ಸಿಲಿಂಡರ್ ಕೊರತೆ: ಪಾಕ್ನಲ್ಲಿ ಪ್ಯಾಸ್ಟಿಕ್ ಚೀಲದಲ್ಲಿ ಅಡುಗೆ ಅನಿಲ!
Team Udayavani, Dec 31, 2022, 9:15 PM IST
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಎಲ್ಪಿಜಿ ಅನಿಲ ತುಂಬಿಸಲು ಸಿಲಿಂಡರ್ಗಳು ಸಿಗುತ್ತಿಲ್ಲವಂತೆ. ಅದಕ್ಕೆ ಅಲ್ಲಿನ ನಾಗರಿಕರು ಪ್ಲಾಸ್ಟಿಕ್ ಚೀಲದಲ್ಲಿ ಅಡುಗೆ ಅನಿಲ ತುಂಬಿಸಿಕೊಂಡು ಬಳಸುತ್ತಿದ್ದಾರೆ!
ಇದು ಪಾಕಿಸ್ತಾನದಲ್ಲಿ ಕುಸಿಯುತ್ತಿರುವ ಆರ್ಥಿಕತೆಯ ಪ್ರತೀಕವಾಗಿದೆ. ಅಲ್ಲದೇ ಅಪಾಯಕಾರಿಯೂ ಹೌದು. ಖೈಬರ್ ಪಖು¤ಂಖ್ವಾ ಪ್ರಾಂತ್ಯದಲ್ಲಿ ನಾಗರಿಕರು ಎಲ್ಪಿಜಿ ಅನಿಲ ತುಂಬಿರುವ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ, ಸರಬರಾಜುದಾರರು ಕೂಡ ಎಲ್ಪಿಜಿ ಅನಿಲ ಸರಬರಾಜಿನಲ್ಲಿ ಕಡಿತ ಮಾಡಿದ್ದಾರೆ.
ವರದಿಯ ಪ್ರಕಾರ, ಖೈಬರ್ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ 2007ರಿಂದ ಇಲ್ಲಿಯವರೆಗೆ ಜನರಿಗೆ ಅನಿಲ ಸಂಪರ್ಕ ಒದಗಿಸಿಲ್ಲ. ಜತೆಗೆ ಅನಿಲ ಪೈಪ್ಲೈನ್ನ ರಿಪೇರಿ ಕೆಲಸ ಬಾಕಿ ಇರುವುದರಿಂದ ಹಂಗು ನಗರಕ್ಕೆ ಕಳೆದ ಎರಡು ವರ್ಷಗಳಿಂದ ಅನಿಲ ಸಂಪರ್ಕ ಸ್ಥಗಿತಗೊಂಡಿದೆ.
ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಅನಿಲ ಸಂಗ್ರಹ ಹೇಗೆ?
ಕಂಪ್ರಸರ್ ಸಹಾಯದಿಂದ ಸರಬರಾಜುದಾರರು, ಪ್ಲಾಸ್ಟಿಕ್ ಬ್ಯಾಗ್ ಅನ್ನು ನಳಿಕೆ ಮತ್ತು ಕವಾಟ ಬಳಸಿ ಬಿಗಿಯಾಗಿ ಕಟ್ಟುತ್ತಾರೆ. ನಂತರ ಪ್ಲಾಸ್ಟಿಕ್ ಬ್ಯಾಗ್ಗೆ ಅನಿಲ ತುಂಬಿಸುತ್ತಾರೆ. 3-4 ಕೆಜಿ ಎಲ್ಪಿಜಿ ಅನಿಲವನ್ನು ಪ್ಲಾಸ್ಟಿಕ್ ಬ್ಯಾಗ್ಗೆ ತುಂಬಲು ಅಂದಾಜು ಒಂದು ಗಂಟೆ ಬೇಕಾಗುತ್ತದೆ. ಒಂದು ಪ್ಲಾಸ್ಟಿಕ್ ಬ್ಯಾಗ್ ಅನಿಲಕ್ಕೆ 500ರಿಂದ 900 ಪಾಕಿಸ್ತಾನಿ ರೂ. ಇದೆ. ಸಾಮಾನ್ಯವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು 10,000 ಪಾಕಿಸ್ತಾನಿ ರೂ. ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.