ಗ್ರೀನ್ ಕಾರ್ಡ್ ಹೆಚ್ಚಳ ವಿಧೇಯಕ ಮಂಡನೆ
Team Udayavani, Jan 12, 2018, 6:05 AM IST
ವಾಷಿಂಗ್ಟನ್: ಕೆಲ ದಿನಗಳ ಹಿಂದಷ್ಟೇ ಎಚ್1-ಬಿ ವೀಸಾ ಬಗ್ಗೆ ಆತಂಕಕ್ಕೆ ಒಳಗಾಗಿದ್ದ ಭಾರತದ ಐಟಿ ಉದ್ಯಮಿಗಳಿಗೆ ಅಮೆರಿಕ ಸಂಸತ್‌ನಿಂದ ನೆಮ್ಮದಿ ಸುದ್ದಿ ಹೊರಬಿದ್ದಿದೆ. ಮೆರಿಟ್ ಆಧಾರದಲ್ಲಿ ವಲಸೆ ಮತ್ತು ಗ್ರೀನ್ ಕಾರ್ಡ್ ನೀಡುವ ವಾರ್ಷಿಕ ಪ್ರಮಾಣವನ್ನು ಶೇ.45ರಷ್ಟು ಹೆಚ್ಚಿಸುವ ಬಗೆಗಿನ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಮಂಡಿಸಲಾಗಿದೆ. “ಸೆಕ್ಯೂರಿಂಗ್ ಅಮೆರಿಕಸ್ ಫ್ಯೂಚರ್’ ಹೆಸರಿನ ಈ ಕಾಯ್ದೆಗೆ ಸಂಸತ್ತಿನ ಮನ್ನಣೆ ಸಿಕ್ಕು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಬಿದ್ದರೆ, ಲಕ್ಷಾಂತರ ಭಾರತೀಯ ಟೆಕ್ಕಿಗಳಿಗೆ ಲಾಭವಾಗಲಿದೆ.
ಯೋಗ್ಯತೆ ಆಧಾರದಲ್ಲಿ ವಲಸೆ ಅಂಶದಡಿ ಹತ್ತು ಹಲವಾರು ಮಾದರಿ ವೀಸಾ ನೀಡುವ ಬದಲು ಕೆಲವೇ ಮಾದರಿ ವೀಸಾ ಪದ್ಧತಿ ಅಳವಡಿಸಿಕೊಳ್ಳಲು ಕಾಯ್ದೆಯಲ್ಲಿ ಸೂಚಿಸಲಾಗಿದೆ. ಇದು ಜಾರಿಗೊಂಡರೆ, ಅಮೆರಿಕಕ್ಕೆ ವಾರ್ಷಿಕ ವಲಸಿಗರ ಸಂಖ್ಯೆ ಈಗಿರುವ ಹತ್ತೂವರೆ ಲಕ್ಷದಿಂದ 2 ಲಕ್ಷದ 60 ಸಾವಿರಕ್ಕೆ ಇಳಿಯಲಿದೆ. ಇನ್ನು, ಪೌರತ್ವ ನೀಡಿಕೆ ಶೇ. 45ರಷ್ಟು ಹೆಚ್ಚಾದರೆ, ಸದ್ಯಕ್ಕಿರುವ 1,20,000 ಪೌರತ್ವದ ಬದಲು 1,75,000 ಜನರಿಗೆ ಪೌರತ್ವ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.