20 ಗಂಟೆ ಆಡಿ ಆಸ್ಪತ್ರೆ ಸೇರಿದ
Team Udayavani, Feb 3, 2018, 11:45 AM IST
ಬೀಜಿಂಗ್: ಈತ ವಿಡಿಯೋ ಗೇಮ್ ಆಡಿದ್ದು ಒಂದು ಅಥವಾ ಎರಡು ಗಂಟೆಯಲ್ಲ, ಬರೋಬ್ಬರಿ 20 ಗಂಟೆ. ಪರಿಣಾಮ ಏನು ಗೊತ್ತೇ? ಆತನ ಸೊಂಟದ ಕೆಳಗಿನ ಭಾಗಕ್ಕೆ ಪಾರ್ಶ್ವವಾಯು ಉಂಟಾಗಿದೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಕೆಫೆಗಳಲ್ಲಿ ಗಂಟೆಗಟ್ಟಲೆ ವಿಡಿಯೋಗೇಮ್ ಆಡುವವರಿಗೆ ಈ ಘಟನೆಯು ಎಚ್ಚರಿಕೆಯ ಸಂದೇಶ ರವಾನಿಸಿದೆ.
ಅಂದ ಹಾಗೆ ಈ ಘಟನೆ ನಡೆದದ್ದು ಚೀನದ ಝೆಝಿಯಾಂಗ್ ಪ್ರಾಂತ್ಯದ ಜಿಯಾಕ್ಸಿಂಗ್ನಲ್ಲಿ. ಇದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದ್ದು, ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜ.27ರ ಸಂಜೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ಗೇಮ್ ಆಡಲು ಶುರು ಮಾಡಿದಾತ ಜ.28ರ ಮಧ್ಯಾಹ್ನದ ವರೆಗೆ ಆಟ ಮುಂದುವರಿಸಿದ್ದ. ಆತ ಶೌಚಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ಕುರ್ಚಿಯಿಂದ ಏಳಲು ಯತ್ನಿಸಿದ. ಅಷ್ಟರಲ್ಲಿ ಆತನ ಸೊಂಟದ ಕೆಳಭಾಗ ಸಂಪೂರ್ಣ ಶಕ್ತಿ ಕಳೆದುಕೊಂಡಿತ್ತು. ಅಲ್ಲಿದ್ದ ಆತನ ಸ್ನೇಹಿತ ನೆರವಾದರೂ ಸಾಧ್ಯವಾಗಲಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಕೆಲವರು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಅದು ವೈರಲ್ ಆಗಿದೆ. ಸದ್ಯ ಆತ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೆಚ್ಚುತ್ತಿರುವ ಪಿಡುಗು: ಚೀನದ ಯುವ ಜನರಲ್ಲಿ ವಿಡಿಯೋ ಗೇಮ್ ಖಯಾಲಿ ಹೆಚ್ಚಾಗುತ್ತಿದೆ. ಅವರು ವಿದ್ಯಾಭ್ಯಾಸ ತೊರೆದು ಗೇಮ್ನತ್ತವೇ ಆಕರ್ಷಿತರಾಗುತ್ತಿದ್ದಾರೆ. ಕಳೆದ ವಾರ ಹತ್ತು ವರ್ಷದ ಬಾಲಕ ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ 17 ಸಾವಿರ ಪೌಂಡ್ ಅನ್ನು ಗೇಮ್ಗಾಗಿ ವಿಥ್ಡ್ರಾ ಮಾಡಿಕೊಂಡ ಘಟನೆಯೂ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.