ಎಚ್1ಬಿ ವೀಸಾ: ಭಾರತೀಯ ಟೆಕ್ಕಿಗಳಿಗೆ ಕಂಟಕವಾದ ಮಸೂದೆ ಮಂಡನೆ
Team Udayavani, Mar 24, 2017, 4:34 PM IST
ವಾಷಿಂಗ್ಟನ್ : ಅಮೆರಿಕದ ಕಂಪೆನಿಗಳು ಎಚ್1ಬಿ ವೀಸಾ ದುರುಪಯೋಗಿಸಿ ಉದ್ಯೋಗಗಳ ಹೊರಗುತ್ತಿಗೆ ನೀಡುವುದನ್ನು ತಡೆಯುವ ಮಸೂದೆಯನ್ನು ಪ್ರತಿನಿಧಿಗಳ ಸಭೆಯಲ್ಲಿ ಮತ್ತೆ ಮಂಡಿಸಲಾಗಿದೆ. ಈ ಮಸೂದೆ ಪಾಸಾದಲ್ಲಿ ಭಾರತೀಯ ಐಟಿ ಕಂಪೆನಿಗಳಿಗೆ ಮತ್ತು ವೃತ್ತಿಪರರಿಗೆ ಭಾರೀ ಹೊಡೆತ ಬೀಳುವುದು ನಿಶ್ಚಿತವಿದೆ.
ಡೆಮೋಕ್ರಾಟಿಕ್ ಸಂಸದ ಡೆರೆಕ್ ಕಿಲ್‌ಮರ್ ಮತ್ತು ಅವರ ರಿಪಬ್ಲಿಕನ್ ಸಹೋದ್ಯೋಗಿ ಡಫ್ ಕಾಲಿನ್ಸ್ ಅವರು ಅಮೆರಿಕ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಿದ್ದಾರೆ.
ಎಚ್1ಬಿ ಕಾರ್ಯಕ್ರಮದ ಮೂಲಕ ತಾತ್ಕಾಲಿಕ ವೀಸಾಗಳನ್ನು ಪಡೆದು ಅಮೆರಿಕದಲ್ಲಿ ವಿದೇಶಿ ನೌಕರರಿಗೆ ತರಬೇತಿ ನೀಡಿ ಬಳಿಕ ಆ ಉದ್ಯೋಗಗಳನ್ನು ಬೇರೊಂದು ದೇಶಕ್ಕೆ ವರ್ಗಾಯಿಸುವ ಉದ್ಯಮಪತಿಗಳ ಕುಟಿಲೋಪಾಯವನ್ನು ತಡೆಯುವುದು ಈ ಮೂಸದೆಯ ಉದ್ದೇಶವಾಗಿದೆ.
ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಸಾರ್ವಜನಿಕ ಪ್ರಸಾರ ಸೇವೆಯು ಸಾಕ್ಷ್ಯ ಚಿತ್ರವೊಂದನ್ನು ಪ್ರದರ್ಶಿಸಿತ್ತು. ಅದರಲ್ಲಿ ಎಚ್1ಬಿ ವೀಸಾ ಕಾರ್ಯಕ್ರಮವು ಭಾರತದಂತಹ ದೇಶಗಳ ಪರಿಣತ ತಂತ್ರಜ್ಞಾನ ನೌಕರರಿಗೆ ಅಮೆರಿಕದಲ್ಲಿನ ಹೈಟೆಕ್ ಉದ್ಯೋಗಳನ್ನು ಪಡೆಯುವುದಕ್ಕೆ ಹೇಗೆ ಅನುಕೂಲ ಮಾಡಿಕೊಡುತ್ತದೆ ಎನ್ನುವುದನ್ನು ತೋರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.