ಅಂಟಾರ್ಟಿಕಾ ಹಿಮಗಡ್ಡೆಯಲ್ಲಿ 17 ಕಿ.ಮೀ. ಬಿರುಕು!
Team Udayavani, Jan 8, 2017, 3:45 AM IST
ವಾಷಿಂಗ್ಟನ್: ಹವಾಮಾನ ಬದಲಾವಣೆ, ವಾತಾವರಣದ ತಾಪಮಾನ ಏರಿಕೆಯಿಂದಾಗಿ ಭಾರೀ ಪ್ರಕೃತಿ ವೈಚಿತ್ರ್ಯಗಳು ಸಂಭವಿಸುವ ಲಕ್ಷಣಗಳು ಗೋಚರಿಸುತ್ತಿವೆ. ಇದರಿಂದಾಗಿ ಅಂಟಾರ್ಟಿಕಾ ಖಂಡದ ವಿಶಾಲ ಮಂಜುಗಡ್ಡೆ ಪದರವೊಂದರಲ್ಲಿ ಕಾಣಿಸಿ ಕೊಂಡಿರುವ ಬಿರುಕು, ಕಳೆದೊಂದು ತಿಂಗಳಿ ನಿಂದ ಮತ್ತಷ್ಟು ಬೃಹದಾಕಾರವಾಗಿದ್ದು, ಹೊಸ ದಾಗಿ 11 ಮೈಲು (ಸುಮಾರು 17 ಕಿ.ಮೀ.) ಚಾಚಿಕೊಂಡಿದೆ. ಇದು ಇನ್ನು 12 ಮೈಲು ವಿಸ್ತರಿಸಿದರೆ, ಮಂಜುಗಡ್ಡೆಯ ಬೃಹತ್ ಪದರ ಅಂಟಾರ್ಟಿಕಾದಿಂದಲೇ ಬೇರ್ಪಡಲಿದೆ.
ಇದು ಹೀಗಾದರೆ ಭಾರೀ ಪ್ರಕೃತಿ ವಿಕೋಪಗಳು ಸಂಭವಿಸುವ ಭೀತಿ ಇದೆ. ದೀರ್ಘಾವಧಿ ಯಲ್ಲಿ ಜಾಗತಿಕ ಸಮುದ್ರ ಮಟ್ಟ 10 ಸೆಂ.ಮೀ. ಅಥವಾ ಸುಮಾರು ನಾಲ್ಕು ಇಂಚಿನಷ್ಟು ಹೆಚ್ಚಬಹುದು ಮತ್ತು ನೀರ್ಗಲ್ಲುಗಳು ಸಮುದ್ರಕ್ಕೆ ತೇಲಿ ಬರಬಹುದು ಎಂದು ಹೇಳಲಾಗಿದೆ.
ಅಂಟಾರ್ಟಿಕಾದಿಂದ ಬೇರ್ಪಡುವ ಸೂಚನೆ ಕೊಡುತ್ತಿರುವ ಮಂಜುಗಡ್ಡೆಯ ಪದರ ಅಮೆ ರಿಕದ ಡೆಲಾವೇರ್‌ನಷ್ಟು ವಿಸ್ತೀರ್ಣ (5,130 ಚದರ ಕಿ.ಮೀ.) ಹೊಂದಿದೆ. ಡೆಲಾವೇರ್ ಹೆಚ್ಚು ಕಡಿಮೆ ಕರ್ನಾಟಕದ ಯಾದಗಿರಿ ಅಥವಾ ಚಾಮರಾಜನಗರ ಜಿಲ್ಲೆಯಷ್ಟೇ ವಿಸ್ತೀರ್ಣವಿದೆ.
“ಲಾರ್ಸೆನ್ ಸಿ’ ಎಂಬ ಪದರದಿಂದ ಮಂಜುಗಡ್ಡೆ ಬೇರ್ಪಡುವ ಸ್ಥಿತಿಯಲ್ಲಿದೆ. ಅಂಟಾರ್ಟಿಕಾ ದಲ್ಲಿರುವ ನಾಲ್ಕನೇ ಅತಿದೊಡ್ಡ ಮಂಜುಗಡ್ಡೆ ಪದರ ಇದಾಗಿದ್ದು, 1,000 ಅಡಿಯಷ್ಟು ದಪ್ಪವಿದೆ. ಅಂಟಾರ್ಟಿಕಾದಲ್ಲಿ ರಾಸ್ ಹಾಗೂ ರೊನ್ನೆ- ಫಿಲ್ಕ್ ನೆರ್ ಎಂಬ ಬೃಹತ್ ಮಂಜುಗಡ್ಡೆ ಪದರಗಳಿದ್ದು, ಅದರ ಜತೆ ಲಾರ್ಸೆನ್ ಸಿ ಅನ್ನು ಹೋಲಿಕೆ ಮಾಡಲಾಗದು. “ಲಾರ್ಸೆನ್ ಸಿ’ ಪದರದಲ್ಲಿ ಕಳೆದ ವರ್ಷ 13 ಮೈಲುಗಳಷ್ಟು ಬಿರುಕು ಕಾಣಿಸಿಕೊಂಡಿತ್ತು. ಡಿಸೆಂಬರ್ ಆರಂಭದಿಂದ ಇದು ಇನ್ನೂ 11 ಮೈಲು ಅಂದರೆ 18 ಕಿ.ಮೀ. ದೂರ ಚಾಚಿಕೊಂಡಿದೆ. 2011ರಿಂದ ಒಟ್ಟಾರೆ 50 ಮೈಲಿನಷ್ಟು ಬಿರುಕು ಕಂಡುಬಂದಿದೆ. ಈ ಬಿರುಕು ಮತ್ತಷ್ಟು ಉದ್ದ ಸಾಗಿ 12 ಮೈಲಿ ದೂರ ಕ್ರಮಿಸಿದರೆ, ಲಾರ್ಸೆನ್ ಸಿ ಪದರ ತನ್ನ ಒಟ್ಟಾರೆ ವಿಸ್ತೀರ್ಣದಲ್ಲಿ ಶೇ.10ಕ್ಕಿಂತ ಹೆಚ್ಚು ಭಾಗ ಅಥವಾ 2000 ಚದರ ಮೈಲಿಯಷ್ಟು ಮಂಜುಗಡ್ಡೆಯನ್ನು ಕಳೆದುಕೊಂಡಂತೆ ಆಗಲಿದೆ. ಇದರಿಂದಾಗಿ ಅಂಟಾರ್ಟಿಕಾದ ಚಿತ್ರಣವೇ ಬದಲಾಗಲಿದೆ. ಈಗ ಕಾಣಿಸಿಕೊಂಡಿರುವ ಬಿರುಕು 1000 ಅಡಿಯಷ್ಟು ಆಗಲಿದೆ.
ಅಂಟಾರ್ಟಿಕಾದ ಮಂಜುಗಡ್ಡೆ ಪದರದಲ್ಲಿ ಬಿರುಕು ಕಾಣಿಸಿಕೊಂಡು ಬೇರ್ಪಡುತ್ತಿರುವುದು ಇದೇ ಮೊದಲಲ್ಲ. 2002ರಲ್ಲಿ ಲಾರ್ಸೆನ್ ಸಿ ಪಕ್ಕದಲ್ಲೇ ಇದ್ದ ಲಾರ್ಸೆನ್ ಬಿ ಪದರದಲ್ಲೂ ಇಂತಹುದೇ ಘಟನೆ ನಡೆದಿತ್ತು. ನಾಸಾದ ನೌಕೆ ಕಳೆದ ನವೆಂಬರ್‌ನಲ್ಲಿ ಅಂಟಾರ್ಟಿಕಾದಲ್ಲಿನ ಬಿರುಕಿನ ನಯನ ಮನೋಹರ ಫೋಟೋಗಳನ್ನು ಸೆರೆಹಿಡಿದಿತ್ತು. ಆದರೆ ಅದಾದ ನಂತರವೂ ಬಿರುಕು ವಿಸ್ತಾರಗೊಂಡಿದೆ.
ಅಪಾಯ ಏನು?
ಅಂಟಾರ್ಟಿಕಾದ ನೀರ್ಗಲ್ಲುಗಳು ಸಮುದ್ರ ಸೇರುವುದನ್ನು ತಪ್ಪಿಸುವ ಬಿರಡೆಯಂತೆ ಈ ಮಂಜುಗಡ್ಡೆ ಪದರ ಕಾರ್ಯನಿರ್ವಹಿಸುತ್ತದೆ. ಈಗ ಅದೇ ಬೇರ್ಪಟ್ಟರೆ, ನೀರ್ಗಲ್ಲುಗಳು ಸಮುದ್ರಕ್ಕೆ ತೇಲಿ ಬರಬಹುದು.
ಮಂಜುಗಡ್ಡೆ ಪದರ ಬೇರ್ಪಟ್ಟು ಸಮುದ್ರ ಪಾಲಾಗುವುದರಿಂದ ದೀರ್ಘಾವಧಿಯಲ್ಲಿ ಜಾಗತಿಕ ಸಮುದ್ರ ಮಟ್ಟ 10 ಸೆಂ. ಮೀ. ಅಥವಾ ಸುಮಾರು ನಾಲ್ಕು ಇಂಚಿನಷ್ಟು ಹೆಚ್ಚಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.