ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇಗುಲ ಧ್ವಂಸ: 2 ತಿಂಗಳ ಅವಧಿಯಲ್ಲಿ ನಡೆದ ನಾಲ್ಕನೇ ಘಟನೆ
Team Udayavani, Mar 4, 2023, 11:58 AM IST
ಬ್ರಿಸ್ಬೇನ್: ಹಿಂದೂ ದೇಗುಲವನ್ನು ಧ್ವಂಸಗೊಳಿಸಿರುವ ಮತ್ತೊಂದು ಪ್ರಕರಣ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಡೆದ ನಾಲ್ಕನೇ ಘಟನೆ ಇದಾಗಿದೆ.
ಬ್ರಿಸ್ಬೇನ್‌ನ ದಕ್ಷಿಣ ಭಾಗದಲ್ಲಿರುವ ಬರ್ಬ್ಯಾಂಕ್ ನ ಸೂಬರ್ಬ್ ನಗರದಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನವನ್ನು ಧ್ವಂಸಗೊಳಿಸಿದ್ದು,ಗೋಡೆಗಳ ಮೇಲೆ ಹಿಂದೂ ವಿರೋಧಿ ಬರಹವನ್ನು ಬರೆದಿದ್ದಾರೆ. ಖಲಿಸ್ತಾನಿ ಬೆಂಬಲಿಗರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ʼಆಸ್ಟ್ರೇಲಿಯಾ ಟುಡೇʼ ವರದಿ ಮಾಡಿದೆ.
ಶನಿವಾರ( ಮಾ.4 ರಂದು) ಮುಂಜಾನೆ ಪ್ರಾರ್ಥನೆಗೆಂದು ಭಕ್ತರು ದೇವಸ್ಥಾನಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಭಕ್ತರು ಹಾಗೂ ದೇವಸ್ಥಾನದ ಆರ್ಚಕರು ನನಗೆ ಕರೆ ಮಾಡಿ ಇದರೆ ಬಗ್ಗೆ ಮಾಹಿತಿ ಕೊಟ್ಟರು. ಈ ಕುರಿತು ಮ್ಯಾನೇಜ್ ಮೆಂಟ್ ನೊಂದಿಗೆ ಸಭೆ ನಡೆಸಿ ಪೊಲೀಸರಿಗೆ ವಿವರವಾಗಿ ಹೇಳಲಿದ್ದೇವೆ ಎಂದು ದೇವಸ್ಥಾನದ ಅಧ್ಯಕ್ಷ ಸತೀಂದರ್ ಶುಕ್ಲಾ ಹೇಳಿದ್ದಾರೆ.
ಇತ್ತೀಚೆಗೆ ಬ್ರಿಸ್ಬೇನ್ ನ ಗಾಯತ್ರಿ ಮಂದಿರಕ್ಕೆ ಖಲಿಸ್ತಾನ್ ದುಷ್ಕರ್ಮಿಗಳು ಬೆದರಿಕೆ ಕರೆಯನ್ನು ಮಾಡಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿನ ಐತಿಹಾಸಿಕ ಶ್ರೀ ಶಿವ-ವಿಷ್ಣು ದೇಗುಲವನ್ನು ಖಲಿಸ್ತಾನಿ ಪರ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಮಿಲ್ ಪಾರ್ಕ್ ಬಳಿಯ ಸ್ವಾಮಿ ನಾರಾಯಣ ದೇಗುಲವನ್ನು ಜ.12ರಂದು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.