನೊವೊಸಿಬಿಸ್ಕ್(ರಷ್ಯಾ): ಜಿಪಿಎಸ್ ಮೂಲಕ ವಲಸೆ ಹದ್ದುಗಳನ್ನು ಟ್ರ್ಯಾಕ್ ಮಾಡುತ್ತಿದ್ದ ರಷ್ಯಾದ ವಿಜ್ಞಾನಿಗಳು ಈಗ ದಿವಾಳಿಯಂಚಿಗೆ ತಲುಪಿದ್ದಾರೆ. ಹದ್ದುಗಳಿಗೂ ದಿವಾಳಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ?
ಖಂಡಿತಾ ಸಂಬಂಧ ಇದೆ. ಟ್ರ್ಯಾಕಿಂಗ್‌ಗೆ ಒಳಗಾಗುತ್ತಿದ್ದ ಹದ್ದುವೊಂದು ನೇರವಾಗಿ ರಷ್ಯಾದಿಂದ ಇರಾನ್‌ಗೆ ಹಾರಿದ್ದೇ ಈ ಎಲ್ಲ ಸಂಕ ಷ್ಟಕ್ಕೂ ಕಾರಣ. ವಿಜ್ಞಾನಿಗಳು ಸುಮಾರು 13 ಹದ್ದುಗಳನ್ನು ಟ್ರ್ಯಾಕ್ ಮಾಡುತ್ತಿದ್ದರು. ಅವು ಗಳ ಚಲನವಲನಗಳು ಗೊತ್ತಾಗಲೆಂದು ಜಿಪಿಎಸ್ ಕೂಡ ಅಳವಡಿಸಿದ್ದರು.
ಹದ್ದುಗಳು ಎಲ್ಲಿಗೆ ಹೋದರೂ ಅಲ್ಲಿಂದ ವಿಜ್ಞಾನಿಗಳಿಗೆ ಸಂದೇಶ ಬರುತ್ತಿದ್ದವು. ಆದರೆ, ಮಿನ್ ಎಂಬ ಹೆಸರಿನ ಒಂದು ಹದ್ದು ಕಜಕಿಸ್ಥಾನದಿಂದ ಏಕಾಏಕಿ 48,000 ಕಿ.ಮೀ. ದೂರ ಹಾರುತ್ತಾ ಇರಾನ್ ತಲುಪಿದೆ. ಅದು ಕಜಕಿಸ್ಥಾನದಲ್ಲಿದ್ದಾಗ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ, ಅಲ್ಲಿಂದ ಬರಬೇಕಿದ್ದ ಎಲ್ಲ ಸಂದೇಶಗಳೂ ರವಾನೆಯಾಗದೇ ಉಳಿದಿದ್ದವು. ಹದ್ದು ಇರಾನ್ ತಲುಪಿದೊಡನೆ ಒಮ್ಮೆಗೇ ಸಂದೇಶಗಳ ಮಹಾಪೂರವೇ ಹರಿದುಬಂದಿದೆ. ಇರಾನ್‌ನಲ್ಲಿ ಒಂದು ಎಸ್ಸೆಮ್ಮೆಸ್‌ಗೆ 54.28 ರೂ. ಶುಲ್ಕವಿದ್ದು, ಎಸ್‌ಎಂಎಸ್ ಪ್ರಸರಣದಾರರು ಡೇಟಾ ರೋಮಿಂಗ್ ಶುಲ್ಕವೆಂದು ವಿಜ್ಞಾನಿಗಳಿಗೆ ಭಾರೀ ಮೊತ್ತದ ಬಿಲ್ ಕಳುಹಿಸಿಕೊಟ್ಟಿದ್ದಾರೆ.
ಈ ಶುಲ್ಕ ನೋಡಿ ವಿಜ್ಞಾನಿಗಳು ಹೌಹಾರಿದ್ದಾರೆ. ಅವರು ಹದ್ದುಗಳ ಫೋನ್ ಬಜೆಟ್‌ಗೆಂದು ಮೀಸಲಿಟ್ಟ ಒಟ್ಟು ಮೊತ್ತವನ್ನೂ ಈ ಶುಲ್ಕ ಮೀರಿಹೋಗಿದೆ. ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಟಾಪ್ ಅಪ್ ದಿ ಈಗಲ್ಸ್ ಮೊಬೈಲ್’ ಎಂಬ ಹೆಸರಲ್ಲಿ ಕ್ರೌಡ್ ಫಂಡಿಂಗ್ ಮಾಡಿ ಹಣ ಸಂಗ್ರಹ ಆರಂಭಿಸಿದ್ದಾರೆ. ಈ ವಿಚಾರ ತಿಳಿದ ರಷ್ಯಾದ ಮೊಬೈಲ್ ಆಪರೇಟರ್ ಮೆಗಾಫೋನ್ ಈಗ ವಿಜ್ಞಾನಿಗಳಿಗೆ ವಿನಾಯ್ತಿ ನೀಡಲು ಮುಂದೆ ಬಂದಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.