ಎಚ್ಚರಿಕೆಗೂ ಜಗ್ಗದ ಆಕ್ರೋಶ : ಹಾಂಕಾಂಗ್‌ನಲ್ಲಿ ಎಲ್ಲೆ ಮೀರುತ್ತಿರುವ ಹೋರಾಟ
Team Udayavani, Nov 19, 2019, 7:15 AM IST
ಹಾಂಕಾಂಗ್: ಪ್ರಜಾಪ್ರಭುತ್ವ ಮಾದರಿ ಆಡಳಿತಕ್ಕೆ ಆಗ್ರಹಿಸಿ, ಆರು ತಿಂಗಳಿಂದ ನಡೆಯುತ್ತಿರುವ ಹಾಂಕಾಂಗ್ ಯುವ ಜನತೆಯ ಹೋರಾಟ, ಸೋಮವಾರ ಮತ್ತೂಂದು ಮಜಲು ಮುಟ್ಟಿದೆ. ಹಾಂಕಾಂಗ್ ಪಾಲಿಟೆಕ್ನಿಕ್ ವಿವಿ (ಪಾಲಿ-ಯು) ಕ್ಯಾಂಪಸ್‌ನಲ್ಲಿ ಅಡಗಿರುವ ಸಾವಿರಾರು ಹೋರಾಟಗಾರರು ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ಉಗ್ರ ಪ್ರತಿಭಟನೆ ನಡೆಸಿದ್ದಾರೆ.
ರವಿವಾರ, ಪ್ರತಿಭಟನಕಾರರು ಬಿಲ್ಲು- ಬಾಣ ಪ್ರಯೋಗಿಸಿದ ಪರಿಣಾಮ, ಪೊಲೀಸ್ ಸಿಬಂದಿಯೊಬ್ಬರ ಕಾಲಿಗೆ ಬಾಣ ನೆಟ್ಟುಕೊಂಡಿತ್ತು. ಹೀಗಾಗಿ ಪೊಲೀಸರು, ಗೋಲಿಬಾರ್ ಮಾಡುವುದಾಗಿ ಹೋರಾಟಗಾರರನ್ನು ಎಚ್ಚರಿಸಿ, ವಿವಿಯ ಆವರಣದೊಳಕ್ಕೆ ಲಗ್ಗೆಯಿಡಲು ಪ್ರಯತ್ನಿಸಿದರು. ರೊಚ್ಚಿಗೆದ್ದ ಹೋರಾಟಗಾರರು, ಟೈರು ಮತ್ತಿತರ ಸಾಮಗ್ರಿಗಳಿಗೆ ಬೆಂಕಿಯಿಟ್ಟು ಪೊಲೀಸರು ವಿವಿ ಪ್ರವೇಶಿಸದಂತೆ ನೋಡಿಕೊಂಡರು.
ಜತೆಗೆ, ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದರಲ್ಲದೆ, ವಿವಿಯ ಮುಖ್ಯ ಕಟ್ಟಡದ ಮೇಲಿನಿಂದ ಕಚ್ಚಾ ಬಾಂಬ್‌ಗಳನ್ನೂ ಎಸೆದರು. ಈ ಮೂಲಕ ವಿವಿ ತಮ್ಮ ವಶದಲ್ಲಿದೆ ಎಂಬ ಸಂದೇಶವನ್ನೂ ರವಾನಿಸಿದರು. ಇಡೀ ನಗರವೇ ಹೊತ್ತಿ ಹೊರಿಯುತ್ತಿರುವ ಹಿನ್ನೆಲೆಯಲ್ಲಿ ಚೀನದ ಅಧ್ಯಕ್ಷ ಹೋರಾಟ ಕೈಬಿಡದಿದ್ದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ, ಸ್ಪೈಸ್ ಜೆಟ್ ಸಹಿತ ಏಷ್ಯಾದ ಅನೇಕ ವೈಮಾನಿಕ ಕಂಪೆನಿಗಳು ಹಾಂಕಾಂಗ್‌ಗೆ ತೆರಳುವ ವಿಮಾನಗಳ ಸಂಚಾರ ರದ್ದು ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.