![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 9, 2024, 7:52 AM IST
ಟೆಲ್ ಅವಿವ್ : ಇಸ್ರೇಲ್ ಪಡೆಗಳು ಹೆಜ್ಬುಲ್ಲಾ ನಾಯಕತ್ವದ ಉತ್ತರಾಧಿಕಾರಿಯಾಗುತ್ತಿದ್ದ ಪ್ರಮುಖ ಉಗ್ರರನ್ನು ಈಗಾಗಲೇ ಹತ್ಯೆ ಮಾಡಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಘೋಷಿಸಿದ್ದಾರೆ.
ಮೊದಲೇ ರೆಕಾರ್ಡ್ ಮಾಡಿದ ವಿಡಿಯೋ ಸಂದೇಶದಲ್ಲಿ, “ನಾವು ಹೆಜ್ಬುಲ್ಲಾ ಸಾಮರ್ಥ್ಯವನ್ನು ಕುಗ್ಗಿಸಿದ್ದೇವೆ. ನಸ್ರಲ್ಲಾ ಅವರ ಉತ್ತರಾಧಿಕಾರಿ ಮತ್ತು ಉತ್ತರಾಧಿಕಾರಿಯ ಬದಲಿ ಸೇರಿದಂತೆ ಹಲವಾರು ಉಗ್ರರನ್ನು ಹೊಡೆದುರುಳಿಸಿದ್ದೇವೆ. ಉಗ್ರ ಸಂಘಟನೆ ಪ್ರಸ್ತುತ ದುರ್ಬಲವಾಗಿದೆ ” ಎಂದು ಹೇಳಿದ್ದಾರೆ. ಆದರೆ, ನೆತನ್ಯಾಹು ಅವರು ಯಾವುದೇ ನಿರ್ದಿಷ್ಟ ಹೆಸರುಗಳನ್ನು ಬಹಿರಂಗಪಡಿಸಿಲ್ಲ.
ಲೆಬನಾನ್‌ನ ಜನರು ಹೆಜ್ಬುಲ್ಲಾ ನಂಟಿನಿಂದ ತಮ್ಮನ್ನು ಮುಕ್ತಗೊಳಿಸಬೇಕು ಎಂದು ಎಂದು ಕೇಳಿಕೊಂಡಿದ್ದು, ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಬದಲಾವಣೆಯ ಅವಕಾಶವನ್ನು ಬಳಸಿಕೊಳ್ಳಿ ಎಂದು ಒತ್ತಾಯಿಸಿದರು, ನೀವು ಈಗ ನಿಮ್ಮ ದೇಶವನ್ನು ಬದಲಾಯಿಸಬಹುದು ಮತ್ತು ಅದನ್ನು ಶಾಂತಿ ಮತ್ತು ಸಮೃದ್ಧಿಯ ಹಾದಿಗೆ ಹಿಂತಿರುಗಿಸಬಹುದು.” ಎಂದು ಹೇಳಿದ್ದಾರೆ.
ಉದ್ವಿಗ್ನತೆಯ ಮಧ್ಯೆ ನೆತನ್ಯಾಹು ಅವರು ಹೇಳಿಕೆ ನೀಡಿದ್ದಾರೆ. ಭವಿಷ್ಯದ ಮೇಲೆ ಪ್ರಭಾವ ಬೀರಲು ಲೆಬನಾನಿನ ಜನರ ಶಕ್ತಿಯನ್ನು ಒತ್ತಿಹೇಳಿದರು. ಕ್ರಮ ಕೈಗೊಳ್ಳದಿದ್ದಲ್ಲಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೆಜ್ಬುಲ್ಲಾ ವಿರುದ್ಧ ನೀವು ಕ್ರಮ ಕೈಗೊಳ್ಳದಿದ್ದರೆ ಜನನಿಬಿಡ ಪ್ರದೇಶಗಳಲ್ಲಿಯೂ ಇಸ್ರೇಲ್ ಹೋರಾಡಲು ಪ್ರಯತ್ನಿಸುವುದನ್ನು ಮುಂದುವರಿಸುತ್ತದೆ” ಎಂದು ಅಪಾಯವನ್ನು ಒತ್ತಿಹೇಳಿದರು.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.