Hijab ban; ಮುಸ್ಲಿಂ ದೇಶ ತಜಕ್‌ನಲ್ಲಿ ಹಿಜಾಬ್ ನಿಷೇಧ!
Team Udayavani, Jun 22, 2024, 6:45 AM IST
ದುಶಾನ್ಬೆ: ಮುಸ್ಲಿಂ ರಾಷ್ಟ್ರವಾದ ತಜಕಿಸ್ಥಾನದಲ್ಲಿ ಶೀಘ್ರವೇ ಹಿಜಾಬ್ ನಿಷೇಧದ ಕಾನೂನು ಜಾರಿಯಾಗಲಿದೆ. ಅಲ್ಲಿನ ಸಂಸತ್ತು ಈ ಕುರಿತ ಮಸೂದೆಯನ್ನು ಇತ್ತೀಚೆಗೆ ಅಂಗೀಕರಿಸಿದೆ. ಈ ಮೂಲಕ 2007ರಿಂದಲೂ ಚರ್ಚೆಯಲ್ಲಿದ್ದ ವಿವಾದಕ್ಕೆ ಶೀಘ್ರವೇ ತೆರೆ ಬೀಳಲಿದೆ.
ಸಂಸತ್ತಿನ ಮೇಲ್ಮನೆಯಾದ ಮಜಿಲಿ ಮಿಲ್ಲಿಯಲ್ಲಿ ಸ್ಪೀಕರ್ ರುಸ್ತುಮ್ ಎಮೋಮಲಿ ಅವರ ಅಧ್ಯಕ್ಷತೆಯಲ್ಲಿ ನಡೆದ 18ನೇ ಅಧಿವೇಶನದಲ್ಲಿ ಹಿಜಾಬ್ ನಿಷೇಧ ಕುರಿತಾದ ಮಸೂದೆಯನ್ನು ಅಂಗೀಕರಿಸಲಾಗಿದೆ. ನಿಯಮ ಗಳನ್ನು ಉಲ್ಲಂ ಸಿ ಹಿಜಾಬ್ ಧರಿಸಿದರೆ ಅದಕ್ಕೆ ಭಾರೀ ದಂಡವನ್ನು ವಿಧಿಸುವ ಬಗ್ಗೆ ಮಸೂದೆ ಪ್ರಸ್ತಾವಿಸಿದೆ.
ಅಲ್ಲದೆ ಮಕ್ಕಳ ಶಿಕ್ಷಣ ಹಾಗೂ ರಕ್ಷಣೆಯ ಹಿತದೃಷ್ಟಿಯಿಂದ ಮುಸ್ಲಿಂ ಹಬ್ಬಗಳಾದ ಈದ್ ಉಲ್ ಫಿತರ್ (ರಮ್ಜಾನ್) ಹಾಗೂ ಈದ್ ಅಲ್ ಅಧಾ (ಬಕ್ರೀದ್) ಹಬ್ಬಗಳಲ್ಲಿ ಮಕ್ಕಳು ಭಾಗಿಯಾಗುವುದಕ್ಕೂ ಮಸೂದೆ ನಿರ್ಬಂಧ ವಿಧಿಸಿದ್ದು, ಅದಕ್ಕೂ ಅನುಮೋದನೆ ದೊರೆತಿದೆ. ಈ ಮಸೂದೆಗೆ ಮೇ 8ರಂದು ಸಂಸತ್ತಿನ ಕೆಳಮನೆ ಮಜಿÉಸಿ ನಮೋ ಯಂಡಗೋನ್‌ನಲ್ಲಿ ಅನುಮೋದನೆ ದೊರೆತಿತ್ತು. ಮಸೂದೆಯಲ್ಲಿ ಹಿಜಾಬ್ ಅನ್ನು “ಅನ್ಯಗ್ರಹ ಜೀವಿಗಳ ಉಡುಗೆ’ ಎಂದೇ ಉಲ್ಲೇಖೀಸಲಾಗಿದೆ.
ಏನಿದು ನಿಷೇಧ?
2007ರಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದಕ್ಕೆ ನಿಷೇಧ
ಆ ಬಳಿಕ ಸಾರ್ವಜನಿಕ ಸಂಸ್ಥೆಗಳಿಗೂ ನಿಷೇಧ ವಿಸ್ತರಣೆ
ಸರಕಾರದ ವಿರುದ್ಧ ಅನೇಕ ಪ್ರತಿಭಟನೆಗಳು, ಮುಸ್ಲಿಂ ಸಂಸ್ಥೆಗಳ ಆಕ್ಷೇಪ
ವಿರೋಧದ ನಡುವೆಯೂ ಹಿಜಾಬ್ ನಿಷೇಧ ಜಾರಿ
2017ರಲ್ಲಿ ಹಿಜಾಬ್ ವಿರುದ್ಧ ದೇಶಾದ್ಯಂತ ಅಭಿಯಾನಗಳು ಆರಂಭ
ಹಿಜಾಬ್ ತೀವ್ರಗಾಮಿ ವಾದದ ಪ್ರತೀಕ, ವಿದೇಶಿ ಉಡುಗೆ ಎಂದು ಬಣ್ಣನೆ
ತಜಕಿಸ್ಥಾನದ ಸಾಂಪ್ರದಾಯಿಕ ಉಡುಗೆಗೆ ಮಾನ್ಯತೆ ನೀಡಲು ಒತ್ತಾಯ
ಕಾನೂನಿನ ಮೂಲಕವೇ ಹಿಜಾಬ್ ನಿಷೇಧಿಸಲು ಮಸೂದೆ ಮಂಡನೆ
ಹಿಜಾಬ್ “ಅನ್ಯಗ್ರಹ ಜೀವಿಗಳ ಉಡುಗೆ’ ಎಂದೇ ಮಸೂದೆಯಲ್ಲಿ ಉಲ್ಲೇಖ
ಮೇ 8ರಂದು ಮಸೂದೆಗೆ ಸಮ್ಮತಿ, ಜೂ. 19ರಂದು ಸಂಸತ್ತಿನಲ್ಲಿ ಅಂಗೀಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.