ಶಿರ ತುಂಡರಿಸಿದ ದುಷ್ಕರ್ಮಿಗಳು : ಅಮೆರಿಕದ ಬೋಸ್ಟನ್‌ನಲ್ಲಿ ದುಷ್ಕೃತ್ಯ ; ಶುರುವಾಗಿದೆ ತನಿಖೆ
Team Udayavani, Jun 12, 2020, 7:37 AM IST
ವಾಷಿಂಗ್ಟನ್: ಅಮೆರಿಕದ ಮೆಸಾಚ್ಯುಸೆಟ್ಸ್‌ನ ಬೋಸ್ಟನ್ ನಗರದ ಹೃದಯ ಭಾಗದಲ್ಲಿರುವ ಕ್ರಿಸ್ಟೊಫರ್ ಕೊಲಂಬಸ್‌ನ ಪ್ರತಿಮೆಯ ಶಿರವನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಜಾರ್ಜ್ ಫ್ಲಾಯ್ಡ ಹತ್ಯೆ ಹಾಗೂ ವರ್ಣಭೇದ ನೀತಿ ವಿರೋಧಿಸಿ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ನೇತೃತ್ವ ವಹಿಸಿರುವವರು “ಕೊಲಂಬಸ್‌ನ ಸ್ಮರಣಾರ್ಥ ದೇಶಾದ್ಯಂತ ನಿರ್ಮಿಸುವ ಪ್ರತಿಮೆಗಳನ್ನು ತೆರವುಗೊಳಿಸಿ’ ಎಂದು ಕರೆ ಕೊಟ್ಟ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಇದೇ ವೇಳೆ ಮಿಯಾಮಿಯಲ್ಲೂ ಕೊಲಂಬಸ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ವಾರದ ಹಿಂದೆ ವರ್ಜೀನಿಯಾದಲ್ಲಿದ್ದ ಪ್ರತಿಮೆಯೊಂದನ್ನು ಕೆರೆಗೆ ಹಾಕಲಾಗಿತ್ತು. ಮಂಗಳವಾರ ರಾತ್ರಿ ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ಆರಂಭಿಸಿದ್ದಾರೆ.
ಸಂಸತ್ ಸಮಿತಿ ವಿಚಾರಣೆ: ಒಬ್ಬ ಕಪ್ಪು ವರ್ಣೀಯ ಸಮು ದಾಯದ ವ್ಯಕ್ತಿಯ ಪ್ರಾಣದ ಬೆಲೆ ಎಷ್ಟು? ಕೇವಲ 20 ಡಾಲರ್ ಅಲ್ಲವೇ? ಇದು ಪೊಲೀಸರ ದೌರ್ಜನ್ಯಕ್ಕೆ ಬಲಿ ಯಾದ ಜಾರ್ಜ್ ಫ್ಲಾಯ್ಡರ ಸಹೋದರ ಫಿಲೋನಿಸ್ ಫ್ಲಾಯ್ಡ ಅಮೆರಿಕದ ಕಾಂಗ್ರೆಸ್‌ಗೆ ಕೇಳಿದ ಪ್ರಶ್ನೆ. ಫ್ಲಾಯ್ಡ ಹತ್ಯೆ ಕುರಿತು ಜನಪ್ರತಿನಿಧಿಗಳ ನ್ಯಾಯಾಂಗ ಸಮಿತಿ ಮೊದಲ ವಿಚಾರಣೆ ನಡೆಸಿದ ವೇಳೆ ಸಭಾಂಗಣದಲ್ಲಿ ಹಾಜ ರಿದ್ದ ಫಿಲೋನಿಸ್, ನನ್ನ ಅಣ್ಣನದ್ದು ಒಂದು ಹತ್ಯೆ ಮಾತ್ರವಲ್ಲ. ಆತನನ್ನು ಅಕ್ಷರಶಃ ನೇಣಿಗೆ ಹಾಕಲಾಗಿದೆ. ಆತನ ಸಾವು ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಮಿತಿ ಸದಸ್ಯರಿಗೆ ತಿಳಿಸಿದರು.
ಬಂಗಾಲದಲ್ಲಿ ಪ್ರತಿಭಟನೆ
ಕೋಲ್ಕತಾ: ಪಶ್ಚಿಮ ಬಂಗಾಲದ ಬುದ್ವಾನ್ ಜಿಲ್ಲೆಯಲ್ಲಿ ಕಪ್ಪು ವರ್ಣೀಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಲೆಯೊಂದರ ಪೂರ್ವ ಪ್ರಾಥಮಿಕ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕದಲ್ಲಿ “ಯು’ ಫಾರ್ ‘ಅಗ್ಲಿ’ ಎಂದು ನಮೂದಿಸಲಾಗಿದೆ. ಅದರ ಪಕ್ಕದಲ್ಲಿ ಕಪ್ಪು ವರ್ಣೀಯ ಸಮುದಾಯದ ವ್ಯಕ್ತಿಯ ಚಿತ್ರ ಮುದ್ರಿಸಿರುವುದಕ್ಕೆ ವಿದ್ಯಾರ್ಥಿಗಳ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಗ್ಲಿ ಪದದೊಂದಿಗೆ ಕಪ್ಪು ವ್ಯಕ್ತಿಯ ಚಿತ್ರ ಹಾಕಿರುವುದನ್ನು ಕಂಡ ಪೋಷಕರು, ಬುದ್ವಾನ್ ಶಾಲೆಯ ಆವರಣದಲ್ಲಿ ಬುಧವಾರ ಪ್ರತಿ ಭಟನೆ ನಡೆಸಿದರು. ಜೊತೆಗೆ ಸಂಪೂರ್ಣ ಪಠ್ಯಪುಸ್ತಕ ವನ್ನೇ ರದ್ದು ಮಾಡಿ, ಬೇರೊಂದು ಪಠ್ಯ ರಚಿಸುವಂತೆ ಆಗ್ರಹಿಸಿದರು. ಮಕ್ಕಳಲ್ಲಿ ವರ್ಣಭೇದ ಬೆಳೆಸುವ ಶಿಕ್ಷಣ ಇಲಾಖೆ ಕ್ರಮವನ್ನು ಖಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.