ಎಚ್1 ಬಿ ವೀಸಾ ನವೀಕರಣ ಇನ್ನೂ ಕಷ್ಟ
Team Udayavani, Oct 26, 2017, 6:40 AM IST
ವಾಷಿಂಗ್ಟನ್: ಎಚ್1ಬಿ ಹಾಗೂ ಎಲ್1 ವೀಸಾಗಳ ನವೀಕರಣ ನಿಯಮವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ ಮತ್ತಷ್ಟು ಬಿಗಿಗೊಳಿಸಿದೆ. ಹೊಸ ನೀತಿಯ ಪ್ರಕಾರ ವೀಸಾ ನವೀಕರಿಸುವಾಗ ಕೆಲಸಕ್ಕೆ ವ್ಯಕ್ತಿ ಅರ್ಹನಾಗಿದ್ದಾನೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಉದ್ಯೋಗಕ್ಕಾಗಿ ಹೆಚ್ಚಿನ ಸಂಖ್ಯೆಯ ಭಾರತೀಯರು ಎಚ್1ಬಿ ವೀಸಾವನ್ನು ಅವಲಂಬಿಸಿ ದ್ದಾರೆ. ಸುಮಾರು 13 ವರ್ಷಗಳ ಹಿಂದೆ ರೂಪಿಸಲಾಗಿದ್ದ ಅಮೆರಿಕ ಪೌರತ್ವ ಮತ್ತು ವಲಸೆ ನೀತಿಯನ್ನು ಟ್ರಂಪ್ ಆಡಳಿತ ಬದಲಿಸಿದೆ. ಈ ಹಿಂದೆ ಉದ್ಯೋಗಕ್ಕೆ ಅರ್ಹ ಎಂದು ಸಾಬೀತುಪಡಿಸಿ ವೀಸಾ ಪಡೆದರೆ, ನಂತರ ನವೀಕರಿಸುವಾಗ ಅರ್ಹತೆ ಸಾಬೀತುಪಡಿಸುವ ಅಗತ್ಯವಿರಲಿಲ್ಲ. ಈ ಹೊಸ ನೀತಿಯ ಪ್ರಕಾರ ಪ್ರತಿ ಬಾರಿ ವೀಸಾ ನವೀಕರಿಸುವಾಗಲೂ ಅರ್ಹತೆ ಸಾಬೀತುಪಡಿಸಬೇಕಾಗುತ್ತದೆ.
ಮತ್ತಷ್ಟು ಕಠಿಣ: ಮತ್ತೂಂದೆಡೆ, ವಿಮಾನ ಪ್ರಯಾಣಿಕರ ಭದ್ರತಾ ತಪಾಸಣೆಯನ್ನು ಅಮೆರಿಕ ಈಗ ಇನ್ನಷ್ಟು ಬಿಗಿ ಗೊಳಿಸಿದ್ದು, ವಿದೇಶದಿಂದ ಆಗಮಿಸುವ ಎಲ್ಲ ಪ್ರಯಾಣಿಕರೂ ಈ ಹೊಸ ನಿಯಮಾವಳಿಗೆ ಒಳಗಾಗಬೇಕಿದೆ. ವಿಮಾನ ಏರುವುದಕ್ಕೂ ಮುನ್ನ ಸಂಕ್ಷಿಪ್ತ ಸಂದರ್ಶನ ಹಾಗೂ ಸುಧಾರಿತ ಸಾಧನಗಳ ಮೂಲಕ ತಪಾಸಣೆಯನ್ನು ವಿಮಾನಯಾನ ಸಂಸ್ಥೆಗಳು ಒದಗಿಸಬೇಕಿದೆ. ಈ ನಿಯಮ ಗುರುವಾರದಿಂದ ಜಾರಿಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.