ವಿಷಾನಿಲ ಪ್ರಯೋಗ ಆರೋಪ ಸುಳ್ಳು: ಅಸ್ಸಾದ್
Team Udayavani, Apr 14, 2017, 3:50 AM IST
ಡಮಾಸ್ಕಸ್/ವಿಶ್ವಸಂಸ್ಥೆ: ಸಿರಿಯಾದ ನಾಗರಿಕರ ಮೇಲೆ ವಿಷಾನಿಲ ಪ್ರಯೋಗ ಮಾಡಿದ ಆರೋಪವನ್ನು ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ತಿರಸ್ಕರಿಸಿದ್ದಾರೆ. ಇದು ಶೇ.ನೂರಕ್ಕೆ ನೂರು ಸುಳ್ಳು ಎಂದಿದ್ದಾರೆ. ತಮ್ಮ ನೇತೃತ್ವದ ಸೇನೆಯ ಮೇಲೆ ಅಮೆರಿಕ ನಡೆಸಿದ ದಾಳಿ ಸಮರ್ಥಿಸಲು ಈ ವಾದ ಮುಂದಿಡಲಾಗುತ್ತದೆ ಎಂದಿದ್ದಾರೆ. ವರ್ಷಗಳ ಹಿಂದೆಯೇ ನಿಷೇಧಿತ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ. ಹೀಗಿರುವಾಗ ಅವುಗಳನ್ನು ಬಳಸುವ ಮಾತೇ ಇಲ್ಲ ಎಂದಿದ್ದಾರೆ ಅಸ್ಸಾದ್. ಅಮೆರಿಕವೇ ರಹಸ್ಯವಾಗಿ ಉಗ್ರರಿಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ.
ರಷ್ಯಾದ ವಿಟೋ: ಈ ನಡುವೆ ವಿಶ್ವಸಂಸ್ಥೆಯಲ್ಲಿ ಸಿರಿಯಾ ವಿರುದ್ಧ ಮಂಡಿಸಲಾದ ಖಂಡನಾ ನಿರ್ಣಯ ವಿರುದ್ಧ ರಷ್ಯಾ ವಿಟೋ ಅಧಿಕಾರ ಚಲಾಯಿಸಿದೆ. ಈ ಮೂಲಕ ನಿರ್ಣಯವನ್ನು ವಿಫಲಗೊಳಿಸುವ, ಸಿರಿಯಾ ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ ಬೆನ್ನಿಗೆ ನಿಲ್ಲುವ ಕೆಲಸ ಮಾಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಂಡನಾ ನಿರ್ಣಯ ಮತ್ತು ಘಟನೆ ಕುರಿತು ತನಿಖೆ ನಡೆಸುವ ನಿರ್ಣಯದ ಕರಡನ್ನು ಫ್ರಾನ್ಸ್ , ಅಮೆರಿಕ, ಬ್ರಿಟನ್ ಮಂಡಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.