India ಹಜ್ ಯಾತ್ರಿಗಳಿಗೆ ಹೈಸ್ಪೀಡ್ ರೈಲು ಸೇವೆ ಆರಂಭ
Team Udayavani, May 27, 2024, 6:30 AM IST
ಜೆಡ್ಡಾ: ಮೊದಲ ಬಾರಿಗೆ ಸೌದಿ ಅರೇಬಿಯಾ ಸರಕಾರ ಭಾರತೀಯ ಹಜ್ ಯಾತ್ರಿಕರನ್ನು ರೈಲಿನ ಮೂಲಕ ಮೆಕ್ಕಾಗೆ ಕರೆದೊಯ್ಯುತ್ತಿದೆ. ಭಾರತೀಯ ರಾಯಭಾರಿ ಕಚೇರಿ ವಹಿಸಿದ ಮುತುವರ್ಜಿಯಿಂದ ನೂತನ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮೆಕ್ಕಾಗೆ ತೆರಳುವ ಎಲ್ಲ ಯಾತ್ರಿಕರು ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಸ್ ಮೂಲಕ ಸಂಚರಿಸುತ್ತಿದ್ದರು. ಆದರೆ ಈ ವರ್ಷದಿಂದ ಜೆಡ್ಡಾದಲ್ಲಿನ ಭಾರತದ ರಾಯಭಾರಿ ಕಚೇರಿ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಿದ್ದು, ಭಾರತದಿಂದ ಬರುವ ಹಜ್ ಯಾತ್ರಿಕರನ್ನು ಹರಮೇನ್ ಹೈಸ್ಪೀಡ್ ರೈಲು ಮೂಲಕ ಮೆಕ್ಕಾಗೆ ಕಳಿಸುತ್ತಿದೆ. ಈ ರೈಲು ಪ್ರತೀ ಗಂಟೆಗೆ 300 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಪ್ರಸಕ್ತ ವರ್ಷ ಭಾರತದಿಂದ ತೆರಳಿರುವ ಸುಮಾರು 32,000 ಮುಸ್ಲಿಂ ಬಾಂಧವರಿಗೆ ರೈಲು ಸಂಚಾರದಿಂದ ಲಾಭವಾಗಲಿದೆ. ಈ ಹಿಂದೆ ರಸ್ತೆ ಮೂಲಕ ಪ್ರಯಾಣಿಸಲು 1 ಗಂಟೆಗೂ ಹೆಚ್ಚು ಸಮಯ ಬೇಕಿತ್ತು. ಈ ಸೌಲಭ್ಯದಿಂದ ಪ್ರಯಾಣದ ಸಮಯ ಅರ್ಧದಷ್ಟು ಕಡಿತವಾಗಲಿದೆ. ಈ ವರ್ಷ 1.75 ಲಕ್ಷ ಮಂದಿ ಭಾರತೀಯ ಯಾತ್ರಿಕರು ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.