ಗಿಫ್ಟ್ ನೀಡಿದ್ದೇ ಮುಳ್ಳಾಯಿತೆ?
Team Udayavani, Nov 23, 2018, 6:00 AM IST
ಪೋರ್ಟ್ ಬ್ಲೇರ್: ಇದೇ ತಿಂಗಳ ನ.14 ರಂದು ಅಂಡಮಾನ್ ಸಮೀಪದ ಸೆಂಟಿನೆಲ್ ದ್ವೀಪದಲ್ಲಿನ ಅನಾಗರಿಕ ಬುಡಕಟ್ಟು ಜನಾಂಗವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಪ್ರಯತ್ನದೊಂದಿಗೆ ಅಲ್ಲಿಗೆ ಹೋಗಿದ್ದ ಅಮೆರಿಕದ ಧರ್ಮ ಪ್ರಚಾರಕ ಜಾನ್ ಅಲೆನ್ ಚೌ ಅವರನ್ನು ಅಲ್ಲಿನ ಆದಿವಾಸಿಗಳು ಎರಡು ದಿನಗಳ ಕಾಲ ಬಂಧಿಯಾಗಿಟ್ಟುಕೊಂಡು, ನ.17 ರಂದು ಹತ್ಯೆಗೈದಿದ್ದಾರೆಂದು ಅಂಡ ಮಾನ್ ಮತ್ತು ನಿಕೋಬಾರ್ನ ಡಿಜಿಪಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.
ಆದಿವಾಸಿಗಳ ಸ್ನೇಹ ಬೆಳೆಸಲು ತಂದಿದ್ದ ವೈದ್ಯಕೀಯ ಕಿಟ್, ಮೀನು ಹಿಡಿಯುವ ಸಲಕರಣೆ, ಫುಟ್ಬಾಲ್, ಕತ್ತರಿ ಮುಂತಾದುವನ್ನು ಅವರಿಗೆ ಜಾನ್ ನೀಡಲು ಮುಂದಾದಾಗ ಅನುಮಾನಿಸಿ ಕೊಲ್ಲಲಾಗಿದೆ ಎಂದಿದ್ದಾರೆ ಪಾಠಕ್. ನಿಷೇಧದ ಪ್ರದೇಶಕ್ಕೆ ಜಾನ್ ನೀಡಿದ 25 ಸಾವಿರ ರೂ. ಆಮಿಷಕ್ಕೆ ಬಲಿಯಾಗಿ ಸರಕಾರದ ಅನುಮತಿ ಪಡೆಯದೇ ಅವರನ್ನು ಅಲ್ಲಿಗೆ ಕೊಂಡೊಯ್ದಿದ್ದಕ್ಕಾಗಿ 7 ಮೀನುಗಾರರನ್ನು ಬಂಧಿಸಲಾಗಿದೆ ಎಂದಿದ್ದಾರೆ. ಅತ್ತ, ಅಮೆರಿಕದಲ್ಲಿನ ಜಾನ್ ಕುಟುಂಬ, “ಜಾನ್ ಪ್ರೀತಿಸುತ್ತಿದ್ದ ಆದಿವಾಸಿಗಳನ್ನು ನಾವು ಕ್ಷಮಿಸುತ್ತೇವೆ, ನೀವೂ ಕ್ಷಮಿಸ ಬೇಕು. ಜಾನ್ನ ಆತ್ಮೀಯರಾಗಿದ್ದ ಮೀನುಗಾರರನ್ನು ಬಿಡುಗಡೆ ಮಾಡಬೇಕು’ ಎಂದು ಇನ್ಸ್ಟಾಗ್ರಾಂ ಮೂಲಕ ಕೋರಿದೆ. ಏತನ್ಮಧ್ಯೆ, ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ (ಎನ್ಸಿಎಸ್ಟಿ) ಪ್ರಕರಣದ ಬಗ್ಗೆ ವರದಿಸಲ್ಲಿಸುವಂತೆ ಕೇಂದ್ರ ಗೃಹ ಇಲಾಖೆಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.