ಮಲೇಶ್ಯನ್ ವಿಮಾನ: 3 ವರ್ಷಗಳ ವಿಫಲ ಶೋಧ ಕಾರ್ಯಾಚರಣೆ ಅಂತ್ಯ
Team Udayavani, Jan 17, 2017, 7:54 PM IST
ಸಿಡ್ನಿ : 2014ರ ಮಾರ್ಚ್ 8ರಂದು ಕೌಲಾಲಂಪುರದಿಂದ ಬೀಜಿಂಗ್‌ಗೆ ಹೋಗುತ್ತಿದ್ದ ವೇಳೆ ಹಿಂದೂ ಮಹಾಸಾಗರದಲ್ಲಿ 239 ಜನರ ಸಾವಿಗೆ ಕಾರಣವಾಗಿ ಪತನಗೊಂಡಿದ್ದ ಮಲೇಶ್ಯನ್ ಏರ್‌ಲೈನ್ಸ್ ವಿಮಾನ ಎಂಎಚ್ 370 ಇದರ ವ್ಯರ್ಥ ಹಾಗೂ ವಿಫಲ ಶೋಧ ಕಾರ್ಯವನ್ನು ಸರಿಸುಮಾರು ಮೂರು ವರ್ಷಗಳ ಬಳಿಕ ಇದೀಗ ಕೊನೆಗೊಳಿಸಲಾಗಿದೆ.
ಮಲೇಶ್ಯ ಏರ್‌ಲೈನ್ಸ್ ಈ ನತದೃಷ್ಟ ಬೋಯಿಂಗ್ 777 ವಿಮಾನದ ಶೋಧ ಕಾರ್ಯಾಚರಣೆಗಾಗಿ 16 ಕೋಟಿ ಡಾಲರ್ ನೆರವು ನೀಡಿದ್ದ ಆಸ್ಟ್ರೇಲಿಯದ ಜಂಟಿ ಸಹಕಾರ ಕೇಂದ್ರ ಸಂಸ್ಥೆಯು, ವಿಮಾನದ ಶೋಧ ಕಾರ್ಯಾಚರಣೆಯನ್ನು ಕೊನೆಗೊಳಿಸಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ.
ಹಿಂದೂ ಮಹಾಸಾಗರದ ಆಳ ಸಮುದ್ರದಲ್ಲಿ ಹಾಗೂ ಪಶ್ಚಿಮ ಆಸ್ಟ್ರೇಲಿಯದ ದುರ್ಗಮ ಸಾಗರ ತಳದಲ್ಲಿನ ಸುಮಾರು 12,000 ಚದರ ಕಿ.ಮೀ. ಸಾಗರ ವಲಯದಲ್ಲಿ ಮಲೇಶ್ಯನ್ ವಿಮಾನಕ್ಕಾಗಿ ಕಳೆದ ಮೂರು ವರ್ಷಗಳಿಂದ ಹರಸಾಹಸ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ನಾಪತ್ತೆಯಾಗಿದ್ದ ವಿಮಾನದ ಯಾವುದೇ ಕುರುಹು ಕೂಡ ಈ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕಿಲ್ಲದಿರುವುದು ಅತ್ಯಂತ ನಿಗೂಢವಾಗಿದೆ.
ವಿಫಲ ಹಾಗೂ ವ್ಯರ್ಥ ಶೋಧ ಕಾರ್ಯವನ್ನು ಕೊನೆಗೊಳಿಸಿರುವ ಬಗ್ಗೆ ಮಲೇಶ್ಯ, ಆಸ್ಟ್ರೇಲಿಯ ಮತ್ತು ಚೀನದ ಸಾರಿಗೆ ಸಚಿವರು ಜಂಟಿ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.