Google 41 ಕೋಟಿ ರೂ ಪಿಂಚಣಿ ಜತೆಗೆ ನಿವೃತ್ತಿ: ಗೂಗಲ್ ಎಂಜಿನಿಯರ್ ಒಬ್ಬನ ವಿಶೇಷ ಬಯಕೆ
Team Udayavani, Sep 4, 2023, 8:26 PM IST
ವಾಷಿಂಗ್ಟನ್:“ನಿವೃತ್ತಿಯ ಬಳಿಕ ಹಾಯಾಗಿ ಇರಬೇಕು’ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ, ಜಾಗತೀಕರಣ ಬಂದ ಮೇಲೆ ಆ ಹೇಳಿಕೆಯಲ್ಲಿ ಕೊಂಚ ಬದಲಾಗಿದೆ ಎಂದು ಹೇಳಲೇಬೇಕಾಗಿದೆ. ಅದಕ್ಕೆ ಕಾರಣವೂ ಇದೆ. ಗೂಗಲ್‌ನಲ್ಲಿ 22ನೇ ವಯಸ್ಸಿಗೆ ಕೆಲಸ ಪಡೆದುಕೊಂಡಿರುವ ಇಥಾನ್ ನಾನಿ ಎಂಬಾತ 35ನೇ ವಯಸ್ಸಿಗೆ 41 ಕೋಟಿ ರೂ. ಪಿಂಚಣಿ ಪಡೆದುಕೊಂಡು ನಿವೃತ್ತಿಯಾಗಲು ಬಯಸಿದ್ದಾನಂತೆ.
ಪ್ರತಿ ವರ್ಷಕ್ಕೆ 1,94,000 ಡಾಲರ್ ವೇತನ ಇದೆ (ಸರಿ ಸುಮಾರು 1.60 ಕೋಟಿ ) ಎಂದು ಆತನೇ “ಸಿಎನ್‌ಬಿಸಿ’ ಚಾನೆಲ್‌ಗೆ ಹೇಳಿಕೊಂಡಿದ್ದಾನೆ. ಉಳಿತಾಯ ಖಾತೆಯಲ್ಲಿ ಹಣ ಹಾಗೆಯೇ ಉಳಿಸಿಕೊಂಡರೆ ಯಾವ ಲಾಭವೂ ಇಲ್ಲ. ಬರುತ್ತಿರುವ ಸಂಬಳವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಪಡೆಯಲು ಸಾಧ್ಯವೆಂದು ಹೆತ್ತವರು ನನಗೆ ವಿವರಿಸಿದ್ದಾರೆ. ಅದರಂತೆ ನಡೆದುಕೊಳ್ಳಲು ಮುಂದಾಗಿದ್ದೇನೆ ಎಂದಿದ್ದಾನೆ. ಇಂಥ ಯೋಚನೆಯಿಂದಲೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಿಂದ ಆತ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾನೆ.
ನಂತರ ಕೆಲಸ ಮಾಡುತ್ತಲೇ ಡೇಟ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸದ್ಯ 1.11 ಕೋಟಿ ರೂ. ಮೊತ್ತವನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾನೆ. ಕೈಗೆ ಸಿಗುವ ಸಂಬಳದಲ್ಲಿ ಪ್ರತಿ ವರ್ಷ ಶೇ.35ನ್ನು ಹೂಡಿಕೆಗೆ ವಿನಿಯೋಗ ಮಾಡಲು ಮುಂದಾಗಿದ್ದಾನೆ ಆತ. ಜತೆಗೆ ರಿಯಲ್ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಮುಂದಾಗಿದ್ದಾನಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.