ಮೈಸೂರು ಮೂಲದ ಬಾಲಕನಿಗೆ ಜಾಗತಿಕ ಬಾಲ ಪ್ರತಿಭೆ ಪ್ರಶಸ್ತಿ
Team Udayavani, Jan 13, 2020, 3:05 AM IST
ಲಂಡನ್: ಮೈಸೂರು ಮೂಲದ ಬಾಲಕ, ಯೋಗ ಚಾಂಪಿಯನ್ ಈಶ್ವರ್ ಶರ್ಮಾ ಜಾಗತಿಕ ಬಾಲ ಪ್ರತಿಭೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಾಗ್ಜೀವ ವಿಜ್ಞಾನ, ಸಾಹಸ ಕಲೆ, ನೃತ್ಯ ಮತ್ತಿತರ ವಲಯಗಳಿಂದ 45 ದೇಶಗಳಿಂದ 15 ಸಾವಿರ ಮಂದಿ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು.
ಈ ಪೈಕಿ ನೂರು ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಮೈಸೂರಿನ ಬಾಲಕ ಈಶ್ವರ್ (10) ಹಾಗೂ ಹಾಡುಗಾರಿಕೆಯಲ್ಲಿ ದುಬೈನಲ್ಲಿರುವ ಭಾರತೀಯ ಮೂಲದ ಸಚೇತಾ ಸತೀಶ್(13) ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಯೋಗದಲ್ಲಿ ವಿಶೇಷ ಪರಿಣಿತನಾಗಿರುವ ಈಶ್ವರ್ ಶರ್ಮಾ ಬ್ರಿಟನ್ ಸೇರಿ ವಿಶ್ಯಾದ್ಯಂತ 100 ಯೋಗ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾನೆ.
ಅಲ್ಲದೇ ವೇದ ಹಾಗೂ ಭಗವದ್ಗೀತೆಯ 50 ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸುತ್ತಾನೆ. ಅಕ್ಟೋಬರ್‌ನಲ್ಲಿ ಕೆನಡಾದ ಎಡ್ಮೊಂಟನ್‌ನಲ್ಲಿ ನಡೆಯಲಿರುವ ವಿಶ್ವ ಯೋಗ ಚಾಂಪಿಯನ್‌ಶಿಪ್‌ಗೆ ಈ ಬಾಲಕ ಗ್ರೇಟ್ ಬ್ರಿಟನ್‌ನಿಂದ ಪ್ರತಿನಿಧಿಸುತ್ತಿದ್ದಾನೆ. ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಮಹತ್ವದ್ದಾಗಿದೆ ಎಂದು ಈಶ್ವರ್ ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.