ಗೋಟಬಯ ರಾಜಪಕ್ಸ ಗೆ ಸಿಂಗಾಪುರವೇ ಏಕೆ ಬೇಕು?
Team Udayavani, Jul 16, 2022, 6:30 AM IST
ಶ್ರೀಲಂಕಾದಲ್ಲಿನ ಪರಿಸ್ಥಿತಿ ಇನ್ನೂ ಸರಿಯಾಗಿಲ್ಲ. ಇದರ ನಡುವೆಯೇ ಅಧ್ಯಕ್ಷರಾಗಿದ್ದ ಗೋಟಬಯ ರಾಜಪಕ್ಸ ಮಾಲ್ಡೀವ್ಸ್ ಮೂಲಕ ಸಿಂಗಾಪುರಕ್ಕೆ ಓಡಿ ಹೋಗಿದ್ದಾರೆ. ಹಾಗಾದರೆ ರಾಜಪಕ್ಸ ಕುಟುಂಬಕ್ಕೆ ಸಿಂಗಾಪುರವೇ ಏಕೆ ಸುರಕ್ಷಿತ ಸ್ಥಳ? ಈ ಬಗ್ಗೆ ಒಂದು ನೋಟ.
ಚಿಕಿತ್ಸೆಗಾಗಿ ಸಿಂಗಾಪುರವೇ ಆಯ್ಕೆ
ಪುಟ್ಟ ದೇಶವಾದ ಸಿಂಗಾಪುರದ ಜತೆಗೆ ರಾಜಪಕ್ಸ ಕುಟುಂಬಕ್ಕೆ ಭಾರೀ ನಂಟಿದೆ. ಆಗಾಗ್ಗೆ ರಾಜಪಕ್ಸ ಕುಟುಂಬ ಸದಸ್ಯರು ಸಿಂಗಾಪುರಕ್ಕೆ ಚಿಕಿತ್ಸೆಗಾಗಿ ಹೋಗುತ್ತಿ ರುತ್ತಾರೆ. ಮೂಲಗಳ ಪ್ರಕಾರ, ಇಲ್ಲಿ ರಾಜಪಕ್ಸ ಕುಟುಂಬದ ಒಂದು ನಿವಾಸವೂ ಇದೆ. ಹೀಗಾಗಿ ಸೇಫ್ ಎಂದೇ ಅಲ್ಲಿಗೆ ಹೋಗಿದ್ದಾರೆ.
ಮಾಲ್ಡೀವ್ಸ್ ಮೂಲಕ ಪ್ರಯಾಣ
ಎರಡು ಮೂರು ದಿನಗಳ ಹಿಂದಷ್ಟೇ ಗೋಟಬಯ ರಾಜಪಕ್ಸ ಅವರು ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿ ಉತ್ತಮ ಸ್ವಾಗತ ಸಿಕ್ಕಿತ್ತು. ಆದರೆ ಅಲ್ಲಿದ್ದರೆ ಕ್ಷೇಮವಲ್ಲ ಎಂಬ ಕಾರಣದಿಂದ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಓಡಿಹೋಗಿದ್ದಾರೆ. ಈಗ ಗೋಟಬಯ ಕುಟುಂಬಸ್ಥರಾದ ಮಹೀಂದಾ ರಾಜಪಕ್ಸ ಮತ್ತು
ಬಸಿಲ್ ರಾಜಪಕ್ಸ ಅವರಿಗೆ ದೇಶದಿಂದ ಹೊರಹೋಗದಂತೆ ನಿರ್ಬಂಧ ಹೇರಲಾಗಿದೆ.
ಹೃದಯ
ಶಸ್ತ್ರಚಿಕಿತ್ಸೆ
2019ರಲ್ಲಿ ಗೋಟಬಯ ರಾಜಪಕ್ಸ ಅವರು,ಸಿಂಗಾಪುರಕ್ಕೆ ತೆರಳಿ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದರು. ಅಲ್ಲದೇ, ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರೂ ತಮಿಳಿನವರೇ ಆಗಿದ್ದರು. ಜತೆಗೆ ಮಹೀಂದಾ ರಾಜಪಕ್ಸ ಕೂಡ ಇಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ.
ತಮಿಳಿನವರು ಹೆಚ್ಚು
ಅಂದ ಹಾಗೆ, ಸಿಂಗಾಪುರದಲ್ಲಿ ತಮಿಳಿನವರು ಹೆಚ್ಚಾಗಿದ್ದಾರೆ. ಹೀಗಾಗಿಯೇ ಇಲ್ಲೊಂದು ಪ್ರದೇಶಕ್ಕೆ ಲಿಟಲ್ ತಮಿಳುನಾಡು ಎಂದೇ ಕರೆಯಲಾಗುತ್ತದೆ. ಸುಮಾರು 2 ಲಕ್ಷ ಮಂದಿ ತಮಿಳು ಮಂದಿ ಇಲ್ಲಿ ವಾಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.