ಬಿನ್ ಲಾಡೆನ್ ಪುತ್ರ ಹಂಜಾ ಹತ?
ಅಮೆರಿಕದ ಎರಡು ಮಾಧ್ಯಮ ವರದಿಗಳಲ್ಲಿ ಉಲ್ಲೇಖ
Team Udayavani, Aug 2, 2019, 5:37 AM IST
ವಾಷಿಂಗ್ಟನ್: ಅಲ್ ಖೈದಾ ಉಗ್ರ ಸಂಘಟನೆಯ ಮುಂದಿನ ನಾಯಕ ಎಂದೇ ಬಿಂಬಿತನಾಗಿದ್ದ ಹಂಜಾ ಬಿನ್ ಲಾಡೆನ್ ಅಸುನೀಗಿದ್ದಾನೆ ಎಂದು ಅಮೆರಿಕದ ‘ಎನ್ಬಿಸಿ ನ್ಯೂಸ್’ ವರದಿ ಮಾಡಿದೆ.
ಹಂಜಾ ಬಿನ್ ಲಾಡೆನ್ ಅಲ್ಖೈದಾ ಸಂಘಟನೆಯ ಸಂಸ್ಥಾಪಕ ಒಸಾಮ ಬಿನ್ ಲಾಡೆನ್ ಪುತ್ರ. ಅಮೆರಿಕದ ಗುಪ್ತಚರ ಇಲಾಖೆಯ ಮೂವರು ಅಧಿಕಾರಿಗಳನ್ನು ಉಲ್ಲೇಖೀಸಿ ತಾನು ವರದಿ ಮಾಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಅಮೆರಿಕದ ಓವಲ್ನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಚೇರಿಯ ಅಧಿಕಾರಿಗಳ ಬಳಿ ಮಾಹಿತಿ ಬಗ್ಗೆ ವಿವರಣೆ ಬಯಸಿದಾಗ, ಅದನ್ನು ಇಲ್ಲ ಅಥವಾ ಹೌದು ಎಂದು ಹೇಳಲಿಲ್ಲ ಎಂದು ಎನ್ಬಿಸಿ ಹೇಳಿಕೊಂಡಿದೆ. ಮತ್ತೂಂದು ಮಾಧ್ಯಮ ಸಂಸ್ಥೆ ‘ದ ನ್ಯೂಯಾರ್ಕ್ ಟೈಮ್ಸ್’ ಕೂಡ ಅದೇ ರೀತಿಯಲ್ಲಿ ವರದಿ ಮಾಡಿದೆ.
ಯಾವ ಸಂದರ್ಭದಲ್ಲಿ ಹಂಜಾ ಬಿನ್ ಲಾಡೆನ್ ಅಸುನೀಗಿದ್ದಾನೆ ಎಂಬ ಅಂಶವನ್ನು ಈ ಎರಡೂ ಮಾಧ್ಯಮ ವರದಿಗಳಲ್ಲಿ ಪುಷ್ಟೀಕರಿಸಲಾಗಿಲ್ಲ. ಆದರೆ, ಆತ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ದಾಳಿಯಲ್ಲಿ ಅಮೆರಿಕದ ಸೇನೆಯ ಪಾತ್ರವಿತ್ತೇ ಎಂಬುದನ್ನೂ ಬಹಿರಂಗಪಡಿಸಲಾಗಿಲ್ಲ.
ಲಾಡೆನ್ನ 20 ಮಕ್ಕಳ ಪೈಕಿ 15ನೆಯವನಾದ ಹಂಜಾ ಮೂರನೇ ಪತ್ನಿಯ ಪುತ್ರ. ಉಗ್ರ ಸಂಘಟನೆಯ ಮುಂದಿನ ಅಗ್ರೇಸರ ನಾಯಕನಾಗಿ ಬೆಳೆಯುತ್ತಿದ್ದ ಆತನ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಸರಕಾರ ಫೆಬ್ರವರಿಯಲ್ಲಿ ಘೋಷಿಸಿತ್ತು. ಆದರೆ, ಇದಕ್ಕೂ ಮೊದಲೇ ಆತ ಸತ್ತಿದ್ದಾನೆ ಎಂದು ವರದಿಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.