ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕಮಲಾಗೆ ನನಗಿರುವಷ್ಟು ಬೆಂಬಲವಿಲ್ಲ; ಬೈಡೆನ್ ಅಧ್ಯಕ್ಷರಾದರೆ ಅಮೆರಿಕದಲ್ಲಿ ಯಾರೂ ಸುರಕ್ಷಿತರಾಗಿರಲ್ಲ
Team Udayavani, Aug 16, 2020, 6:15 AM IST
ವಾಷಿಂಗ್ಟನ್: “ಅಮೆರಿಕದ ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿರುವ ಕಮಲಾ ಹ್ಯಾರಿಸ್‌ಗಿಂತಲೂ ಹೆಚ್ಚು ಭಾರತೀಯರು ನನ್ನೊಂದಿಗಿದ್ದಾರೆ’. ಹೀಗೆಂದು ಹೇಳಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಶನಿವಾರ ನ್ಯೂಯಾರ್ಕ್ ಪೊಲೀಸರ ಸಂಘದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಟ್ರಂಪ್, ಭಾರತೀಯ ಮೂಲದ ಕಮಲಾ ವಿರುದ್ಧ ಕಿಡಿ ಕಾರಿದ್ದಾರೆ. ಡೆಮಾಕ್ರಾಟ್ ಅಧ್ಯಕ್ಷೀಯ ಆಕಾಂಕ್ಷಿ ಜೋ ಬೈಡೆನ್ ಮತ್ತು ಕಮಲಾ ಅವರು ಪೊಲೀಸರ ವಿರುದ್ಧದ ಎಡಪಂಥೀಯ ಸಮರದ ಕೇಂದ್ರ ಬಿಂದುವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಜೋ ಬಿಡೆನ್ ಏನಾದರೂ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕದ ಪ್ರತಿಯೊಂದು ಪೊಲೀಸ್ ಇಲಾಖೆಯನ್ನೂ ಹತ್ತಿಕ್ಕುವಂಥ ಕಾನೂನು ಜಾರಿ ಮಾಡುತ್ತಾರೆ. ಇನ್ನು, ಕಮಲಾ ಹ್ಯಾರಿಸ್ ಅವರು ಬೈಡೆನ್‌ಗಿಂತಲೂ ಅಪಾಯಕಾರಿ. ಅವರು ಭಾರತೀಯ ಮೂಲದವರು. ಅವರಿಗಿಂತ ಹೆಚ್ಚಿನ ಭಾರತೀಯರು ನನ್ನ ಬೆಂಬಲಕ್ಕಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಜತೆಗೆ, ಬಿಡೆನ್ ನಿಮ್ಮ ಘನತೆ ಮತ್ತು ಗೌರವವನ್ನು ಕಸಿದುಕೊಳ್ಳಲಿದ್ದಾರೆ. ಬಿಡೆನ್‌ನ ಅಮೆರಿಕದಲ್ಲಿ ಯಾರೂ ಸುರಕ್ಷಿತವಾಗಿರುವುದಿಲ್ಲ ಎಂದಿದ್ದಾರೆ ಟ್ರಂಪ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.