ದಾವೂದ್ ಹಸ್ತಾಂತರಿಸಿ; ಮಾತುಕತೆಗೆ ಬನ್ನಿ: ಜೈಶಂಕರ್
Team Udayavani, Nov 16, 2019, 5:40 AM IST
ಲಂಡನ್: ಭಾರತದ ಜತೆಗೆ ಪಾಕಿಸ್ಥಾನ ಉತ್ತಮ ಬಾಂಧವ್ಯ ಹೊಂದ ಬಯಸಿದ್ದೇ ಆದಲ್ಲಿ, ಕೇಂದ್ರ ಸರಕಾರ ಈಗಾಗಲೇ ಸಲ್ಲಿಸಿರುವ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ನಮಗೆ ಹಸ್ತಾಂತರ ಮಾಡಬೇಕು. ಅದು ಭಯೋತ್ಪಾದನೆಗೇ ಮುಕ್ತವಾಗಿ ಬೆಂಬಲ ಸೂಚಿಸುತ್ತಿರುವ ಹಂತದಲ್ಲಿ ಅದರ ಜತೆಗೆ ಯಾರು ಮಾತುಕತೆ ನಡೆಸುತ್ತಾರೆ ಎಂದು ವಿದೇಶಾಂಗ ಎಸ್.ಜೈಶಂಕರ್ ಪ್ರಶ್ನಿಸಿದ್ದಾರೆ.
ಫ್ರಾನ್ಸ್‌ನ “ಲಿ ಮೊಂಡೇ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಉಗ್ರಗಾಮಿ ಗಳನ್ನು ಕಳುಹಿಸುವ ಅಂಶವನ್ನು ಅದು ನಿರಾಕರಿಸಿಯೂ ಇಲ್ಲ ಎಂದು ಹೇಳಿದ್ದಾರೆ. ಅಂಥ ರಾಷ್ಟ್ರದ ಜತೆಗೆ ಯಾರು ತಾನೇ ಮಾತುಕತೆ ನಡೆಸಲು ಸಿದ್ಧರಾಗಿರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
“ನಮ್ಮ ದೇಶದಲ್ಲಿ ಹಲವು ಕುಕೃತ್ಯಗಳನ್ನು ಮಾಡಿದ ದಾವೂದ್ ಇಬ್ರಾಹಿಂ, ಮೂಲತಃ ಮುಂಬಯಿಯವನು. ಅವನನ್ನು ವಿಶ್ವಸಂಸ್ಥೆಯೇ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ಆತನನ್ನು ಏಕೆ ಹಸ್ತಾಂತರ ಮಾಡಿಲ್ಲ’ ಎಂದು ಪ್ರಶ್ನಿಸಿದರು.
ರಾಷ್ಟ್ರೀಯತೆಯ ಬಗ್ಗೆ ಪ್ರಸ್ತಾಪ ಮಾಡಿದ ಜೈಶಂಕರ್, ಅದನ್ನು “ಪಾಶ್ಚಿಮಾತ್ಯ ರಾಷ್ಟ್ರಗಳ ದೃಷ್ಟಿಕೋನದಲ್ಲಿ ನೋಡಬಾರದು’ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆ ಯುವುದಕ್ಕೆ ಮೊದಲು ಕೆಲವೊಂದು ಭದ್ರತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.