Missing Scissors: 2ಕತ್ತರಿ ನಾಪತ್ತೆಯಾಗಿದ್ದಕ್ಕೆ ಜಪಾನಲ್ಲಿ 36 ವಿಮಾನಗಳ ಹಾರಾಟವೇ ರದ್ದು!
Team Udayavani, Aug 22, 2024, 7:00 AM IST
ಟೊಕಿಯೋ: 2 ಕತ್ತರಿಗಳು ಕಳೆದಹೋದ ಕಾರಣಕ್ಕೆ 36 ವಿಮಾನಗಳ ಪ್ರಯಾಣವನ್ನೇ ರದ್ದುಗೊಳಿಸಿ, 200ಕ್ಕೂ ಅಧಿಕ ವಿಮಾನಗಳ ಹಾರಾಟ ವಿಳಂಬಗೊಳಿಸಿದ ಘಟನೆ ಜಪಾನ್ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ನ್ಯೂ ಚಿಟೋಸ್‌ನಲ್ಲಿ ನಡೆದಿದೆ.
ವಿಮಾನ ನಿಲ್ದಾಣದ ಒಳಗಿರುವ ಅಂಗಡಿ ಮಳಿಗೆಯೊಂದರಲ್ಲಿ 2 ಕತ್ತರಿಗಳು ಕಾಣೆಯಾಗಿವೆ. ತಕ್ಷಣ ಕತ್ತರಿಗಳನ್ನು ಯಾರಾದರೂ ಕದ್ದಿರಬಹುದೆಂದು ಹಾಗೂ ಭಯೋತ್ಪಾದಕ ಕೃತ್ಯಕ್ಕೆ ಅಥವಾ ಬೇರಾವುದೋ ಸಂಚಿಗಾಗಿ ಕತ್ತರಿಗಳನ್ನ ಕದ್ದಿರುವ ಸಾಧ್ಯತೆ ಪರಿಗಣಿಸಿ ಸಿ ಸಿಬ್ಬಂದಿ ಇಡೀ ವಿಮಾನ ನಿಲ್ದಾಣವನ್ನೇ ಶೋಧಿಸಿದ್ದಾರೆ. ಹೊರಗಿಂದ ಬರುವ ಪ್ರಯಾಣಿಕರಿಗೆ 2 ಗಂಟೆ ಪ್ರವೇಶ ನಿರಾಕರಿಸಿ, ಒಳಗಿರುವ ಪ್ರಯಾಣಿಕರನ್ನು ಮತ್ತೆ ತಪಾಸಣೆಗೆ ಒಳಪಡಿಸಲಾಗಿದೆ. ಇದರಿಂದ ಪ್ರಯಾಣಿಕರು ಪೇಚಾಡುವಂತಾಗಿದೆ. ಆದರೆ, ಕೊನೆಯಲ್ಲಿ ಕಳೆದುಹೋಗಿದ್ದ ಮಳಿಗೆಯಲ್ಲೇ ಕತ್ತರಿಗಳು ಸಿಕ್ಕಿವೆ. ಟೋಸ್‌ನಲ್ಲಿ ಭದ್ರತೆಗೆ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ಕಾರಣ ಕತ್ತರಿಗಳ ನಾಪತ್ತೆಯು ಇಷ್ಟೆಲ್ಲಾ ಅವಾಂತರ ಸೃಷ್ಟಿಸಿತು ಎಂದು ಅಧಿಕಾರಿಗಳು ವಿಷಾದ ವ್ಯಕ್ತ ಪಡಿಸಿದ್ದಾರೆ.
Trouble at New Chitose Airport (CTS) in Hokkaido, Japan.
It was discovered that baggage in breach of the rules was brought in beyond the security checkpoint.
All passengers in the gate area had to be let out once and the inspection needs to be redone. https://t.co/ye3HdiKIwE— Nobi Hayashi 林信行 (@nobi) August 17, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.