ಚೀನದಿಂದ ಹೊರಬರಲು ಜಾಗತಿಕ ಕಂಪನಿಗಳ ಯೋಜನೆ
Team Udayavani, Apr 29, 2023, 7:35 AM IST
ಬೀಜಿಂಗ್: ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರ ಉದ್ಯಮಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತಿರುವ ನಡುವೆಯೇ ಭ್ರಷ್ಟಾಚಾರ ವಿರೋಧಿ, ಭದ್ರತೆ ಮತ್ತು ಇತರೆ ತನಿಖೆಗಳಿಗೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳು ತೀವ್ರ ಒತ್ತಡವನ್ನು ಅನುಭವಿಸುತ್ತಿವೆ. ಶಾಂಘೈನ ತನ್ನ ಕಚೇರಿಯಲ್ಲಿ ಇದೇ ವಾರ ತಮ್ಮ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಯಾವ ಕಾರಣಕ್ಕೆ ಎಂಬುದು ಪೊಲೀಸರು ತಿಳಿಸಿಲ್ಲ ಎಂದು “ಬೈನ್ ಆ್ಯಂಡ್ ಕೋ’ ಕಂಪನಿ ಹೇಳಿದೆ.
ಕಳೆದ ತಿಂಗಳು ಮಿಂಟ್ಜ್ ಗ್ರೂಪ್‌ನ ಬೀಜಿಂಗ್ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು, ಐವರು ಉದ್ಯೋಗಿಗಳನ್ನು ಬಂಧಿಸಿದ್ದರು. ಇನ್ನೊಂದೆಡೆ, ಬೇಹುಗಾರಿಕೆ ಆರೋಪದಲ್ಲಿ ಜಪಾನಿ ಔಷಧ ತಯಾರಿಕಾ ಕಂಪನಿಯ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಮೆಮೊರಿ ಚಿಪ್ ತಯಾರಿಕಾ ಕಂಪನಿ “ಮೈಕ್ರಾನ್ ಇಂಕ್’ನ ಭದ್ರತಾ ಪರಿಶೀಲನೆ ನಡೆಸಲು ಚೀನಾ ಸರ್ಕಾರ ಸೂಚಿಸಿತು.
ಕೊರೊನಾ ನಂತರ ಚೀನಾ ಕಡೆ ಉದ್ಯಮಿಗಳ ಒಲವು ಸೆಳೆಯಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿರುವ ನಡುವೆಯೇ ಈ ಬೆಳವಣಿಗೆಯು ಜಾಗತಿಕ ಕಂಪನಿಗಳು ಚೀನಾದಿಂದ ಹೊರಬಂದು, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.