Iran ರಾಜಧಾನಿಯಲ್ಲೇ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನ್ಯಾ ಹತ್ಯೆ!: ಖಚಿತಪಡಿಸಿದ IRGC
ಹಮಾಸ್ ನಾಯಕರನ್ನು ಮುಗಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಇಸ್ರೇಲ್!!
Team Udayavani, Jul 31, 2024, 9:47 AM IST
ಟೆಹರಾನ್ : ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನ್ಯಾ ಮತ್ತು ಆತನ ಭದ್ರತಾ ಸಿಬಂದಿಗಳು ನಿವಾಸದಲ್ಲೇ ಹತ್ಯೆಗೀಡಾಗಿದ್ದಾರೆ ಎಂದು ಇರಾನ್ ನ ಭದ್ರತಾ ಸಂಸ್ಥೆ ಐಆರ್ ಜಿಸಿ (Islamic Revolutionary Guard Corps) ಖಚಿತಪಡಿಸಿದೆ.
ಇಸ್ಮಾಯಿಲ್ ಹನ್ಯಾ ಟೆಹರಾನ್ ಗೆ ಇರಾನ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ.
Islamic Revolutionary Guard Corps ಸಾರ್ವಜನಿಕ ಸಂಪರ್ಕ ಇಲಾಖೆ ಬುಧವಾರ ಬೆಳಗ್ಗೆ ದಾಳಿ ನಡೆದಿದೆ ಮತ್ತು ಕಾರಣವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಘೋಷಿಸಿದೆ. ಹಮಾಸ್ ನಾಯಕನನ್ನು ಕಳೆದುಕೊಂಡಿರುವ ಪ್ಯಾಲೆಸ್ತೀನ್ ಜನರಿಗೆ, ಮುಸ್ಲಿಂ ಸಮುದಾಯಕ್ಕೆ ಮತ್ತು ರೆಸಿಸ್ಟೆನ್ಸ್ ಫ್ರಂಟ್‌ನ ಹೋರಾಟಗಾರ ಪರ ಸಂತಾಪ ಸೂಚಿಸಿದೆ.
ಹಿಂದಿನ ದಿನ, ಹನ್ಯಾ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಇರಾನ್‌ನ ಸರ್ವೋಚ್ಚ ನಾಯಕರನ್ನು ಭೇಟಿಯಾಗಿದ್ದ.
ಹತ್ಯೆಯ ಹೊಣೆಗಾರಿಕೆಯನ್ನು ಯಾರೂ ತತ್ ಕ್ಷಣವೇ ಹೊತ್ತುಕೊಂಡಿಲ್ಲ, ಇಸ್ಮಾಯಿಲ್ ಹನ್ಯಾ ಮತ್ತು ಎಲ್ಲ ಹಮಾಸ್ ನಾಯಕರನ್ನು ಮುಗಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಇಸ್ರೇಲ್‌ನ ಮೇಲೆ ಅನುಮಾನ ಹೆಚ್ಚಾಗಿದೆ.
ಏಪ್ರಿಲ್ 10 ರಂದು, ಉತ್ತರ ಗಾಜಾದಲ್ಲಿ ಇಸ್ರೇಲಿ ದಾಳಿಯು ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನ್ಯಾನ ಮೂವರು ಪುತ್ರರನ್ನು ಹತ್ಯೆಗೈದಿತ್ತು. ಹಜೆಮ್, ಅಮೀರ್ ಮತ್ತು ಮೊಹಮ್ಮದ್ ಮತ್ತು ಹಲವಾರು ಮೊಮ್ಮಕ್ಕಳ ಸಾವನ್ನು ಇಸ್ಮಾಯಿಲ್ ಹನ್ಯಾ ದೃಢಪಡಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.