ವಾಟ್ಸ್ಆ್ಯಪ್ಗೆ ಹ್ಯಾಕರ್ಗಳ ಕಾಟ!
Team Udayavani, May 15, 2019, 6:15 AM IST
ಸ್ಯಾನ್ಫ್ರಾನ್ಸಿಸ್ಕೋ: ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್ ಎಂಬ ಕಳ್ಳಜಾಲಕ್ಕೆ ಸೇರಿದ ಹ್ಯಾಕರ್ಗಳು ವಾಟ್ಸ್ ಆ್ಯಪ್ ಇರುವ ಮೊಬೈಲ್ಗಳಿಗೆ ಲಗ್ಗೆ ಹಾಕಿದ್ದು, ಆ ಮೊಬೈಲ್ಗಳಲ್ಲಿದ್ದ ಖಾಸಗಿ ಮಾಹಿತಿ ಕಳವು ಮಾಡಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಇದರ ನಿಗ್ರಹಕ್ಕಾಗಿ ಈಗ ವಾಟ್ಸ್ ಆ್ಯಪ್ ಅಪ್ ಡೇಟ್ ಅನ್ನು ಗೂಗಲ್ ಸ್ಟೋರ್ನಲ್ಲಿ ಬಿಡುಗಡೆ ಮಾಡಿದ್ದು, ವಾಟ್ಸ್ ಆ್ಯಪ್ ಬಳಕೆದಾರರು ಇದನ್ನು ತತ್ಕ್ಷಣವೇ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಸೂಚಿಸಿದೆ.
ವಾಟ್ಸ್ಆ್ಯಪ್, ತನ್ಮೂಲಕ ಸಂವಹನಗೊಳ್ಳುವ ಮಾಹಿತಿಯನ್ನು “ಎನ್ಕ್ರಿಪ್ಶನ್’ ಮಾದರಿಯಡಿ ಸಂರಕ್ಷಿಸುತ್ತದೆ. ಆದರೆ, ಈ ವ್ಯವಸ್ಥೆಯಲ್ಲಿ ಇರಬಹುದಾದ ಸಣ್ಣಪುಟ್ಟ ಲೋಪಗಳನ್ನೇ ಪತ್ತೆ ಹಚ್ಚಿರುವ ಅತ್ಯಾಧುನಿಕ ಸಾಫ್ಟ್ವೇರ್ ಹ್ಯಾಕರ್ಗಳು, ಹೊಸ ಕಂಪ್ಯೂಟರ್ ಪ್ರೋಗ್ರಾಂ ಸೃಷ್ಟಿಸಿದ್ದಾರೆ. ಗ್ರಾಹಕರಿಗೆ ಒಂದು ಫೋನ್ ಕರೆ ಮಾಡಿ ಆ ಪ್ರೋಗ್ರಾಮನ್ನು ಮೊಬೈಲ್ಗಳಲ್ಲಿ ಗುಟ್ಟಾಗಿ ಅಳವಡಿಸಿ, ಅದರಲ್ಲಿರುವ ಗ್ರಾಹಕರ ಮೇಲ್ ವಿವರ, ಫೋಟೋ ಸೇರಿ ಹಲವಾರು ಮಾಹಿತಿಗಳನ್ನು ಕದಿಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.