ಅಜ್ಜಿಯ ಬಿಟ್ಟು ಡ್ರಗ್ಸ್ ತಂದರು
ಮನೆಗೆ ಬೆಂಕಿ ಬಿದ್ದಿದ್ದಾಗ ನಿರ್ಲಕ್ಷ್ಯ ತೋರಿದ ಮೊಮ್ಮಕ್ಕಳು
Team Udayavani, Oct 23, 2019, 7:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನ್ಯೂಯಾರ್ಕ್: ಸ್ಟ್ಯುಬೆನ್ ಕಂಟ್ರಿ ಎಂಬಲ್ಲಿನ ಮನೆಗೆ ಇತ್ತೀಚೆಗೆ ಬೆಂಕಿ ಅಪಘಾತದಲ್ಲಿ ಮೃತಪಟ್ಟಿದ್ದ ಗ್ಲಾಡಿಸ್ ಆ್ಯನ್ ವಿಲ್ಲೊ ಎಂಬ ಅಜ್ಜಿಯ ಸಾವಿನ ಪ್ರಕರಣದಲ್ಲಿ ಆಕೆಯ ಮೊಮ್ಮಕ್ಕಳಾದ ಜ್ಯಾರೆಟ್ ಗಾಸ್ ಮತ್ತು ಜಸ್ಟಿನ್ ಗಾಸ್ ಅವರನ್ನು ಆರೋಪಿಗಳೆಂದು ಅಲ್ಲಿನ ನ್ಯಾಯಾಲಯ ಘೋಷಿಸಿದೆ.
ಇತ್ತೀಚೆಗೆ, ಆ ಅಜ್ಜಿ ಮತ್ತು ಮೊಮ್ಮಕ್ಕಳು ಇದ್ದ ಮನೆಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ಕೂಡಲೇ ತಮ್ಮ ರಕ್ಷಣೆಗಾಗಿ ಹೊರಗಡೆ ಓಡಿ ಬಂದ ಮೊಮ್ಮಕ್ಕಳು, ಹೊರಗೆ ಓಡಿ ಬರುವಾಗ ತಮ್ಮ ಸಿಗರೇಟು ಪ್ಯಾಕುಗಳನ್ನು, ಡ್ರಗ್ಸ್ ಪ್ಯಾಕೇಟ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಆದರೆ, ಅಜ್ಜಿಯನ್ನು ಮರತೇಬಿಟ್ಟಿದ್ದಾರೆ!
ಹೊರಗೆ ಬಂದು ಎಷ್ಟೋ ಹೊತ್ತಿನ ಅನಂತರ ಅಜ್ಜಿಯ ನೆನಪು ಅವರಿಗಾಗಿದೆ. ಆದರೆ, ಅಷ್ಟರಲ್ಲಿ ಅಜ್ಜಿ ಸುಟ್ಟಗಾಯಗಳಿಂದ ಜರ್ಝರಿತರಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣ ಪೊಲೀಸರ ತನಿಖೆಗೊಳಪಟ್ಟಿದ್ದು ಘಟನೆ ನಡೆದಾಗ ಇಬ್ಬರೂ ಮನೆಯಲ್ಲಿ ಇದ್ದಿದ್ದು ಸಾಬೀತಾಗಿದೆ. ಆದರೆ, ತನಿಖೆಯ ದಿಕ್ಕು ತಪ್ಪಿಸಲು ಅವರಿಬ್ಬರೂ ಯತ್ನಿಸಿದ್ದರಿಂದ ಅವರ ವಿರುದ್ಧ “ನಿರ್ಲಕ್ಷ ಹಾಗೂ ಸಾಕ್ಷಿ ನಾಶ ಪ್ರಯತ್ನ’ ದಾಖಲಿಸಲಾಗಿತ್ತು.
ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಮುಕ್ತಾಯಾಗಿದ್ದು, ಜಿಲ್ಲಾ ನ್ಯಾಯಾಧೀಶರು ಈ ಇಬ್ಬರೂ ಮೊಮ್ಮಕ್ಕಳನ್ನು ದೋಷಿಗಳೆಂದು ಘೋಷಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
MUST WATCH
ಹೊಸ ಸೇರ್ಪಡೆ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್: ಸಭೆಯಲ್ಲಿ ಏನಾಯ್ತು?
Mudhol: ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.