ಹವಾಮಾನವಿಲ್ಲಿ ಬೇಗ ಬಿಸಿ!
Team Udayavani, Dec 14, 2017, 12:40 PM IST
ನ್ಯೂಯಾರ್ಕ್: ಪ್ರಕೃತಿಯ ವಿಸ್ಮಯಗಳ ಸಾಲಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರದ ಜನಪ್ರಿಯ ನಗರ ಅಲಸ್ಕಾದ ಬ್ಯಾರೋ ಪ್ರದೇಶ ಈಗ ಹೊಸ ಸೇರ್ಪಡೆ. ಯಾಕೆಂದರೆ ಶರವೇಗದಲ್ಲಿ ಈ ನಗರ ಬೆಚ್ಚಗಾಗುತ್ತಿದೆ!
ಹೀಗಂತ ನಾವು ಹೇಳುತ್ತಿರುವುದಲ್ಲ. ಸ್ವತಃ ಅಮೆರಿಕದ ರಾಷ್ಟ್ರೀಯ ಸಾಗರ ಹಾಗೂ ಹವಾಮಾನ ಅಧ್ಯಯನ ಕೇಂದ್ರದ (ಎನ್‌ಒಎಎ) ವಿಜ್ಞಾನಿಗಳ ಈ ತಿಂಗಳಿನ ದತ್ತಾಂಶಗಳ ವರದಿಯಲ್ಲಿ ದಾಖಲಾಗಿದೆ. ಇದನ್ನು ಕಳೆದ ವಾರ ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ಅಚ್ಚರಿ ಮೂಡಿಸಿದೆ. ಅಮೆರಿಕದ ಹವಾಮಾನ ಅಧ್ಯಯನ ಕೇಂದ್ರಗಳ ಪೈಕಿ ಎನ್‌ಒಎಎ ಪ್ರಮುಖವಾದುದಾಗಿದೆ. ವರದಿಯ ಪ್ರಕಾರ ಈ ಬಾರಿ ಇಲ್ಲಿನ ಉಷ್ಣಾಂಶ ಸಾಕಷ್ಟು ವೇಗವಾಗಿ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಇದು ಸಹಜವಾದುದಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ವಿಜ್ಞಾನಿಗಳು ಆನ್‌ಲೈನ್‌ನ ಆಟೋ ಅಪ್‌ಡೇಟೆಡ್ ವ್ಯವಸ್ಥೆಯಿಂದಲೇ ತೆಗೆದುಹಾಕಿದ್ದಾರೆ. ಅಲ್ಲದೆ, ಇದು ಉತ್ತರ ಧ್ರುವದ ಮೇಲೆಯೂ ಭಾರೀ ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎನ್‌ಒಎಎ ಮಾಹಿತಿಯ ಪ್ರಕಾರ ಉತ್ತರ ಧ್ರುವದಲ್ಲಿ ಇಷ್ಟು ವೇಗವಾಗಿ ಉಷ್ಣಾಂಶ ಹೆಚ್ಚುತ್ತಿರುವುದು ಭೂಮಿಯಲ್ಲಿಯೇ ಇದೇ ಮೊದಲು. ಕಲ್ಲಿದ್ದಲು ಗಣಿಯಲ್ಲಿ ಕಾಣಿಸಿಕೊಳ್ಳುತ್ತಿರುವ ವಿಪತ್ತಿನಿಂದಾಗಿ ಈ ಬದಲಾವಣೆ ಆಗುತ್ತಿದೆ ಎಂದು ಹೇಳಲಾಗಿದೆ.
ದತ್ತಾಂಶ ಕಾಣಿಸದೇ ಇರು ವುದು ಸಹಜವಾಗಿ ಅಧ್ಯಯ ನದಲ್ಲಿರುವ ವಿಜ್ಞಾನಿಗಳಿಗೆ ಗೊಂದಲ ಮೂಡಲು ಕಾರಣವಾಗಿದೆ. ನಾನು ಕಂಡಂತೆ ಇದೊಂದು ದಾಖಲೆಯೇ ಆಗಿದೆ.
– ಡೇಕ್ ಆರೆಂಡಕ್ಟ್, ಎನ್‌ಒಎಎ ಹವಾಮಾನ ಇಲಾಖೆ ಮುಖ್ಯಸ್ಥ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.