Imran khan;ಪಕ್ಷದ ವೋಟ್ ಬ್ಯಾಂಕ್ ಹೆಚ್ಚುತ್ತಿರುವಾಗ ಹೇಗೆ ತುಳಿಯುತ್ತೀರಿ?: ಇಮ್ರಾನ್
ಬಂಧಕ್ಕೊಳಗಾಗುವ ಮುನ್ನಾ ದಿನ ನೀಡಿದ ಹೇಳಿಕೆ ಕುರಿತು ಭಾರಿ ಚರ್ಚೆ
Team Udayavani, Aug 5, 2023, 6:22 PM IST
ಇಸ್ಲಾಮಾಬಾದ್ : ”ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ನಾನು ಮತ್ತು ಬೆಂಬಲಿಗರ ವಿರುದ್ಧ ಸೇಡಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ನನ್ನ ಪಕ್ಷವು ದೇಶವನ್ನು ಮುನ್ನಡೆಸಲಿದೆ” ಎಂದು ಬಂಧನಕ್ಕೆ ಒಂದು ದಿನ ಮೊದಲು, ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೊಂಡಿದ್ದರು.
“ಪಿಟಿಐ (ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್) ಚುನಾವಣೆಯಲ್ಲಿ ಮುನ್ನಡೆಯುತ್ತದೆ ಎಂಬ ಭಯ ಮಿಲಿಟರಿ ಮತ್ತು ಸರ್ಕಾರಕ್ಕೆ ಇದೆ. ಈಗಾಗಲೇ ನನ್ನ ಪಕ್ಷವನ್ನು ಹತ್ತಿಕ್ಕಲು ಯೋಜಿಸಿದ್ದರು,”ಪಕ್ಷದ ಮತಬ್ಯಾಂಕ್ ಹೆಚ್ಚುತ್ತಿರುವಾಗ ನೀವು ಅದನ್ನು ಹೇಗೆ ನಾಶಮಾಡುತ್ತೀರಿ? ”ಎಂದು 70 ವರ್ಷದ ಕ್ರಿಕೆಟಿಗ-ರಾಜಕಾರಣಿ ಖಾನ್ ಶುಕ್ರವಾರ ರಾತ್ರಿ ಯೂಟ್ಯೂಬ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದರು.
ಪಾಕಿಸ್ತಾನದ ಪ್ರಸ್ತುತ ರಾಷ್ಟ್ರೀಯ ಅಸೆಂಬ್ಲಿಯು ಆಗಸ್ಟ್ 12 ರಂದು ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ. ಪಾಕಿಸ್ತಾನದ ಸಂವಿಧಾನದಲ್ಲಿ ನಿಗದಿಪಡಿಸಿದಂತೆ 60 ದಿನಗಳ ಒಳಗೆ ಹೊಸ ಸಾರ್ವತ್ರಿಕ ಚುನಾವಣೆ ನಡೆಸಬೇಕು. ಪ್ರಸ್ತುತ ಸರ್ಕಾರವು ಆಗಸ್ಟ್ 12 ರ ಮೊದಲು ಕೆಳಮನೆಯನ್ನು ವಿಸರ್ಜಿಸಿದರೆ, ಚುನಾವಣೆಯನ್ನು ಮತ್ತಷ್ಟು ಮುಂದೂಡಬಹುದು ಮತ್ತು 90 ದಿನಗಳಲ್ಲಿ ಚುನಾವಣೆ ನಡೆಸಬಹುದು.
ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ದುಬಾರಿ ರಾಜ್ಯ ಉಡುಗೊರೆಗಳನ್ನು ಮಾರಾಟ ಮಾಡಿದ ತೋಶಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ 70 ವರ್ಷದ ಮಾಜಿ ಪ್ರಧಾನಿಯನ್ನು ಲಾಹೋರ್‌ನ ಜಮಾನ್ ಪಾರ್ಕ್ ನಿವಾಸದಿಂದ ಶನಿವಾರ ಬಂಧಿಸಲಾಗಿದೆ. ಅವರನ್ನು ರಾವಲ್ಪಿಂಡಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಕ್ರಮ ಇಮ್ರಾನ್ ಖಾನ್ ಅವರನ್ನು ರಾಜಕೀಯದಿಂದ ಅನರ್ಹಗೊಳಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.