MML ಉಗ್ರ ಸಂಘಟನೆ: ಅಮೆರಿಕದ ಕ್ರಮಕ್ಕೆ ಹಫೀಜ್ ಸಯೀದ್ ವ್ಯಂಗ್ಯ
Team Udayavani, Apr 7, 2018, 3:59 PM IST
ಲಾಹೋರ್ : ಮುಂಬಯಿ ಮೇಲಿನ ಉಗ್ರ ದಾಳಿಯ ಪ್ರಧಾನ ಸೂತ್ರನಾಗಿರುವ ಹಾಗೂ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಹಾಫೀಜ್ ಸಯೀದ್ ತನ್ನ ನೂತನ ರಾಜಕೀಯ ಪಕ್ಷವಾಗಿರುವ ಮಿಲ್ಲಿ ಮುಸ್ಲಿಂ ಲೀಗ್ (MML) ಅನ್ನು ಅಮೆರಿಕ, ವಿದೇಶೀ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿರುವ ಕ್ರಮದಿಂದ ತನ್ನ ಪಕ್ಷದ ವಿಶ್ವಾಸಾರ್ಹತೆ ಸಾಬೀತಾದಂತಾಗಿದೆ ಎಂದು ವ್ಯಂಗ್ಯದಿಂದ ಹೇಳಿಕೊಂಡಿದ್ದಾನೆ.
ಕಳೆದ ಮಂಗಳವಾರ ಕೈಗೊಳ್ಳಲಾದ ಅಮೆರಿಕದ ಈ ಕ್ರಮದಿಂದಾಗಿ ಹಾಫೀಜ್ ಸಯೀದ್‌ನ ಎಂಎಂಎಲ್ ಪಕ್ಷವನ್ನು ಪಾಕಿಸ್ಥಾನದ ಚುನಾವಣಾ ಆಯೋಗದಲ್ಲಿ ನೋಂದಾಯಿಸುವುದು ಇದೀಗ ಕಷ್ಟಕ್ಕಿಟ್ಟುಕೊಂಡಿದೆ. ಪಾಕಿಸ್ಥಾನದಲ್ಲಿ ಈ ವರ್ಷ ಮಹಾ ಚುನಾವಣೆಗಳು ನಡೆಯಲಿಕ್ಕಿವೆ.
ಕಾಶ್ಮೀರದ ಪ್ರಶ್ನೆಗಾಗಿ ಪಾಕಿಸ್ಥಾನದ ಉದ್ದಗಲದಲ್ಲಿ ಜನರನ್ನು ಒಗ್ಗೂಡಿಸುವ ತನ್ನ ಯತ್ನದ ಭಾಗವಾಗಿ ನಡೆಸಲಾದ ರಾಲಿಯಲ್ಲಿ ಮಾತನಾಡುತ್ತಿದ್ದ ಸಯೀದ್, “ಅಮೆರಿಕದಿಂದ ಒಂದು ರಾಜಕೀಯ ಪಕ್ಷ (ಎಂಎಂಎಲ್) ನಿಷೇಧಕ್ಕೆ ಗುರಿಯಾಯಿತೆಂದರೆ ಅದರ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿದಂತೆಯೇ’ ಎಂದು ಗುಡುಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.