ಸ್ಫೋಟಗೊಂಡ ಟೈಟಾನಿಕ್ ಸಬ್ಮರ್ಸಿಬಲ್ ನಿಂದ ಮಾನವ ಅವಶೇಷ ಮೇಲಕ್ಕೆತ್ತಿದ ಯುಎಸ್ ಕೋಸ್ಟ್ ಗಾರ್ಡ್
Team Udayavani, Jun 29, 2023, 9:43 AM IST
ವಾಷಿಂಗ್ಟನ್: ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು ನೀರೊಳಗೆ ತೆರಳಿದ್ದ ವೇಳೆ ಸ್ಫೋಟಗೊಂಡ ಸಬ್ ಮರ್ಸಿಬಲ್ ಅವಶೇಷಗಳಿಂದ ಮಾನವ ಅವಶೇಷಗಳನ್ನು ತೆರಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ತಿಳಿಸಿದೆ.
ಉತ್ತರ ಅಟ್ಲಾಂಟಿಕ್ ನ ಮೇಲ್ಮೈಯಿಂದ 12,000 ಅಡಿ (3,658 ಮೀಟರ್‌ಗಳು) ಗಿಂತ ಹೆಚ್ಚು ಸಮುದ್ರದ ತಳದಿಂದ ಸಂಗ್ರಹಿಸಲಾದ ಟೈಟಾನ್ ನ ಅವಶೇಷಗಳು ನ್ಯೂಫೌಂಡ್ ಲ್ಯಾಂಡ್ ನ ಸೇಂಟ್ ಜಾನ್ಸ್ ಗೆ ಬಂದಿವೆ ಎಂದು ಘೋಷಿಸಿದ ಕೆಲ ಸಮಯದ ನಂತರ ಈ ಸುದ್ದಿ ಬಂದಿದೆ. ಕೆನಡಾದ ಕೋಸ್ಟ್ ಗಾರ್ಡ್ ಪಿಯರ್ ನಲ್ಲಿ ಸಬ್ ಮರ್ಸಿಬಲ್ ನ ಅವಶೇಷಗಳನ್ನು ಮೇಲೆ ತರಲಾಯಿತು.
ಐವರು ಸಾವನ್ನಪ್ಪಿದ ಸಬ್ ಮಿರ್ಸಿಬಲ್ ಸ್ಪೋಟದ ತನಿಖೆ ನಡೆಸುತ್ತಿರುವ ತಂಡಕ್ಕೆ ಈ ಅವಶೇಷ ಪತ್ತೆ ದೊಡ್ಡ ಮುನ್ನಡೆಯಾಗಿದೆ. ಆ ಸಬ್ ನ ತುಂಡುಗಳನ್ನು ಈಗ ಯುಎಸ್ ಕೋಸ್ಟ್ ಗಾರ್ಡ್ ಕಟ್ಟರ್ ನಲ್ಲಿ ಹೆಚ್ಚಿನ ವಿಶ್ಲೇಷಣೆಗಾಗಿ ಯುಎಸ್ ಬಂದರಿಗೆ ಕೊಂಡೊಯ್ಯಲಾಗುವುದು.
ಇದನ್ನೂ ಓದಿ:Gruha Jyothi ಯೋಜನೆಗೆ ಭರ್ಜರಿ ರೆಸ್ಪಾನ್ಸ್: 76 ಲಕ್ಷಕ್ಕೂ ಅಧಿಕ ಯಶಸ್ವಿ ನೋಂದಣಿ
“ಯುನೈಟೆಡ್ ಸ್ಟೇಟ್ಸ್ ವೃತ್ತಿಪರ ವೈದ್ಯಕೀಯ ತಂಡ ಎಚ್ಚರಿಕೆಯಿಂದ ಮರುಪಡೆಯಲಾದ ಮಾನವ ಅವಶೇಷಗಳ ಔಪಚಾರಿಕ ವಿಶ್ಲೇಷಣೆಯನ್ನು ನಡೆಸುತ್ತಾರೆ” ಎಂದು ಕೋಸ್ಟ್ ಗಾರ್ಡ್ ಹೇಳಿದೆ.
ಹಡಗಿನಲ್ಲಿ ಬ್ರಿಟಿಷ್ ಪರಿಶೋಧಕ ಹ್ಯಾಮಿಶ್ ಹಾರ್ಡಿಂಗ್, ಫ್ರೆಂಚ್ ಜಲಾಂತರ್ಗಾಮಿ ತಜ್ಞ ಪೌಲ್-ಹೆನ್ರಿ ನರ್ಜಿಯೋಲೆಟ್, ಪಾಕಿಸ್ತಾನಿ-ಬ್ರಿಟಿಷ್ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಮತ್ತು ಸಬ್ ಮರ್ಸಿಬಲ್ ನ ಆಪರೇಟರ್ ಓಷನ್ ಗೇಟ್ ಎಕ್ಸ್ ಪೆಡಿಶನ್ಸ್ ನ ಸಿಇಒ ಸ್ಟಾಕ್‌ಟನ್ ರಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.