ಪಾಕ್ ವಿರುದ್ಧ ಭಾರೀ ಆಕ್ರೋಶ
Team Udayavani, Nov 24, 2017, 6:20 AM IST
ವಾಷಿಂಗ್ಟನ್: ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್, ಜಮಾತ್-ಉದ್-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್ ಆದೇಶಿಸಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಾಕ್ ಸರಕಾರದ ನಿರ್ಧಾರದ ಕುರಿತು ಭಾರತ ಮಾತ್ರವಲ್ಲದೇ, ಅಮೆರಿಕದ ತಜ್ಞರೂ ಕಿಡಿಕಾರಿದ್ದಾರೆ.
ಸಯೀದ್ ಬಂಧಮುಕ್ತ ಸುದ್ದಿಗೆ ಗುರುವಾರ ಖಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ, “ಬಹಿಷ್ಕಾರಕ್ಕೊಳಗ ಗಿರುವ ಭಯೋತ್ಪಾದಕನನ್ನು ಮುಖ್ಯ ವಾಹಿನಿಗೆ ತರುವಂಥ ಪಾಕಿಸ್ಥಾನದ ಯತ್ನವು, ಉಗ್ರರಿಗೆ ಬೆಂಬಲ ನೀಡುವು ದನ್ನು ಮುಂದುವರಿಸಿರುವುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. ವಿಧ್ವಂಸಕ ಕೃತ್ಯ ಎಸಗಿದವರನ್ನು ಶಿಕ್ಷೆಗೊಳಪಡಿಸು ವಲ್ಲಿ ಪಾಕಿಸ್ಥಾನದ ಗಂಭೀರತೆಯ ಕೊರತೆ ಯನ್ನು ಇದು ತೋರಿಸುತ್ತಿದೆ’ ಎಂದು ಹೇಳಿದೆ. ಅಲ್ಲದೆ, ಭಯೋತ್ಪಾದಕರಿಗೆ ರಕ್ಷಣೆ ನೀಡುವ ಪಾಕ್ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವುದು ಕೂಡ ಸ್ಪಷ್ಟವಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಮಿತ್ರರಾಷ್ಟ್ರ ಸ್ಥಾನಮಾನ ರದ್ದುಗೊಳಿಸಿ: ಇದೇ ವೇಳೆ, ಸಯೀದ್ ಬಿಡುಗಡೆ ಕುರಿತು ಅಮೆರಿಕದಿಂದಲೂ ಆಕ್ರೋಶದ ಧ್ವನಿ ವ್ಯಕ್ತವಾಗಿದೆ. ಉಗ್ರರಿಗೆ ನೆರಳಾಗುವ ಪಾಕಿಸ್ಥಾನದ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ, ಮಾತನಾಡಿರುವ ಅಮೆರಿಕದ ಪ್ರಮುಖ ಉಗ್ರ ನಿಗ್ರಹ ತಜ್ಞರು, “ಪಾಕಿಸ್ಥಾನಕ್ಕೆ ನೀಡಿರುವ ನ್ಯಾಟೋಯೇತರ ಮಿತ್ರರಾಷ್ಟ್ರ ಸ್ಥಾನಮಾನವನ್ನು ಕೂಡಲೇ ರದ್ದುಮಾಡಬೇಕು’ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.
26/11ರ ದಾಳಿ ನಡೆದು 9 ವರ್ಷಗಳಾಗಿದ್ದು, ಇನ್ನೂ ಅದರ ರೂವಾರಿಗೆ ಶಿಕ್ಷೆಯಾಗಿಲ್ಲ. ಒಂದು ಪದದಲ್ಲಿ ಹೇಳುವುದಾದರೆ, ಉಗ್ರ ಸಯೀದ್‌ನ ಬಿಡುಗಡೆಯು “ಘಾತಕಕೃತ್ಯ’ವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆತ ದೊಡ್ಡ ದೊಡ್ಡ ರ್ಯಾಲಿಗಳ ನೇತೃತ್ವ ವಹಿಸಿ ಮಾತನಾಡುವ ಸುದ್ದಿಯನ್ನೂ ನಾವು ಓದಬಹುದೋ ಏನೋ? ಹೀಗಾಗಿ ಪಾಕಿಸ್ಥಾನಕ್ಕೆ ನೀಡಿರುವ ನ್ಯಾಟೋಯೇತರ ಮಿತ್ರ ಸ್ಥಾನಮಾನವನ್ನು ರದ್ದು ಮಾಡಲು ಇದು ಸೂಕ್ತ ಸಮಯ ಎಂದು ದಕ್ಷಿಣ ಏಷ್ಯಾದ ಭದ್ರತೆ, ಉಗ್ರ ನಿಗ್ರಹದ ತಜ್ಞ ಬ್ರೂಸ್ ರೀಡೆಲ್ ಹೇಳಿದ್ದಾರೆ. ಇತರೆ ತಜ್ಞರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನವು ದುರ್ಬಲ ವಾದ ಮಂಡಿಸಿ, ಸೂಕ್ತ ಸಾಕ್ಷ್ಯಗಳನ್ನು ನೀಡದೇ ಇದ್ದ ಕಾರಣ ಬುಧವಾರವಷ್ಟೇ ಹಫೀಜ್‌ನ ಬಿಡುಗಡೆಗೆ ಕೋರ್ಟ್ ಆದೇಶಿಸಿತ್ತು.
ಜಾಧವ್ ಪತ್ನಿ, ತಾಯಿ ಭದ್ರತೆ ಖಚಿತಪಡಿಸಿ: ಪಾಕ್‌ಗೆ ಭಾರತ
ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ತೆರಳುತ್ತಿರುವ ಅವರ ಪತ್ನಿ ಹಾಗೂ ತಾಯಿಗೆ ಸೂಕ್ತ ಭದ್ರತೆ ಒದಗಿಸುವ ಕುರಿತು ಖಚಿತಪಡಿಸುವಂತೆ ಪಾಕಿಸ್ಥಾನಕ್ಕೆ ಭಾರತ ಕೋರಿಕೆ ಸಲ್ಲಿಸಿದೆ. ಜಾಧವ್‌ಗೆ ಅವರ ಪತ್ನಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸುವುದಾಗಿ ಪಾಕ್ ಸರಕಾರ ಹೇಳಿದೆ. ಅಲ್ಲಿಗೆ ತೆರಳುತ್ತಿರುವ ಜಾಧವ್ ಪತ್ನಿಯ ಸುರಕ್ಷತೆಯ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರವನ್ನು ಕೇಳಿಕೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಜತೆಗೆ, ಪಾಕಿ ಸ್ತಾನವು ಜಾಧವ್ ಕುಟುಂಬ ಸದಸ್ಯರಿಗೆ ಕಿರುಕುಳ ಕೊಡುವುದು, ವಿಚಾರಣೆ ನಡೆಸುವುದಾಗಲೀ ಮಾಡಬಾ ರದು ಎಂದೂ ಸೂಚಿಸಲಾಗಿದೆ. ಏತನ್ಮಧ್ಯೆ, ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಪ್ರಶ್ನಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ ಪಾಕ್ ಸುಳಿವು ನೀಡಿದೆ.
ಕಣಿವೆ ರಾಜ್ಯದಲ್ಲಿ ವಕೀಲರ ಪ್ರತಿಭಟನೆ
ಉಗ್ರ ಹಫೀಜ್ ಸಯೀದ್ ಬಿಡುಗಡೆ ನಿರ್ಧಾರವನ್ನು ಖಂಡಿಸಿ ಗುರುವಾರ ಜಮ್ಮು ಬಾರ್ ಅಸೋಸಿಯೇಷನ್‌ನ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು. ಹೈಕೋರ್ಟ್ ಸಂಕೀರ್ಣದ ಮುಂದೆ ಸೇರಿದ ವಕೀಲರು, ಉಗ್ರ ಸಯೀದ್ ಹಾಗೂ ಪಾಕಿಸ್ಥಾನದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಪಾಕಿಸ್ಥಾನಿ ಧ್ವಜಕ್ಕೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಪಾಕ್‌ನಲ್ಲಿರುವ ಹಫೀಜ್ ಸಯೀದ್‌ನ ಉಗ್ರ ಜಾಲದ ಮೇಲೆ ಮತ್ತೂಂದು ಸರ್ಜಿಕಲ್ ದಾಳಿಯನ್ನು ನಡೆಸಬೇಕು ಎಂದೂ ವಕೀಲರು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.