ಪ್ರವಾಹ: ಪಾಕ್‌ನಲ್ಲಿ ಮುಸ್ಲಿಂ ಕುಟುಂಬಗಳಿಗೆ ದೇಗುಲದ ಆಶ್ರಯ
Team Udayavani, Sep 12, 2022, 6:55 AM IST
ಇಸ್ಲಾಮಾಬಾದ್: ಪ್ರವಾಹದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ಥಾನದಲ್ಲಿ ದೇಗುಲವೊಂದು ಮುಸ್ಲಿಂ ಸಮುದಾಯದವರಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದೆ.
ಬಲೂಚಿಸ್ಥಾನ ಪ್ರಾಂತದಲ್ಲಿನ ಬಾಬಾ ಮಧೋದಾಸ್ ಮಂದಿರದಲ್ಲಿ ಈ ರೀತಿ ಆಶ್ರಯ ನೀಡಲಾಗುತ್ತಿದೆ. ಈ ದೇಗುಲ ಗುಡ್ಡದ ಮೇಲ್ಭಾಗದಲ್ಲಿದ್ದು, ಪ್ರವಾಹದ ಸಮಸ್ಯೆಗೆ ಸಿಲುಕಿಕೊಂಡಿಲ್ಲ. ಗುಡ್ಡದ ಕೆಳಗಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ಗ್ರಾಮ ಬಿಟ್ಟು ಹೊರಗೆ ಹೋಗದಂತಾಗಿದೆ.
ದೇಗುಲವನ್ನು ನಿರ್ವಹಿಸುತ್ತಿರುವ ಹಿಂದೂ ಕುಟುಂಬಗಳು ದೇಗುಲದ ಧ್ವನಿವರ್ಧಕಗಳ ಮೂಲಕ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. “ದೇಗುಲದ ಬಾಗಿಲು ತೆರೆದಿದೆ. ನೀವು ಇಲ್ಲಿಯೇ ಬಂದು ವಾಸ ಹೂಡಿ’ ಎಂದು ಮುಸ್ಲಿಂ ಸಮುದಾಯಕ್ಕೆ ಕರೆ ಕೊಟ್ಟಿದೆ.
ದೇಗುಲದಲ್ಲಿ 100 ಕೊಠಡಿಗಳಿದ್ದು, ಸುಮಾರು 200-300 ಜನರಿಗೆ ಆಶ್ರಯ ನೀಡಲಾಗಿದೆ. ಪೂರ್ತಿಯಾಗಿ ದ್ವೀಪವಾಗಿರುವ ಈ ಗ್ರಾಮಕ್ಕೆ ಸರಕಾರವು ಹೆಲಿಕಾಪ್ಟರ್ ಮೂಲಕ ದಿನಸಿ ಒದಗಿಸುತ್ತಿದ್ದು, ದೇಗುಲದಲ್ಲಿಯೇ ಎಲ್ಲರಿಗೂ ಅಡುಗೆ ಮಾಡಿ ಹಂಚಲಾಗುತ್ತಿದೆ. ಕುರಿ, ಮೇಕೆಗಳಿಗೂ ದೇಗುಲದ ಆವರಣದಲ್ಲಿಯೇ ಸ್ಥಳಾವಕಾಶ ಮಾಡಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.