ತಾಲಿಬಾನ್ ದಾಳಿ ಸಾಧ್ಯತೆ : ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರಿ : ಅಮೆರಿಕಾ
Team Udayavani, Aug 26, 2021, 12:53 PM IST
ಪ್ರಾತಿನಿಧಿಕ ಚಿತ್ರ
ವಾಷಿಂಗ್ಟನ್ : ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರ ಪಡೆ ವಶಪಡಿಸಿಕೊಂಡ ನಂತರ ಅಲ್ಲಿ ತಾಲಿಬಾನ್ ನಡೆಸುತ್ತಿರುವ ಹಿಂಸಾಚಾರವನ್ನು ಸಹಿಸಲು ಸಾಧ್ಯವಾಗದೇ ಅಲ್ಲಿ ವಾಸ್ತವ್ಯ ಹೂಡಿದ್ದ ವಿದೇಶಿಗರು ಅಫ್ಗಾನ್ ನನ್ನು ತೊರೆಯಲು ಹಾತೊರೆಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದತ್ತ ಜನರು ಜಮಾಯಿಸಿದ್ದಾರೆ.
ಈ ನಡುವೆ ಅಮೆರಿಕಾ ಅಪಾಯದ ಎಚ್ಚರಿಕೆಯನ್ನು ನೀಡಿದ್ದು, ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರಲು ತನ್ನ ನಾಗರಿಕರಿಗೆ ಸೂಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ : ವಾಯ್ಸ್ ಮೆಸೇಜ್ ಮಾಡಿ, ಕಾರು ಸಮೇತ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ
ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ಎಚ್ಚರಿಕೆ..?!
ಅಫ್ಗಾನ್ ನನ್ನು ತೊರೆಯುವ ಉದ್ದೇಶದಿಂದ ಏರ್ ಲಿಫ್ಟ್ ಗಾಗಿ ಸಾವಿರಾರು ಮಂದಿ ಕಾಬೂಲ್ ವಿಮಾನ ನಿಲ್ದಾಣದ ಬಳಿ ಧಾವಿಸುತ್ತಿದ್ದಾರೆ.ಇತ್ತ ತಾಲಿಬಾನ್ ಉಗ್ರ ಸಂಘಟನೆ ತನ್ನ ಹೆಚ್ಚುವರಿ ಪಡೆಗಳನ್ನು ವಿಮಾನ ನಿಲ್ದಾಣದ ಸುತ್ತಮುತ್ತ ನಿಯೋಜಿಸುತ್ತಿದ್ದು, ಪರೋಕ್ಷವಾಗಿ ದಾಳಿಯ ಎಚ್ಚರಿಕೆ ನೀಡಿದೆ ಎಂದು ಅಮೆರಿಕಾ ಹೇಳಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ದೂರ ಸರಿಯಿರಿ ಎಂದು ಅಮೆರಿಕಾ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಇನ್ನು, ಅಮೆರಿಕಾ ಮಾತ್ರವಲ್ಲದೇ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಕೂಡ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿವೆ ಎಂದು ವರದಿಯಾಗಿವೆ.
ಕಾಬೂಲ್‌ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯಿಂದ ಹೊರಡಿಸಲಾದ ಭದ್ರತಾ ಎಚ್ಚರಿಕೆಯ ಪ್ರಕಾರ, ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಈ ಸಮಯದಲ್ಲಿ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸದಂತೆ ಅಮೆರಿಕಾ ನಾಗರಿಕರಿಗೆ ಸೂಚಿಸಿದೆ.
ಕಾಬೂಲ್‌ನ ವಿಮಾನ ನಿಲ್ದಾಣದ ಹೊರಗಿನ ಗೇಟ್‌ನಲ್ಲಿ ಯುಎಸ್ ನಾಗರಿಕರು ಬೆದರಿಕೆಗಳ ಕಾರಣದಿಂದ “ತಕ್ಷಣವೇ” ಹೊರಹೋಗುವಂತೆ ವಿದೇಶಾಂಗ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಇದಲ್ಲದೆ ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ಹೊರಡಿಸಲಾದ ಭದ್ರತಾ ಎಚ್ಚರಿಕೆಯಲ್ಲಿ, ಎಬಿ ಗೇಟ್, ಈಸ್ಟ್ ಗೇಟ್ ಅಥವಾ ಉತ್ತರ ಗೇಟ್ ನಲ್ಲಿರುವ ಯುಎಸ್ ನಾಗರಿಕರು ತಕ್ಷಣವೇ ಆ ಸ್ಥಳಗಳನ್ನೂ ತೊರೆಯುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ವಿದೇಶಿ ಪ್ರಜೆಗಳ ಮೇಲೆ ತಾಲಿಬಾನ್ ದಾಳಿ
ಕಾಬೂಲ್ ವಿಮಾನ ನಿಲ್ದಾಣದ ಹೊರ ಭಾಗದಲ್ಲಿರುವ ವಿದೇಶಿ ಪ್ರಜೆಗಳ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಮೊಘಲರು ದುಷ್ಟರಲ್ಲ…ನಿಜವಾಗಿ ಈ ದೇಶ ಕಟ್ಟಿದ್ದು ಮೊಘಲರು: ನಿರ್ದೇಶಕ ಕಬೀರ್ ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.