ಹಾರ್ವೆ ಚಂಡಮಾರುತ: ಭಾರತೀಯ ವಿದ್ಯಾರ್ಥಿ ಸಾವು
Team Udayavani, Aug 31, 2017, 6:55 AM IST
ಹೋಸ್ಟನ್: ಅಮೆರಿಕದ ಟೆಕ್ಸಾಸ್ ನಗರ ಹಾರ್ವೆ ಚಂಡಮಾರುತದಿಂದ ತತ್ತರಿಸಿರುವ ಸುದ್ದಿ ಹೊರ ಬೀಳುತ್ತಿದ್ದಂತೆಯೇ, ಚಂಡಮಾರುತದಲ್ಲಿ 200 ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವುದಾಗಿ ಮತ್ತು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನುವ ಸುದ್ದಿ ಭಾರತೀಯರನ್ನು ಆತಂಕಕ್ಕೆ ದೂಡಿತ್ತು. ದುರದೃಷ್ಟವೆಂಬಂತೆ ಓರ್ವ ವಿದ್ಯಾರ್ಥಿ ಮೃತರಾಗಿದ್ದಾರೆ. ನಿಕಿಲ್ ಭಾಟಿಯಾ (24) ಮೃತಪಟ್ಟಿರುವ ವಿದ್ಯಾರ್ಥಿ. ಮೂಲತಃ ಜೈಪುರದವರಾದ ಅವರು ಟೆಕ್ಸಾಸ್ ವಿಶ್ವವಿದ್ಯಾ ನಿಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡು ತ್ತಿದ್ದರು. ನಿಕಿಲ್ ಶನಿವಾರ ತಮ್ಮ ಸ್ನೇಹಿತೆ ಶಾಲಿನಿ ಸಿಂಗ್ ಎಂಬವರ ಜತೆ ಬ್ರ್ಯಾನ್ ಸರೋವರದಲ್ಲಿ ಈಜಾಡಲು ತೆರಳಿದ್ದರು.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಇವರು ಸರೋವರಕ್ಕಿಳಿದ ವೇಳೆ ಹಾರ್ವೆ ಚಂಡ ಮಾರುತದ ಸುಳಿವು ಇರಲಿಲ್ಲ. ಏಕಾಏಕಿ ಯಾಗಿ ಚಂಡಮಾರುತ ಅಪ್ಪಳಿಸಿದೆ. ಒಮ್ಮೆಲೇ ಸರೋವರದ ನೀರಿನಲ್ಲಿ ಉಂಟಾದ ಅಬ್ಬರ ಇಬ್ಬರನ್ನೂ ಸರೋವರದ ಆಳಕ್ಕೆ ಒಯ್ದಿದೆ. ಇಬ್ಬರೂ ಅಪಾಯದಲ್ಲಿರುವುದನ್ನು ಅರಿತು ಅಲ್ಲಿದ್ದವರು ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಅವರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಮುಂದಿನ ಚಿಕಿತ್ಸೆ ಕೊಡಿಸಿದ್ದಾರೆ. 3 ದಿನಗಳ ಕಾಲ ಸಾವು ಬದುಕಿನ ಜತೆ ಹೋರಾಡಿದ ನಿಕಿಲ್ ಬುಧವಾರ ನಿಧನ ಹೊಂದಿದರು. ಶಾಲಿನಿ ಸ್ಥಿತಿ ಗಂಭೀರವಾಗಿದೆ . ಈಗಾಗಲೇ ಟೆಕ್ಸಾಸ್ ಅನ್ನು ಅರ್ಧ ಮುಳುಗಿಸಿರುವ ಹಾರ್ವೆ ಚಂಡಮಾರುತ ಇನ್ನೂ ಮುಂದುವರಿಯಲಿದೆ ಎಂದು ಅಲ್ಲಿಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.