ಆಸ್ಟ್ರಿಯಾದ ರಾಯಭಾರಿ ರೇಣು ಪಾಲ್ ವಾಪಸ್
Team Udayavani, Dec 31, 2019, 7:48 AM IST
ಹೊಸದಿಲ್ಲಿ: ಮನೆ ಬಾಡಿಗೆ 15 ಲಕ್ಷ ರೂ. ಎಂದು ಬಿಲ್ ತೋರಿಸಿ ಕೇಂದ್ರ ವಿದೇಶಾಂಗ ಸಚಿವಾಲಯದ ಕೆಂಗಣ್ಣಿಗೆ ತುತ್ತಾಗಿರುವ ಆಸ್ಟ್ರಿಯಾದ ರಾಯಭಾರಿ ರೇಣು ಪಾಲ್ರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ.
ಕೇಂದ್ರೀಯ ಜಾಗೃತ ದಳ (ಸಿವಿಸಿ) ನಡೆಸಿದ್ದ ತನಿಖೆಯಲ್ಲಿ ಈ ಅಂಶ ಪತ್ತೆಯಾಗಿದ್ದರಿಂದ ವಿದೇಶಾಂಗ ಸಚಿವಾಲಯ ಮುಜುಗರಕ್ಕೆ ಒಳಗಾಗಿತ್ತು. 1988ನೇ ಕೇಡರ್ನ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿಯಾಗಿರುವ ಅವರು, ಹಾಲಿ ಹುದ್ದೆಯಲ್ಲಿ ಮುಂದಿನ ತಿಂಗಳು ಅವಧಿ ಪೂರೈಸಲಿದ್ದರು. ಸದ್ಯ ಅವರಿಗೆ ಯಾವುದೇ ಹುದ್ದೆ-ಹೊಣೆ ವಹಿಸಲಾಗಿಲ್ಲ.
ಸರಕಾರದ ಅನುಮತಿ ಇಲ್ಲದೆ ಹಣ ದುರುಪಯೋಗ ಮತ್ತು ಮಿತಿಗಿಂತ ಹೆಚ್ಚು ವೆಚ್ಚ ಮಾಡಿರುವ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪಾಲ್ ವಿರುದ್ಧ ಸಿವಿಸಿ ಮತ್ತು ವಿದೇಶಾಂಗ ಇಲಾಖೆ ತನಿಖೆಗೆ ಶಿಫಾರಸು ಮಾಡಿದ್ದವು. ಮೌಲ್ಯ ವರ್ಧಿತ ತೆರಿಗೆ ಕ್ಲೇಮ್ ಹೆಸರಿನಲ್ಲಿ ಹಣ ಪಡೆದುಕೊಳ್ಳುತ್ತಿದ್ದರು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಿರುಚಿದ್ದಾರೆ ಎಂದು ತನಿಖೆಯಿಂದ ಕಂಡುಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.