ರಾಷ್ಟ್ರದ ಗಡಿಗಳನ್ನು ಕಾಪಾಡಿಕೊಳ್ಳುವುದು ಭಾರತ-ಅಮೆರಿಕಾದ ಪ್ರಮುಖ ಧ್ಯೇಯ: ಡೊನಾಲ್ಡ್ ಟ್ರಂಪ್
ಗಾಡ್ ಬ್ಲೆಸ್ ಇಂಡಿಯಾ ; ಗಾಡ್ ಬ್ಲೆಸ್ ಅಮೆರಿಕಾ. ಥ್ಯಾಂಕ್ಯೂ.. ಎಂದು ಭಾಷಣ ಮುಗಿಸಿದ ಡೊನಾಲ್ಡ್ ಟ್ರಂಪ್
Team Udayavani, Sep 22, 2019, 9:50 PM IST
ಹ್ಯೂಸ್ಟನ್: ಇಲ್ಲಿನ ಎನ್.ಆರ್.ಜಿ. ಸ್ಟೇಡಿಯಂನಲ್ಲಿ ಬೃಹತ್ ಭಾರತೀಯ ಸಮುದಾಯದ ನಡುವೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಭಾಷಣಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಭಾಗವಹಿಸಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿರುವುದು ವಿಶೇಷವಾಗಿದೆ.
Live from Houston! #HowdyModi https://t.co/C0vY1rsLJh
— Narendra Modi (@narendramodi) September 22, 2019
ಡೊನಾಲ್ಡ್ ಟ್ರಂಪ್ ಭಾಷಣದ ಮುಖ್ಯಾಂಶಗಳು:
– ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಡೊನಾಲ್ಡ್ ಟ್ರಂಪ್.
– ಈ ವೇದಿಕೆಯಲ್ಲಿ ನಾನು ನಿಮ್ಮ ಮುಂದೆ ನಿಂತು ರೋಮಾಂಚನಗೊಂಡಿದ್ದೇನೆ. ಅಮೆರಿಕಾದ ನಿಜವಾದ ಗೆಳೆಯ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಿಮ್ಮನ್ನು ಕಾಣುವುದಕ್ಕೆ ನನಗೆ ಸಂತೋಷವಾಗುತ್ತಿದೆ.
– ನಮ್ಮ ದೇಶಾದ್ಯಂತ ಇರುವ 4 ಮಿಲಿಯನ್ ಅನಿವಾಸಿ ಭಾರತೀಯರ ಪರವಾಗಿ ನಾನು ಮಾನಾಡುತ್ತಿದ್ದೇನೆ. ನಿಮ್ಮ ಶ್ರಮವನ್ನು ನಾವು ಗುರುತಿಸಿದ್ದೇವೆ. ನನ್ನ ಸರಕಾರ ನಿಮ್ಮ ಪರವಾಗಿ ಕೆಲಸ ಮಾಡುತ್ತಿದೆ.
– ಭಾರತಕ್ಕೆ ನಿಜವಾದ ಗೆಳೆಯ ವೈಟ್ ಹೌಸ್, ಯಾವತ್ತೂ ನಾವು ನಿಮ್ಮ ನಿಜವಾದ ಗೆಳೆಯರಾಗಿರುತ್ತೇವೆ. ಅದರಲ್ಲೂ ಪ್ರೆಸಿಡೆಂಟ್ ಟ್ರಂಪ್ ಯಾವತ್ತೂ ಭಾರತದ ನಿಜವಾದ ಗೆಳೆಯ ಎಂಬುದನ್ನು ಪ್ರಧಾನಿ ಮೋದಿ ಅವರೂ ತಿಳಿದಿದ್ದಾರೆ.
– ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ 300 ಮಿಲಿಯನ್ ಭಾರತೀಯರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ.
– ನಾನು ಅಧಿಕಾರಕ್ಕೆ ಬಂದ ಮೆಲೆ 6 ಮಿಲಿಯನ್ ಉದ್ಯೋಗ ಸೃಷ್ಟಿ ಮಾಡಿದ್ದೇನೆ. ಅದರಲ್ಲೂ ಬಹುಪಾಲು ಉದ್ಯೋಗ ಟೆಕ್ಸಾಸ್ ನಲ್ಲಿ ನಿರ್ಮಾಣವಾಗಿದೆ.
– ಅಮೆರಿಕಾದಲ್ಲಿ ನಿರುದ್ಯೋಗ ಮಟ್ಟ ಕಳೆದ 51 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಭಾರತದಲ್ಲೂ ನಿರುದ್ಯೋಗ ಮಟ್ಟ 33% ಕುಸಿತವಾಗಿದೆ. ಕಾರ್ಮಿಕರ ವೇತನ ಸಹಿತ ಸೌಲಭ್ಯಗಳು ಸುಧಾರಿಸಿವೆ.
– ಭಾರತವನ್ನು ಹಿಂದೆಂದಿಗಿಂತಲೂ ಬಲಿಷ್ಟಗೊಳಿಸುವಲ್ಲಿ ಶ್ರಮಿಸುತ್ತಿರುವ ನಿಮ್ಮ ಜೊತೆ ನನ್ನ ಸಹಕಾರ ಯಾವತ್ತೂ ಇದೆ ಎಂದು ಪ್ರಧಾನಿ ಮೋದಿಗೆ ಭರವಸೆ ನೀಡಿದ ಡೊನಾಲ್ಡ್ ಟ್ರಂಪ್.
– ಮುಂದಿನ ದಿನಗಳಲ್ಲಿ ಭಾರತವು ಜಗತ್ತಿನ ಉತ್ಕೃಷ್ಟ ಉತ್ಪನ್ನಗಳನ್ನು ಪಡೆದುಕೊಳ್ಳಲಿದೆ. ಭಾರತವೂ ಸಹ ಅಮೆರಿಕಾದಲ್ಲಿ ಹೂಡಿಕೆ ಮಾಡುತ್ತಿದೆ ಯಾಕೆಂದರೆ ಅಮೆರಿಕಾ ಉದ್ಯಮಿಗಳೂ ಸಹ ಭಾರತದಲ್ಲಿ ಭಾರೀ ಪ್ರಮಾಣದ ಹೂಡಿಕೆಗಳನ್ನು ಮಾಡುತ್ತಿದ್ದಾರೆ.
– ಮುಂಬಯಿಯಲ್ಲಿ ಸದ್ಯದಲ್ಲೇ ಎನ್.ಬಿ.ಎ. ಬಾಸ್ಕೆಟ್ ಬಾಲ್ ಪಂದ್ಯಾಟಗಳು ನಡೆಯಲಿದೆ. ಅದಕ್ಕೆ ನನ್ನನ್ನು ಆಹ್ವಾನಿಸುತ್ತೀರಾ ಎಂದು ಮೋದಿ ಅವರನ್ನು ಪ್ರಶ್ನಿಸಿದ ಟ್ರಂಪ್.
– ‘ಟೈಗರ್ ಟ್ರಯಂಪ್’ ಹೆಸರಿನ ಮೂಲಕ ಎರಡೂ ದೇಶಗಳ ಸೇನಾಪಡೆಗಳ ಮೂರೂ ಪಡೆಗಳು ಜಂಟಿ ಕವಾಯತನ್ನು ನಡೆಸುವ ಮೂಲಕ ಮಿಲಿಟರಿ ಶಕ್ತಿವರ್ಧನೆಯಲ್ಲೂ ಪರಸ್ಪರ ಸಹಕಾರ ನೀಡಿದ್ದವು.
– ನಮ್ಮ ನಮ್ಮ ಗಡಿಗಳನ್ನು ಕಾಪಾಡಿಕೊಳ್ಳುವುದು ಅತೀಮುಖ್ಯವಾದ ಅಂಶವಾಗಿದೆ. ಗಡಿ ರಕ್ಷಣೆ ಎರಡೂ ದೇಶಗಳಿಗೂ ಪ್ರಮುಖವಾದ ಅಂಶವಾಗಿದೆ.
– ನಾವೆಂದೂ ಅಮೆರಿಕಾ ಪ್ರಜೆಗಳ ಪರವಾಗಿರುತ್ತೇವೆ. ಅದು ಇಂಡಿಯನ್ ಅಮೆರಿಕನ್ ಇರಬಹುದು ಆಫ್ರಿಕನ್ ಅಮೆರಿಕನ್ ಇರಬಹುದು ಅಮೆರಿಕಾವಾಸಿಗಳ ರಕ್ಷಣೆ ನನ್ನ ಸರಕಾರದ ಪ್ರಮುಖ ಆದ್ಯತೆ.
– ಗಾಡ್ ಬ್ಲೆಸ್ ಇಂಡಿಯಾ ; ಗಾಡ್ ಬ್ಲೆಸ್ ಅಮೆರಿಕಾ. ಥ್ಯಾಂಕ್ಯೂ.. ಎಂದು ಭಾಷಣ ಮುಗಿಸಿದ ಡೊನಾಲ್ಡ್ ಟ್ರಂಪ್.
ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು:
– ಅಮೆರಿಕಾದ ಆರ್ಥಿಕತೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಬಲ್ಲ ಶಕ್ತಿ ಇರುವ ನಾಯಕ ಡೊನಾಲ್ಡ್ ಟ್ರಂಪ್ ಎಂದು ಕೊಂಡಾಡಿದ ಮೋದಿ.
– ಮಿಸ್ಟರ್ ಪ್ರೆಸಿಡೆಂಟ್ ನೀವು ನನ್ನನ್ನು ನಿಮ್ಮ ಕುಟುಂಬಕ್ಕೆ 2017ರಲ್ಲಿ ಪರಿಚಯಿಸಿದಿರಿ. ಅದರೆ ನಾನಿವತ್ತು ನಿಮಗೆ ನನ್ನ ಕುಟುಂಬವನ್ನು ಪರಿಚಯಿಸುತ್ತಿದ್ದೇನೆ. ಹಾಗೆಯೇ ನಿಮಗೆಲ್ಲಾ ನಾನು ನಮ್ಮ ದೇಶದ ಬಹುದೊಡ್ಡ ಗೆಳೆಯನನ್ನು ಪರಿಚಯಿಸುತ್ತಿದ್ದೇನೆ. ಅವರೇ ಮಿಸ್ಟರ್ ಡೊನಾಲ್ಡ್ ಟ್ರಂಪ್.
ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಇದೀಗ ಪ್ರಮುಖ ಕಾರ್ಯಕ್ರಮ ಪ್ರಾರಂಭಗೊಂಡಿದೆ.
– ಹ್ಯೂಸ್ಟನ್ ಮೇಯರ್ ಸಿಲ್ವೆಸ್ಟರ್ ಟರ್ನರ್ ಅವರು ಮಾತನಾಡಿ ‘ಹೌಡಿ ಮೋದಿ’ ಎಂದು ಹೇಳಲು ನಮಗೆಲ್ಲಾ ಸಂತೋಷವಾಗುತ್ತಿದೆ ಎಂದು ಹೇಳಿದರು.
– ಅಮೆರಿಕಾದ ಸೆನೆಟರ್ ಟೆಡ್ ಕ್ರೂಝ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ಅವರಿಗೆ ಹ್ಯೂಸ್ಟನ್ ನಗರಕ್ಕೆ ಸ್ವಾಗತ ಕೋರಿದರು.
– ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಮುಖ ವೇದಿಕೆಯನ್ನು ಪ್ರವೇಶಿಸುತ್ತಿದ್ದಂತೆ ನೆರೆದಿದ್ದವರೆಲ್ಲಾ ‘ಮೋದಿ ಮೋದಿ’ ಎಂದು ಘೋಷಣೆ ಕೂಗಲಾರಂಭಿಸಿದರು.
– ವೇದಿಕೆಯನ್ನು ಪ್ರವೇಶಿಸಿದ ಮೋದಿ ಅವರು ಮೊದಲಿಗೆ ಸಭಿಕರತ್ತ ಕೈಬೀಸಿ ಸಭೆಗೆ ತಲೆಬಾಗಿ ವಂದಿಸಿದ್ದು ವಿಶೇಷವಾಗಿತ್ತು.
– ಪ್ರಧಾನಿ ಮೋದಿ ಸಮ್ಮುಖದಲ್ಲಿ ಮೋಡಿ ಮಾಡಿದ ‘ವೈಷ್ಣವ ಜನತೋ…’ ಹಾಡು.
The Prime Minister @narendramodi arrives at NRG Stadium. #HowdyModi pic.twitter.com/y18SMONKQT
— Texas India Forum (@howdymodi) September 22, 2019
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.