ಹಿಂದುಜಾ ಗ್ರೂಪ್ ಅಧ್ಯಕ್ಷ ಎಸ್.ಪಿ. ಹಿಂದುಜಾ ವಿಧಿವಶ
ಚಲನಚಿತ್ರ ವಿತರಕ... ಬೋಫೋರ್ಸ್ ಹಗರಣದಲ್ಲಿ ಹೆಸರಿತ್ತು...
Team Udayavani, May 17, 2023, 9:14 PM IST
ಲಂಡನ್ : ಹಿಂದುಜಾ ಗ್ರೂಪ್ ಅಧ್ಯಕ್ಷ ಶ್ರೀಚಂದ್ ಪರ್ಮಾನಂದ ಹಿಂದುಜಾ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಬುಧವಾರ ಲಂಡನ್‌ನಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1964ರಲ್ಲಿ ಬಾಲಿವುಡ್ ಬ್ಲಾಕ್‌ಬಸ್ಟರ್ ಚಲನಚಿತ್ರ ‘ಸಂಗಮ್’ನ ಅಂತಾರಾಷ್ಟ್ರೀಯ ವಿತರಣಾ ಹಕ್ಕುಗಳೊಂದಿಗೆ ಪ್ರಾರಂಭವಾದ ಅವರ ವ್ಯಾಪಾರ ಯಶಸ್ಸುಗಳು ಅವರನ್ನು ಬ್ರಿಟನ್‌ನ ಅತ್ಯಂತ ಶ್ರೀಮಂತರಲ್ಲಿ ಒಬ್ಬರನ್ನಾಗಿ ಮಾಡಿತು. ಬೋಫೋರ್ಸ್ ಹಗರಣ ಶ್ರೀಚಂದ್ ಪರ್ಮಾನಂದ ಹಿಂದುಜಾ ಅವರನ್ನು ಪ್ರಸಿದ್ಧಿ ಬದಲಿಗೆ ಅಪಖ್ಯಾತಿಯನ್ನು ತಂದು ನೀಡಿತು.
ಬ್ರಿಟಿಷ್ ಇಂಡಿಯಾದ ಕರಾಚಿಯ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಶ್ರೀಚಂದ್ ಪರ್ಮಾನಂದ ಮತ್ತು ಅವರ ಇಬ್ಬರು ಕಿರಿಯ ಸಹೋದರರು ಸ್ವೀಡಿಷ್ ಬಂದೂಕು ತಯಾರಕ ಎಬಿ ಬೋಫೋರ್ಸ್‌ಗೆ ಭಾರತ ಸರ್ಕಾರದ ಗುತ್ತಿಗೆಯನ್ನು ಪಡೆಯಲು ಸಹಾಯ ಮಾಡಲು ಅಕ್ರಮ ಕಮಿಷನ್‌ಗಳಲ್ಲಿ ಒಟ್ಟು 64 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಮೂವರೂ – ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದುಜಾ, ಆದಾಗ್ಯೂ 2005 ರಲ್ಲಿ ದೆಹಲಿ ಹೈಕೋರ್ಟ್‌ನಿಂದ ಖುಲಾಸೆಗೊಂಡಿತ್ತು.
ನಾಲ್ವರು ಸಹೋದರರಲ್ಲಿ ಹಿರಿಯ ಮತ್ತು ಹಿಂದುಜಾ ಗ್ರೂಪ್‌ನ ಅಧ್ಯಕ್ಷರಾದ ಎಸ್‌ಪಿ ಹಿಂದುಜಾ ಅವರು ಈ ವರ್ಷದ ಜನವರಿಯಲ್ಲಿ ತಮ್ಮ ಪತ್ನಿ ಮಧು ಅವರನ್ನು ಕಳೆದುಕೊಂಡಿದ್ದರು. ಪುತ್ರಿಯರಾದ ಶಾನು ಮತ್ತು ವಿನೂ ಅವರನ್ನು ಅಗಲಿದ್ದಾರೆ.
1919 ರಲ್ಲಿ ಇರಾನ್‌ಗೆ ತೆರಳುವ ಮೊದಲು ಭಾರತದ ಈಗ ಪಾಕಿಸ್ಥಾನದ ಸಿಂಧ್ ಪ್ರದೇಶದಲ್ಲಿ ಸರಕುಗಳನ್ನು ವ್ಯಾಪಾರ ಮಾಡುತ್ತಿದ್ದ ಪರ್ಮಾನಂದ್ ದೀಪ್‌ಚಂದ್ ಅವರು ಹಿಂದುಜಾ ಸಾಮ್ರಾಜ್ಯವನ್ನು ಪ್ರಾರಂಭಿಸಿದರು. 1964 ರಲ್ಲಿ ಎಸ್‌ಪಿ ಹಿಂದುಜಾ ಅವರು ರಾಜ್ ಕಪೂರ್ ಅಭಿನಯದ ‘ಸಂಗಮ್’ ಚಲನಚಿತ್ರವನ್ನು ಮಧ್ಯಪ್ರಾಚ್ಯ ಮಾರುಕಟ್ಟೆಗಳ ಮೂಲಕ ವಿತರಿಸಿದರು. ಇದು ಅವಲ ಮೊದಲ ಮಿಲಿಯನ್ ಡಾಲರ್ ಗಳಿಸಲು ಸಹಾಯ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.