ವರ್ಕ್ ಫ್ರಂ ಹೋಂ ನೌಕರರ ವೇತನಕ್ಕೆ ಗೂಗಲ್ ಕತ್ತರಿ?
Team Udayavani, Aug 11, 2021, 8:30 PM IST
ವಾಷಿಂಗ್ಟನ್: “ವರ್ಕ್ ಫ್ರಂ ಹೋಂ’ ಸೌಲಭ್ಯದಡಿ ಮನೆಯಿಂದಲೇ ಕೆಲಸ ಮಾಡುತ್ತಿರುವ ತನ್ನ ಉದ್ಯೋಗಿಗಳ ಮಾಸಿಕ ವೇತನವನ್ನು ಕಡಿತಗೊಳಿಸಲು ಇಂಟರ್‌ನೆಟ್ ಸರ್ಚ್ ದೈತ್ಯ ಗೂಗಲ್ ಚಿಂತನೆ ನಡೆಸಿದೆ.
ಅಂದರೆ, ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಮಾಡಿಕೊಳ್ಳುವ ಉದ್ಯೋಗಿಗಳಿಗೆ ಈ ನಿರ್ಧಾರವನ್ನು ಅನ್ವಯಿಸುವ ಬಗ್ಗೆ ಕಂಪನಿಯ ಅಧಿಕಾರಿಗಳು ಆಲೋಚಿಸಿದ್ದಾರೆ. ಇದಕ್ಕೆ ಒಪ್ಪಿಗೆ ದೊರೆತರೆ, ಅಮೆರಿಕದ ಸಿಲಿಕಾನ್ ವ್ಯಾಲಿಯ ಉದ್ಯೋಗಿಗಳಿಗೆ ಮೊದಲು ಅನ್ವಯವಾಗಲಿದೆ.
ಈಗಾಗಲೇ, ಟ್ವಿಟರ್ ಮತ್ತು ಫೇಸ್‌ಬುಕ್ ಕಂಪನಿಗಳು, ಕಂಪನಿಯ ಕಚೇರಿಗಳು ತಮ್ಮಲ್ಲಿ ಈ ನಿಯಮವನ್ನು ಜಾರಿಗೊಳಿಸಿವೆ. ಕಡಿಮೆ ಖರ್ಚಿನ ಊರುಗಳಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಪಟ್ಟಿ ಮಾಡಿ, ಅವರಿಗೆ ನೀಡುವ ವೇತನವನ್ನು ಕಡಿತಗೊಳಿಸಿವೆ.
ಸಣ್ಣ ಐಟಿ ಕಂಪನಿಗಳಾದ, ರೆಡ್ಡಿಟ್ ಹಾಗೂ ಝಿಲ್ಲೊ ಕಂಪನಿಗಳೂ ಕೂಡ ಇದೇ ಮಾರ್ಗವನ್ನು ಅಳವಡಿಸಿಕೊಂಡಿವೆ. ಹಾಗಾಗಿ, ಗೂಗಲ್ ಕೂಡ ಈ ಬಗ್ಗೆ ಆಲೋಚಿಸಲು ಆರಂಭಿಸಿದೆ. ಸಿಯಾಟಲ್‌ನಲ್ಲಿ ಕೆಲಸ ಮಾಡುವ ಗೂಗಲ್‌ನ ಉದ್ಯೋಗಿಯೊಬ್ಬರಿಗೆ ಅವರ ವೇತನದಲ್ಲಿ ಶೇ.10 ಕಡಿತವಾಗಲಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.