ಉಗ್ರ ಹಫೀಜ್ ಸಂಘಟನೆಗೆ ಹೊಸ ಹೆಸರು!
Team Udayavani, Feb 5, 2017, 3:45 AM IST
ಇಸ್ಲಾಮಾಬಾದ್: ಉಗ್ರ ಸಂಘಟನೆ ಜಮಾತ್ ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಗೃಹ ಬಂಧನದಲ್ಲಿಡಲಾಗಿದೆ. ಜತೆಗೆ ಸಂಘಟನೆ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಆದರೆ ಅದು “ತೆಹ್ರಿಕ್- ಇ ಆಜಾದಿ ಜಮ್ಮು ಕಾಶ್ಮೀರ’ ಎಂಬ ಹೊಸ ಹೆಸರಿನಲ್ಲಿ ಪ್ರತ್ಯಕ್ಷವಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾತಂತ್ರÂ ಕೊಡಿಸಲೇಬೇಕು ಎಂಬ ಪಣದೊಂದಿಗೆ ಭಾನುವಾರ ಪಾಕಿಸ್ತಾನದಾದ್ಯಂತ ಬೃಹತ್ ಕಾಶ್ಮೀರ ಸ್ವಾತಂತ್ರ್ಯ ಚಳವಳಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸಂಘಟನೆಯಲ್ಲಿ 20 ಧಾರ್ಮಿಕ ಸಂಸ್ಥೆಗಳು ಸೇರಿಕೊಂಡಿವೆ.
ಈ ಉದ್ದೇಶಕ್ಕಾಗಿ ನೆರೆಯ ರಾಷ್ಟ್ರದ ಉದ್ದಗಲಕ್ಕೂ ಸಭೆ , ಸಮಾವೇಶ ಮತ್ತು ಪ್ರತಿಭಟನಾ ರ್ಯಾಲಿ ಕಾರ್ಯಕ್ರಮ ನಡೆಯಲಿದೆ. ನಾಸಿರ್‌ಬಾಗ್ ಮತ್ತು ಲಾಹೋರ್‌ನಲ್ಲಿ ಸಮಾವೇಶ ನಡೆಸಲಾಗುತ್ತದೆ. ಇಸ್ಲಾಮಾಬಾದ್, ಮುಜಫರಬಾದ್, ಮೀರ್‌ಪುರ್‌ಗಳಲ್ಲಿ ಬೃಹತ್ ರ್ಯಾಲಿ ಮಾಡುವುದಾಗಿಯೂ ಸಂಘಟನೆ ಹೇಳಿಕೊಂಡಿದೆ. ಈ ರ್ಯಾಲಿಯಲ್ಲಿ ವಿದ್ವಾಂಸರು , ವರ್ತಕರು, ವಕೀಲರು ರಾಜಕಿಯ ಪಕ್ಷಗಳ ಸದ್ಯರು ಮತ್ತು ಎಲ್ಲ ಸ್ತರದ ವ್ಯಕ್ತಿಗಳು ಭಾಗವಹಿಸಲಿದ್ದಾರೆಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.