Gwadar; ಪಾಕ್ ನಲ್ಲಿ ಚೀನಿ ಇಂಜಿನಿಯರ್ ಗಳ ಮೇಲೆ ಬಲೂಚ್ ಉಗ್ರರ ದಾಳಿ
Team Udayavani, Aug 13, 2023, 3:47 PM IST
ಗ್ವಾದರ್ : ಪಾಕಿಸ್ತಾನದ ಬಂದರು ನಗರವಾದ ಗ್ವಾದರ್ ನಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಚೀನಾದ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ಇಂದು ಇಬ್ಬರು ಬಲೂಚ್ ಉಗ್ರರು ದಾಳಿ ಮಾಡಿದ್ದಾರೆ.
ದಾಳಿ ಮಾಡಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಚೀನಾದ ಯಾವುದೇ ಎಂಜಿನಿಯರ್ ಅಥವಾ ಇತರ ಪಾಕಿಸ್ತಾನಿ ನಾಗರಿಕರು ಗಾಯಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ.
ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಅಥವಾ ಸಿಪಿಇಸಿ ಎಂದು ಕರೆಯಲ್ಪಡುವ 60 ಶತಕೋಟಿ ಡಾಲರ್ ಪ್ರಾಜೆಕ್ಟ್ ನ ಭಾಗವಾಗಿ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯಕ್ಕೆ ಲಿಂಕ್ ಮಾಡಲಾದ ಬಲೂಚಿಸ್ತಾನ್ ಪ್ರಾಂತ್ಯದ ಬಂದರಿನ ಗ್ವಾದರ್ ನಲ್ಲಿ ಹೆಚ್ಚಿನ ಸಂಖ್ಯೆಯ ಚೀನಿಯರು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ದಾಳಿ ಮಾಡಲಾಗಿದೆ.
ಇದನ್ನೂ ಓದಿ:ಡಿಕೆಶಿ ತಪ್ಪೇ ಮಾಡಿಲ್ಲ ಅಂದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ: CT Ravi
ದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯು ಈ ದಾಳಿಯ ಹೊಣೆ ಹೊತ್ತಿಕೊಂಡಿದೆ. ಈ ಪ್ರದೇಶದಲ್ಲಿ ಚೀನಾದ ಹೂಡಿಕೆಗಳನ್ನು ವಿರೋಧಿಸುತ್ತೇವೆ, ಯಾಕೆಂದರೆ ಇದರಿಂದ ಸ್ಥಳೀಯ ಜನರಿಗೆ ಪ್ರಯೋಜನ ಇಲ್ಲ ಎಂದು ಅದು ಹೇಳಿದೆ. ಈ ಹಿಂದೆಯೂ CPEC-ಸಂಯೋಜಿತ ಯೋಜನೆಗಳ ಮೇಲೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ದಾಳಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.