ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್ ಬಡ್ತಿ
Team Udayavani, Dec 3, 2021, 10:30 PM IST
ವಾಷಿಂಗ್ಟನ್: ಮೈಸೂರು ಮೂಲದ ಗೀತಾ ಗೋಪಿನಾಥ್ ಅವರಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ.
ಪ್ರಸ್ತುತ ಈ ಹುದ್ದೆಯಲ್ಲಿರುವ ಜೆಫ್ರಿ ಒಕಮಟೋ ಅವರ ಸ್ಥಾನಕ್ಕೆ ಗೀತಾ ನೇಮಕವಾಗಲಿದ್ದಾರೆ. ಸದ್ಯ ಗೀತಾ ಗೋಪಿನಾಥ್ ಅವರು ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞರಾಗಿದ್ದು, ಅವರ ಮೂರು ವರ್ಷಗಳ ಅವಧಿ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ.
ನಂತರ ಅವರು ಹಾರ್ವರ್ಡ್ ವಿವಿಯ, ಪ್ರಾಧ್ಯಾಪಕ ಹುದ್ದೆಗೆ ಮರಳಲು ನಿರ್ಧರಿಸಿರುವಂತೆಯೇ ಗೀತಾ ಅವರಿಗೆ ಹೊಸ ಹೊಣೆ ಸಿಕ್ಕಿದೆ.
ಈ ಬೆಳವಣಿಗೆಯಿಂದಾಗಿ ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿಯೇವಾ ಸ್ಥಾನದ ಬಳಿಕ ಎರಡನೇ ಹುದ್ದೆಗೆ ಗೀತಾ ಗೋಪಿನಾಥ್ ಏರಿದಂತಾಗಿದೆ.
ಇದನ್ನೂ ಓದಿ:ಎಸ್.ಆರ್. ವಿಶ್ವನಾಥ್ ಗೆ ಸ್ಕೆಚ್: ಆಣೆ ಪ್ರಮಾಣಕ್ಕೆ ಕರೆದ ಗೋಪಾಲಕೃಷ್ಣ
ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಗೀತಾ ಅವರು ಗಣನೀಯ ಕೊಡುಗೆ ನೀಡಿದ್ದಾರೆ. ಕಳೆದ ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಾದಾಗ ಹಲವು ತಿರುವುಗಳ ನಡುವೆಯೂ ಜಾಗತಿಕ ಆರ್ಥಿಕತೆಯನ್ನು ಹಳಿಗೆ ತರುವಲ್ಲಿ ಅವರು ಉತ್ತಮ ಕೊಡುಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರಿಗೆ ಬಡ್ತಿ ನೀಡಲಾಗಿದೆ ಎಂದು ಐಎಂಎಫ್ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.