ಜೀವ ಉಳಿಸುವ ಔಷಧ ಕಂಪೆನಿಯಿಂದಲೇ ಸೋಂಕು ಪ್ರಸರಣ ! ಕೋವಿಡ್‌ ಕರಾಮತ್ತೇ ಹೀಗೆ


Team Udayavani, Apr 15, 2020, 1:00 PM IST

ಜೀವ ಉಳಿಸುವ ಔಷಧ ಕಂಪೆನಿಯಿಂದಲೇ ಸೋಂಕು ಪ್ರಸರಣ ! ಕೋವಿಡ್‌ ಕರಾಮತ್ತೇ ಹೀಗೆ

ಬೋಸ್ಟನ್‌: ಜೀವವುಳಿಸುವ ಔಷಧ ತಯಾರಿಸುವ ಕಂಪೆನಿಯೇ ತನಗರಿವಿಲ್ಲದೆ ಕೋವಿಡ್‌ ವೈರಸ್‌ನ “ಸುಪರ್‌ ಸ್ಪ್ರೆಡ್ಡರ್‌’ ಆದದ್ದು ಹೇಗೆ ಎನ್ನುವುದನ್ನು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಇದು ಒಂದು ಉದಾಹರಣೆ ಮಾತ್ರ. ಜಗತ್ತಿನಾದ್ಯಂತ ಹೀಗೆ ಹಲವು ಸಂಸ್ಥೆಗಳು, ವ್ಯಕ್ತಿಗಳು ತಮಗರಿವಿಲ್ಲದೆ ಕೋವಿಡ್‌ ವಾಹಕರಾಗಿ ಕೆಲಸ ಮಾಡಿದ್ದಾರೆ. ಕೋವಿಡ್‌ ಹಾವಳಿ ತೀವ್ರವಾಗಲು ಆರಂಭದ ಹಂತದಲ್ಲಿ ಅದರ ಬಗ್ಗೆ ಸಮರ್ಪಕವಾದ ಮಾಹಿತಿ ಇಲ್ಲದಿರುವುದೇ ಕಾರಣ ಎಂದು ಈಗ ಸ್ಪಷ್ಟವಾಗುತ್ತಿದೆ.

ಕೋವಿಡ್‌ ಬಗ್ಗೆ ಏನೇನೂ ಅರಿವಿಲ್ಲದ ಬಯೊಜೆನ್‌ ಅಧಿಕಾರಿಗಳು ಪ್ರಯಾಣಿಕರಿಂದ ತುಂಬಿದ್ದ ವಿಮಾನಗಳಲ್ಲಿ ಪ್ರಯಾಣಿಸಿದರು, ಮನೆಗೆ ಹೋಗಿ ಹೆಂಡತಿ ಮಕ್ಕಳೊಂದಿಗೆ ವಾರಾಂತ್ಯವನ್ನು ಕಳೆದರು, ಮಾಲ್‌, ಸಿನೆಮಾಗಳಿಗೆ ಹೋದರು ಮತ್ತು ತಾವು ಹೋದಡೆಗಳಲ್ಲಿ ಕೋವಿಡ್‌ ಸೋಂಕು ಹರಡಿದರು. ಬಯೊಜೆನ್‌ ಸಿಬಂದಿಯಿಂದಾಗಿ ಆರು ರಾಜ್ಯಗಳಿಗೆ, ಕೊಲಂಬಿಯ ಜಿಲ್ಲೆ ಮತ್ತು ಮೂರು ದೇಶಗಳಿಗೆ ಕೋವಿಡ್‌ ಹರಡಿತು.

ವೈರಾಣು ತಜ್ಞರು ಈ ರೀತಿ ವೈರಸ್‌ ಹರಡುವವರನ್ನು “ಸುಪರ್‌ ಸ್ಪ್ರೆಡ್ಡರ್’ ಎಂದು ಹೆಸರಿಸಿದ್ದಾರೆ. ಆರಂಭಿಕ ಹಂತದಲ್ಲಿ ಬಯೊಜೆನ್‌ನಂಥ ಸುಪರ್‌ ಸ್ಪ್ರೆಡ್ಡರ್‌ಗಳೇ ಕೋವಿಡ್‌ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ರೋಗಗಳನ್ನು ಶಮನಗೊಳಿಸಬೇಕಾದವರೇ ರೋಗದ ವಾಹಕರಾದದ್ದು ಹೀಗೆ.

ಇಂಡಿಯಾನದಲ್ಲಿ ವರದಿಯಾದ ಮೊದಲ ಎರಡು ಕೋವಿಡ್‌ ಪ್ರಕರಣ ಬಯೊಜೆನ್‌ ಉನ್ನತಾಧಿಕಾರಿಗಳದ್ದು. ಅಂತೆಯೇ ಟೆನ್ನೆಸೆಯ ಮೊದಲ ಪ್ರಕರಣವೂ ಬಯೊಜೆನ್‌ ಅಧಿಕಾರಿಯದ್ದು. ಉತ್ತರ ಕರೋಲಿನದ ಮೊದಲ ಆರು ಪ್ರಕರಣಗಳು ನೇರವಾಗಿ ಬಯೊಜೆನ್‌ಗೆ ಸಂಬಂಧಿಸಿವೆ.

ಹಾಗೆಂದು ಇದರಲ್ಲಿ ಬಯೊಜೆನ್‌ ಸಂಪೂರ್ಣ ಅಮಾಯಕ ಎನ್ನುವಂತಿಲ್ಲ. ಯುರೋಪ್‌ನಲ್ಲಿ ಕೋವಿಡ್‌ ಹಾವಳಿ ತೀವ್ರಗೊಂಡಿರುವಾಗಲೇ ಫೆಬ್ರವರಿಯಲ್ಲಿ ಬಯೊಜೆನ್‌ ತನ್ನ ವಾರ್ಷಿಕ ಮಹಾಸಭೆಯನ್ನು ನಡೆಸಿತು. ಇದರಲ್ಲಿ ಯುರೋಪಿನ ಹಲವು ಎಕ್ಸಿಕ್ಯೂಟಿವ್‌ಗಳು ಭಾಗವಹಿಸಿದ್ದರು. ತಜ್ಞರು ಈ ಸಭೆ ನಡೆಸದಂತೆ ಹೇಳಿದರೂ ಬಯೊಜೆನ್‌ ಆಡಳಿತ ಮಂಡಳಿ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಈ ಸಭೆಯ ಬಳಿಕ ಬಯೊಜೆನ್‌ ಮೂಲಕ ಕೋವಿಡ್‌ ಹರಡುವುದು ಕ್ಷಿಪ್ರವಾಯಿತು.

ಜರ್ಮನಿ, ಇಟಲಿ, ಸ್ವಿಜರ್‌ಲ್ಯಾಂಡ್‌ ಮತ್ತಿತರ ದೇಶಗಳ ಎಕ್ಸಿಕ್ಯೂಟಿವ್‌ಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಮಹಾಸಭೆಯ ಮೊದಲ ರಾತ್ರಿ ಬೋಸ್ಟನ್‌ ಹಾರ್ಬರ್‌ಗೆ ಅಭಿಮುಖವಾಗಿರುವ ಮಾರಿಯಟ್‌ ಲಾಂಜ್‌ ವಾಫ್ì ಹೊಟೇಲಿನಲ್ಲಿ 175 ಎಕ್ಸಿಕ್ಯೂಟಿವ್‌ಗಳು ಸೇರಿದ್ದರು. ಒಂದು ವರ್ಷದ ಬಳಿಕ ಭೇಟಿಯಾದ ಸಹೋದ್ಯೋಗಿಗಳು ಹಸ್ತಲಾಘವವಿತ್ತು ಪರಸ್ಪರರನ್ನು ಅಭಿನಂದಿಸಿದರು. ಕೆನ್ನೆಗೆ ಮುತ್ತಿಕ್ಕುವುದು ನಡೆಯಿತು. ಇದು ಕೋವಿಡ್‌ ವೈರಸ್‌ ಹರಡುವ ಅತ್ಯುತ್ತಮ ತಾಣವಾಗಿತ್ತು. ಮರುದಿನವೂ ಇದೇ ಮಾದರಿಯ ಪಾರ್ಟಿ ಇನ್ನೊಂದು ಪಂಚತಾರಾ ಹೊಟೇಲಿನಲ್ಲಿ ನಡೆಯಿತು. ಈ ಪಾರ್ಟಿಯಲ್ಲಿ ಭಾಗವಹಿಸಿದವರೆಲ್ಲ ತಮ್ಮ ಜತೆಗೆ ಕೋವಿಡ್‌ ವೈರಸ್‌ನ್ನು ಒಯ್ದರು.

ವಾರಾಂತ್ಯಕ್ಕಾಗುವಾಗ ಪಾರ್ಟಿಯಲ್ಲಿ ಭಾಗವಹಿಸಿದ ಒಬ್ಬೊಬ್ಬರೇ ಅಸ್ವಸ್ಥರಾಗತೊಡಗಿದರು. ಜೈಲಿಯಂಥ ಪಾರ್ಟಿಗೆ ಹೋಗದವರಿಗೂ ವೈರಸ್‌ ತಗಲಿತ್ತು. ಜೈಲಿ ಪಾರ್ಟಿಯಲ್ಲಿ ಭಾಗವಹಿಸುವಷ್ಟು ಉನ್ನತ ಮಟ್ಟದ ಅಧಿಕಾರಿಯಲ್ಲ. ಆದರೆ ಅವರ ಬಾಸ್‌ ಪಾರ್ಟಿಗೆ ಹೋಗಿದ್ದರು. ಬಾಸ್‌ನಿಂದ ಜೈಲಿಗೆ ವೈರಸ್‌ ಹರಡಿತ್ತು. ಇಂಥ ಹಲವು ಪ್ರಕರಣಗಳು ಬಯೊಜೆನ್‌ ಒಳಗಿದೆ.
ಮಾರ್ಚ್‌ 2ರಂದು ಕಂಪೆನಿಯ ಮುಖ್ಯ ಮೆಡಿಕಲ್‌ ಆಫೀಸರ್‌ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಕೆಲವರು ಅಸ್ವಸ್ಥರಾಗಿರುವ ಕಾರಣ ಭಾಗವಹಿಸಿದವರೆಲ್ಲರೂ ವೈದ್ಯಕೀಯ ತಪಾಸಣೆಗೊಳಪಡಬೇಕೆಂದು ಸೂಚಿಸಿ ಇ-ಮೈಲ್‌ ರವಾನಿಸಿದರು. ಆದರೆ ಅಷ್ಟರಲ್ಲಿ ಆಗಬೇಕಾದ ಅನಾಹುತ ಆಗಿಹೋಗಿತ್ತು.

ಮುಂದಿನ ಕೆಲವು ವಾರಗಳು ಬಯೊಜೆನ್‌ ಸಿಬಂದಿಯ ಪಾಲಿಗೆ ಯಾತನಾದಾಯಕವಾಗಿದ್ದವು. ಯಾರೆಲ್ಲ ಅಸ್ವಸ್ಥರಾಗಿದ್ದಾರೆಂದು ಮನೆಮನೆಗೆ ಹೋಗಿ ಹುಡುಕುವುದೇ ಅವರ ಕೆಲಸವಾಗಿತ್ತು. ಬಯೊಜೆನ್‌ ಕಾರ್ಯಕ್ರಮಗಳ ಛಾಯಾಚಿತ್ರಗ್ರಾಹಕಿಯಾಗಿದ್ದ ಮಿಸ್‌ ಟರಂಟೊ ಅವರನ್ನೂ ಕೋವಿಡ್‌ ಬಿಡಲಿಲ್ಲ. ಟರಂಟೊ ತನಗರಿವಿಲ್ಲದೆ ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಅಲ್ಲೂ ವೈರಸ್‌ಹರಡಿದರು.

ಇದೀಗ ಬಯೊಜೆನ್‌ ವಿರ್‌ ಟೆಕ್ನಾಲಜಿ ಎಂಬ ಇನ್ನೊಂದು ಕಂಪೆನಿಯ ಜತೆಗೆ ಸೇರಿಕೊಂಡು ಕೋವಿಡ್‌ಗೆ ಔಷಧ ಕಂಡುಹಿಡಿಯಲು ಮುಂದಾಗಿದೆ.

ಸಮಾರಂಭಗಳಿಂದ ಹರಡಿತು ವೈರಸ್‌
ಬಯೊಜೆನ್‌ ಎಂಬ ಔಷಧ ತಯಾರಿಸುವ ಕಂಪೆನಿ ಇರುವುದು ಬೋಸ್ಟನ್‌ನಲ್ಲಿ. ಕಂಪೆನಿ ಇತ್ತೀಚೆಗೆ ಶೋಧಿಸಿದ ಅಲ್ಜೀಮರ್ ಔಷಧ ಯಶಸ್ವಿಯಾಗುವ ಸೂಚನೆ ಲಭಿಸಿತ್ತು. ಹೀಗಾಗಿ ಕಂಪೆನಿಯಲ್ಲಿ ಸಡಗರದ ವಾತಾವರಣವಿತ್ತು. ಔಷಧ ಸಂಶೋಧನೆ ಯಶಸ್ವಿಯಾಗಿರುವ ಸಂಭ್ರಮಾಚಾರಣೆಯನ್ನು ನಡೆಸಲಾಗಿತ್ತು. ದುರಂತವೆಂದರೆ ಇಂಥ ಸಮಾರಂಭಗಳೇ ಕೋವಿಡ್‌ ವೈರಸ್‌ ಹರಡುವ ವಾಹಕಗಳಾದವು. ಬಯೊಜೆನ್‌ನ ಉನ್ನತ ಅಧಿಕಾರಿಗಳು ಪಂಚತಾರಾ ಹೊಟೇಲುಗಳಲ್ಲಿ ಅಲ್ಜೀಮರ್ ಔಷಧದ ಯಶಸ್ಸಿನ ಸಂಭ್ರಮದಲ್ಲಿರುವಾಗ ಕೋವಿಡ್‌ ವೈರಸ್‌ ಸದ್ದಿಲ್ಲದೆ ಪ್ರಸರಣವಾಗುತ್ತಿತ್ತು.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.