ಒಂದು ಗ್ಲಾಸ್ ಬಿಯರ್ ಗೆ 70 ಲಕ್ಷ ಕೊಟ್ಟ..!
Team Udayavani, Sep 8, 2019, 5:25 PM IST
ಕೆಲವೊಮ್ಮೆ ನಾವು ಎಷ್ಟೇ ಜಾಗೃತರಾಗಿದ್ದರೂ ನಮ್ಮಿಂದ ಯಾವುದೋ ಒಂದು ಅವಘಡ ಸಂಭವಿಸುತ್ತದೆ. ಮ್ಯಾಂಚಸ್ಟರ್ ನಲ್ಲಿ ನಡೆದ ಈ ಘಟನೆ ಕೇಳಲು ಹಾಸ್ಯಾಸ್ಪದ ಅನ್ನಿಸಿದ್ರು ನಡೆದದ್ದು ನಿಜ.
ಪೀಟರ್ ಲಾಲೋರ್ ಎನ್ನುವ ವ್ಯಕ್ತಿ ಮಾಲ್ಮೈಸನ್ ಹೋಟೆಲ್ ಗೆ ಬಿಯರ್ ಕುಡಿಯಲು ಹೋಗಿದ್ದಾರೆ. ಬಿಯರ್ ಕುಡಿದ ನಂತರ ಬಿಲ್ ಪಾವತಿಸಿದ್ದಾರೆ. ಈ ವೇಳೆಯಲ್ಲಿ ಪೀಟರ್ ಕನ್ನಡಕ ಬಿಟ್ಟು ಹೋಗಿದ್ದಾರೆ. ಬಿಲ್ ಪಾವತಿಸುವ ಯಂತ್ರ ಹಾಳಾಗಿ ಇರುವುದರಿಂದ ಅದರಲ್ಲಿ ಬರೋಬ್ಬರಿ 70 ಲಕ್ಷ ರೂಪಾಯಿ ಬಿಲ್ ನಮೂದಿತವಾಗಿರುತ್ತದೆ. ಕನ್ನಡಕ ಹಾಕದೇ ಇದ್ದ ಪೀಟರ್ ಗೆ ಇದು ಸರಿಯಾಗಿ ಕಾಣಲಿಲ್ಲ. ಈ ವೇಳೆಯಲ್ಲಿ ಪೀಟರ್ ಬಿಲ್ ಪಾವತಿಸಿದ್ದಾರೆ.
ಪೀಟರ್ ಮನೆಯಿಂದ ತಕ್ಷಣ ಖಾತೆಯಿಂದ ಇತಿಷ್ಟು ಹಣ ತೆಗೆಯಲಾಗಿದೆ ಎಂಬ ಕಾಲ್ ಬರುತ್ತದೆ. ನಂತರ ಕ್ಯಾಶ್ ಕೌಂಟರ್ ಗೆ ಬಂದು ಪೀಟರ್ ತಾನೆಷ್ಟು ಬಿಲ್ ಪಾವತಿಸಿದ್ದೇನೆ ಎಂದು ಕೇಳಿದ್ದಾರೆ. ಬಾರ್ ಕೆಲಸದವ ಮೊದಲು ಎಷ್ಟು ಎಂದು ಕೇಳಿದಾಗ ಹೇಳಲು ನಿರಾಕರಿಸಿದ್ದಾರೆ. ಪೀಟರ್ ಒತ್ತಾಯ ಮಾಡಿದಾಗ 70 ಲಕ್ಷ ಎಂದು ಹೇಳಿದ್ದಾರೆ. ಇದನ್ನು ಕೇಳಿ ಪೀಟರ್ ದಿಗ್ಬ್ರಂತನಾಗಿದ್ದಾರೆ.
ಪೀಟರ್ ಈ ಘಟನೆಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಬಿಯರ್ ಬಾಟಲ್ ಫೋಟೋವನ್ನು ಹಾಕಿ ಇದು ಅತ್ಯಂತ ದುಬಾರಿ ಬಿಯರ್ ಎಂದು ನಡೆದ ಸಂಗತಿಯನ್ನು ಬರೆದು ಶೇರ್ ಮಾಡಿದ್ದಾರೆ. ಈ ಸಂಬಂಧ ಬಾರ್ ವ್ಯವಸ್ಥಾಪಕರು ತಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿದ್ದು,70 ಲಕ್ಷದಲ್ಲಿ ಸ್ವಲ್ಪ ಹಣವನ್ನು ವಾಪಸ್ ಕೊಟ್ಟಿದ್ದಾರೆ.ದೊಡ್ಡ ಮಟ್ಟದ ಮೊತ್ತವಾಗಿರುವುದರಿಂದ ಎಲ್ಲಾ ಹಣ ವಾಪಸ್ದ ಬರುವವರೆಗೆ ಒಂಬತ್ತು ದಿನ ಕಾಯಬೇಕಾಗಬಹುದು ಎಂದಿದ್ದಾರೆ. ಪೀಟರ್ ಈಗ ತನ್ನ ಖಾತೆಯಲ್ಲಿ ಹಣ ಇಲ್ಲದೆ ಕಂಗಾಲಾಗಿದ್ದಾರೆ .ಇಷ್ಟೆಲ್ಲಾ ಎಡವಟ್ಟು ಆಗಿದ್ದು ಪೀಟರ್ ಕನ್ನಡಕ ಮರೆತು ಬಂದಿದ್ದರಿಂದ ಅನ್ನುವುದು ಹಾಸ್ಯಾಸ್ಪದ.
See this beer? That is the most expensive beer in history.
I paid $99,983.64 for it in the Malmaison Hotel, Manchester the other night.
Seriously.Contd. pic.twitter.com/Q54SoBB7wu
— Peter Lalor (@plalor) September 5, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.