ಮಗಳ ಫನ್ನಿ ಮ್ಯಾಜಿಕ್ ನೋಡಿ ಬಕ್ರಾ ಆದ ಅಪ್ಪ : ವಿಡಿಯೋ ನೋಡಿ
Team Udayavani, Mar 21, 2021, 2:46 PM IST
ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರು, ಸಮಾಜದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಮಕ್ಕಳ ತುಂಟಾಟ ತರ್ಲೆಗಳು ವೈರಲ್ ಆಗ್ತಾನೆ ಇವೆ. ಇದೀಗ ಬ್ರಿಟೀಷ್ ಚೆಫ್ ಗಾರ್ಡನ್ ರಾಮ್ಸೆ ಎಂಬುವವರ ಮಗಳು ಮಾಡಿರುವ ಮ್ಯಾಜಿಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಗಾರ್ಡನ್ ರಾಮ್ಸೆ ಎಂಬುವವರು ಬ್ರಿಟನ್ ದೇಶದಲ್ಲಿ ಹೆಸರು ಮಾಡಿರುವ ಬಾಣಸಿಗ. ಇಷ್ಟೇ ಅಲ್ಲದೆ ಇವರೊಬ್ಬ ನಟ ಮತ್ತು ಬರಹಗಾರ ಕೂಡ. ಇವರು ಸದ್ಯ ವಿಡಿಯೋ ಒಂದನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಗಾರ್ಡನ್ ರಾಮ್ಸೆ ಮಗಳು ಮಟಿಲ್ಡಾ ರಾಮ್ಸೆ ಮ್ಯಾಜಿಕ್ ಮಾಡಿದ್ದಾರೆ. ಮ್ಯಾಜಿಕ್ ಅಂದ್ರೆ ಮೊಟ್ಟೆಯನ್ನು ಪ್ಲಾಸ್ಟಿಕ್ ಸೀಸೆಯ ಮೇಲೆ ಇಟ್ಟು ಮಾಯ ಮಾಡುವ ಮ್ಯಾಜಿಕ್. ಆದ್ರೆ ಅಸಲಿಗೆ ತನ್ನ ಅಪ್ಪನನ್ನು ಕಾಲೆಳೆಯುವ ಉದ್ದೇಶದಿಂದ ಈ ಮಾಜಿಕ್ ಮಾಡಿದ್ದಾರೆ.
ಪ್ಲಾಸ್ಟಿಕ್ ಸೀಸೆಯ ಮೇಲೆ ಮೊಟ್ಟೆಯನ್ನು ಇಟ್ಟು ಮಾಯ ಮಾಡಿದ ರೀತಿ ಮಾಡುತ್ತಾರೆ. ಬಾಟೆಲ್ ಒಳಗಡೆ ಮೊಟ್ಟೆ ಹೋಗಿದೆ ಎಂದು ರಾಮ್ಸೆ ಬಗ್ಗಿ ನೋಡುವಾಗ ಬಾಟೆಲ್ ನೀರನ್ನು ಅವರ ಮುಖದ ಮೇಲೆ ಸಿಡಿಸುತ್ತಾರೆ. ಅಲ್ಲದೆ ಮೊಟ್ಟೆಯಲ್ಲು ತಲೆಗೆ ಒಡೆಯುತ್ತಾರೆ.
ಈ ವಿಡಿಯೋವನ್ನು ಸ್ವತಃ ರಾಮ್ಸೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋವನ್ನು ಮಿಲಿಯನ್ ಗಟ್ಟಲೆ ಜನ ವೀಕ್ಷಣೆ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.