ಮೆಹುಲ್ ಚೋಕ್ಸಿಯನ್ನು ನಮಗೆ ಹಸ್ತಾಂತರಿಸಿ: ಡೊಮೆನಿಕಾಗೆ ಭಾರತ ಆಗ್ರಹ
Team Udayavani, May 30, 2021, 12:30 PM IST
ನವದೆಹಲಿ: ಡೊಮೆನಿಕಾದಲ್ಲಿ ಬಂಧಿಸಲ್ಪಟ್ಟಿರುವ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಈ ಕೂಡಲೇ ಭಾರತಕ್ಕೆ ಹಸ್ತಾಂತರಿಸಿ ಎಂದು ಡೊಮೆನಿಕಾ ಸರ್ಕಾರಕ್ಕೆ ಭಾರತ ಆಗ್ರಹಿಸಿದೆ ಎಂದು ವರದಿಯಾಗಿದೆ,
ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್ ಚೋಸ್ಕಿಯನ್ನು ಡೊಮೆನಿಕಾದಲ್ಲಿ ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ವಾಪಸ್ ಕರೆತರಲು ತನಿಖಾ ಸಂಸ್ಥೆಗಳು ಎಲ್ಲ ರೀತಿಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ.
ಮೆಹುಲ್ ಚೋಕ್ಸಿಯನ್ನು ಪರಾರಿಯಾದ ಭಾರತೀಯ ಪ್ರಜೆಯಂತೆ ಪರಿಗಣಿಸಬೇಕು. ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಇದ್ದು, ಕೂಡಲೇ ಆತನನ್ನು ಗಡೀಪಾರು ಮಾಡಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಭಾರತ ಹೇಳಿದೆ.
ಇದನ್ನೂ ಓದಿ: ಪ್ರೇಯಸಿಯ ಜೊತೆಗೆ ವಿವಾಹ ಬಂಧನಕ್ಕೆ ಒಳಗಾದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್
ಮೆಹುಲ್ ಚೋಕ್ಸಿ ಬೇರೆ ವಿದೇಶಗಳ ಪೌರತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಆ್ಯಂಟಿಗುವಾ ಸರ್ಕಾರ ಕೂಡ ಡೊಮಿನಿಕಾಗೆ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ.
ಮತ್ತೊಂದೆಡೆ ಮೆಹುಲ್ ಚೋಕ್ಸಿಯನ್ನು ಕರೆದೊಯ್ಯಲು ಭಾರತದಿಂದ ಖಾಸಗಿ ವಿಮಾನ ಡೊಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣ ತಲುಪಿದೆ ಎಂದು ಆ್ಯಂಟಿಗುವಾ ಪ್ರಧಾನಿ ಗಾಸ್ಟನ್ ಬ್ರೌನ್ ಭಾನುವಾರ (ಮೇ 30) ತಿಳಿಸಿದ್ದಾರೆ.
ಇದನ್ನೂ ಓದಿ: ಡೊಮಿನಿಕಾದಲ್ಲಿ ಕಂಬಿಯ ಹಿಂದೆ ಮೆಹುಲ್ ಚೋಕ್ಸಿ: ಕೈ ಮೇಲೆ ಸುಟ್ಟಗಾಯಗಳು ಪತ್ತೆ; ಹಲ್ಲೆ ಆರೋಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.