ಭಾರತೀಯ ಐಟಿಗೆ ಟ್ರಂಪ್ ಶಾಕ್! H1-ಬಿ ವೀಸಾ ತಿದ್ದುಪಡಿ ಮಸೂದೆ ಮಂಡನೆ
Team Udayavani, Jan 31, 2017, 1:33 PM IST
ವಾಷಿಂಗ್ಟನ್: ಇಸ್ಲಾಂ ರಾಷ್ಟ್ರಗಳ ನಿರಾಶ್ರಿತರು ಮತ್ತು ವಲಸಿಗರ ಮೇಲೆ ನಿರ್ಬಂಧ ಹೇರಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ವಿದೇಶಿ ಉದ್ಯೋಗಿಗಳ ಮೇಲೆ ವಕ್ರದೃಷ್ಟಿ ಬೀರಿದ್ದಾರೆ. ಆ ನಿಟ್ಟಿನಲ್ಲಿ ಅಮೆರಿಕಾ ಸಂಸತ್ ನಲ್ಲಿ ಎಚ್ 1 ಬಿ ವೀಸಾ ತಿದ್ದುಪಡಿ ಬಿಲ್ ಮಂಡಿಸಲಾಗಿದೆ. ಇದರಿಂದಾಗಿ ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ ಬಿದ್ದಂತಾಗಿದೆ.
ಅಮೆರಿಕಾದಲ್ಲಿರುವವರಿಗೆ ಉದ್ಯೋಗ ದೊರಕಿಸಿಕೊಡುವ ಸಿದ್ಧತೆ ನಡೆಸಿರುವ ಟ್ರಂಪ್, ವಿದೇಶಿ (ಭಾರತ ಸೇರಿದಂತೆ) ಐಟಿ ಉದ್ಯೋಗಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಎಚ್ 1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿಗೊಳಿಸಿದೆ. ಅಮೆರಿಕದ ಎಚ್ 1 ಬಿ ವೀಸಾದ ಹೊಸ ನೀತಿಯಿಂದಾಗಿ ಭಾರತೀಯ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋಗೆ ಭಾರೀ ಹೊಡೆತ ಬೀಳಲಿದೆ.
ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್ 1 ಬಿ ವೀಸಾ ನಿಯಮ ರದ್ದುಪಡಿಸಬೇಕೆಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆ ವೇಳೆಯೇ ಹೇಳಿಕೆ ನೀಡಿದ್ದರು.
ಎಚ್1 ಬಿ ವೀಸಾ ಪಡೆಯುವವರು ಕನಿಷ್ಠ 1,30, 000 ಲಕ್ಷ ಅಮೆರಿಕನ್ ಡಾಲರ್(ಅಂದಾಜು ವರ್ಷಕ್ಕೆ 8 ಕೋಟಿ) ಸಂಬಳ ಹೊಂದಿರಬೇಕೆಂದು ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿದೆ. ಇದು ಈ ಹಿಂದಿನ ನಿಯಮಕ್ಕಿಂತ ದುಪ್ಪಟ್ಟಾಗಿದ್ದು, ಇದರಿಂದ ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಎಚ್1 ಬಿ ವೀಸಾದಿಂದ ವಿದೇಶಿ(ಭಾರತ ಸೇರಿದಂತೆ)ಗರಿಗೆ ಉದ್ಯೋಗ ಕಲ್ಪಿಸಿಕೊಡುತ್ತಿರುವುದಕ್ಕೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ಹೊಸ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ.
ಇಂದು ಅಮೆರಿಕ ಸಂಸತ್ ನಲ್ಲಿ ಕ್ಯಾಲಿಫೋರ್ನಿಯಾದ ಸದಸ್ಯ ಝೋಯೆ ಲೋಫ್ ಗ್ರೆನ್ ಅವರು 2017ನೇ ಸಾಲಿನ ಹೈ ಸ್ಕಿಲ್ಡ್ ಇಂಟಗ್ರಿಟಿ ಅಂಡ್ ಫೇರ್ ನೆಸ್ ಕಾಯ್ದೆಯನ್ನು ಮಂಡಿಸಿದರು. ಈ ಹೊಸ ಮಸೂದೆ ಪ್ರಕಾರ, ಯಾವುದೇ ಕಂಪನಿ ಇರಲಿ ಅವರು ಮಸೂದೆಯಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಸಂಬಳ ಹೊಂದಿರುವವರನ್ನು ಕೆಲಸದಿಂದ ವಜಾ ಮಾಡಬೇಕು, ಹಾಗೂ 1, 30, 000 ಲಕ್ಷ ಅಮೆರಿಕನ್ ಡಾಲರ್ ಪಡೆಯುವವರಿಗೆ ಮಾತ್ರ ಎಚ್1 ಬಿ ವೀಸಾ ನೀಡಬೇಕಾಗುತ್ತದೆ ಎಂದು ವಿವರಿಸಿದೆ.
ವೀಸಾ ಪಡೆಯಲು ವಿದ್ಯಾರ್ಥಿಗಳಿಗೆ ಹಾಗೂ ತಾತ್ಕಾಲಿಕ ವೀಸಾದಾರರಿಗೆ ನಿಯಮಗಳನ್ನು ಸಡಿಲಿಸಲಾಗಿದೆ. ಫಲಾನುಭವಿಗಳ ಭತ್ಯೆಯಲ್ಲಿ ಕಡಿತಗೊಳ್ಳುವ ಹಣಕ್ಕೆ ಸಿಬ್ಬಂದಿ ಗಮನಕ್ಕೆ ತರುವುದನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ. ಇದರಿಂದ ತೆರಿಗೆ, ವೇತನ ಕಡಿತದ ಕಾರಣ ತಿಳಿಯಲು ನೆರವಾಗುತ್ತದೆ.
ಹಳೇ ಮಸೂದೆ ಪ್ರಕಾರ ಸಂಬಳ ಎಷ್ಟಿರಬೇಕಿತ್ತು?
1989ರ ಮಸೂದೆ ಪ್ರಕಾರ ಎಚ್1 ಬಿ ವೀಸಾ ಪಡೆಯುವರು ಕನಿಷ್ಠ 60,000 ಅಮೆರಿನ್ ಡಾಲರ್ ಸಂಬಳ ಹೊಂದಿರಬೇಕಿತ್ತು. ಈ ಕಾಯ್ದೆ ಅಂದಿನಿಂದ ಯಾವುದೇ ಬದಲಾವಣೆ ಮಾಡದೆ ಮುಂದುವರಿಸಲಾಗಿತ್ತು. ಆದರೆ ಟ್ರಂಪ್ ಈಗ 60 ಸಾವಿರ ಅಮೆರಿಕನ್ ಡಾಲರ್ ಸಂಬಳವನ್ನು ದ್ವಿಗುಣಗೊಳಿಸಿ 1,30, 000 ಲಕ್ಷ ಅಮೆರಿಕನ್ ಡಾಲರ್ ಇರಬೇಕೆಂದು ನಿಗದಿಗೊಳಿಸಿದ್ದಾರೆ.
ಭಾರತೀಯ ಐಟಿಗೆ ಬಿಗ್ ಶಾಕ್:
*ಅಮೆರಿಕದ ಎಚ್1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿ
*ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ
*ಎಚ್ 1 ಬಿ ವೀಸಾ ಪಡೆಯಲು ಕನಿಷ್ಠ 1 ಲಕ್ಷದ 30 ಸಾವಿರ ಅಮೆರಿಕನ್ ಡಾಲರ್ ಸಂಬಳ ಇರಬೇಕು
*ಅಮೆರಿಕ ಸಂಸತ್ ನಲ್ಲಿ ಮಹತ್ವದ ವೀಸಾ ತಿದ್ದುಪಡಿ ಮಸೂದೆ ಮಂಡನೆ
*ಬೆಂಗಳೂರಿಗರಿಗೆ ಭಾರೀ ಹೊಡೆತ ಸಾಧ್ಯತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.